'ಹರಿಕಥೆ ಅಲ್ಲ ಗಿರಿ ಕಥೆ' ಹೇಳೋಕೆ ತಯಾರಾದ ರಿಷಬ್ ಶೆಟ್ಟಿ!

ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರಕ್ಕೆ ಸಿದ್ದವಾಗಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಹೆಸರಿನ ಈ ಚಿತ್ರವು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ.
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರಕ್ಕೆ ಸಿದ್ದವಾಗಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಹೆಸರಿನ ಈ ಚಿತ್ರವು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಬೆಲ್ ಬಾಟಮ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ತಮ್ಮನ್ನು ತಾವು ಗುರುತಿಸಿಕೊಂಡ ರಿಷಬ್ ಶೆಟ್ಟಿ ಈಗ ಮತ್ತೊಂದು  ಕಾಮಿಡಿ ಎಂಟರ್ಟೈನರ್  ಚಿತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ.

ಚಿತ್ರದ ಮಹೂರ್ತ ಶುಕ್ರವಾರ ಸರಳವಾಗಿ ನೆರವೇರಿದೆ.  ಈ ಸಂದರ್ಭದಲ್ಲಿ ಪ್ರೊಡಕ್ಷನ್ ವಿವರಗಳು ಸಹ ಬಹಿರಂಗಪಡಿಸಲಾಗಿದ್ದು ಚಿತ್ರವನ್ನು ಎನ್ ಸಂದೇಶ್ ನಿರ್ಮಿಸಿದರೆ  ಸಂಪೂರ್ಣ ಯೋಜನೆಯನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ವಹಿಸಲಿದೆ. ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಹೊರತಾಗಿ ಪ್ರಮೋದ್ ಶೆಟ್ಟಿ ಸಹ ಮುಖ್ಯ ಪಾತ್ರಧಾರಿಯಾಗಿರಲಿದ್ದಾರೆ. ಅಲ್ಲದೆ ಚಿತ್ರದಲ್ಲಿ ಕೆಲವು ಹಿಸ ನಟ ನಟಿಯರೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಜುಲೈನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಮೊದಲು ತಂಡವು ನಾಯಕಿಯ ಹುಡುಕಾಟದಲ್ಲಿದೆ. ಹರಿಕಥೆ ಅಲ್ಲ ಗಿರಿ ಕಥೆ ಗೆ ಸಂಗೀತ ಸಂಯೋಜಕ ಅಜನೇಶ್ ಬಿ ಲೋಕನಾಥ್ ಸಂಗೀತ ನೀಡಿದ್ದರೆ ರಂಗನಾಥ್ ಛಾಯಾಗ್ರಹಣವಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com