ಚಿತ್ರೋದ್ಯಮದಲ್ಲಿ ಸ್ವಜನಪಕ್ಷಪಾತ: ಸ್ಯಾಂಡಲ್ ವುಡ್ ನಟ, ನಿರ್ಮಾಪಕರು ಹೇಳುವುದು ಹೀಗೆ...

ಸ್ಟಾರ್ ನಟ ನಟಿಯರು ಬಂದರೆಂದರೆ ಕಾಲುಗಳ ಮೇಲೆ ಬೀಳುವ ಅಭಿಮಾನಿಗಳು, ಕೆಂಪು ರತ್ನಗಂಬಳಿ ಸ್ವಾಗತ ಎಲ್ಲ ಇರುವುದು ಸಾಮಾನ್ಯ. ಆದರೆ ಆಫ್-ಸ್ಕ್ರೀನ್ ರಿಯಾಲಿಟಿ  ಬೇರೆಯೇ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದೊಂದಿಗೆ ಇದೀಗ ಹೊಸ ವಿಚಾರವೊಮ್ದು ಎಲ್ಲೆಡೆ ಹರಿದಾಡಲು ಪ್ರಾರಂಭವಾಗಿದೆ.  ಅನೇಕ ನಟರು ಹೇಳುವಂತೆ ಸ್ವಜನಪಕ್ಷಪಾತ ಎಲ್ಲೆಡೆ ತಾಂಡವವಾಡುತ್ತಿದೆ
ಮಾನ್ವಿತಾ ಕಾಮತ್
ಮಾನ್ವಿತಾ ಕಾಮತ್

ಸ್ಟಾರ್ ನಟ ನಟಿಯರು ಬಂದರೆಂದರೆ ಕಾಲುಗಳ ಮೇಲೆ ಬೀಳುವ ಅಭಿಮಾನಿಗಳು, ಕೆಂಪು ರತ್ನಗಂಬಳಿ ಸ್ವಾಗತ ಎಲ್ಲ ಇರುವುದು ಸಾಮಾನ್ಯ. ಆದರೆ ಆಫ್-ಸ್ಕ್ರೀನ್ ರಿಯಾಲಿಟಿ  ಬೇರೆಯೇ ಇದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದೊಂದಿಗೆ ಇದೀಗ ಹೊಸ ವಿಚಾರವೊಮ್ದು ಎಲ್ಲೆಡೆ ಹರಿದಾಡಲು ಪ್ರಾರಂಭವಾಗಿದೆ.  ಅನೇಕ ನಟರು ಹೇಳುವಂತೆ ಸ್ವಜನಪಕ್ಷಪಾತ ಎಲ್ಲೆಡೆ ತಾಂಡವವಾಡುತ್ತಿದೆ. 

ಕೇವಲ ಬಾಲಿವುಡ್ ಮಾತ್ರವೇ ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿಯೂ ಸಹ ಇಂತಹಾ ಸಮಸ್ಯೆ ಇದೆ ಎಂದು ನಟಿ ಮಾನ್ವಿತಾ ಕಾಮತ್ ಹೇಳುತ್ತಾರೆ, ಅಲ್ಲಿ ಒಬ್ಬ ಕಲಾವಿದ ಆಯ್ಕೆಗೆ ಆಡಿಷನ್ ನೀಡುವ ಸಮಯದಿಂದಲೇ ಇದು ಪ್ರಾರಂಬವಾಗುತ್ತದೆ. . "ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಎಲ್ಲರೂ ಇಲ್ಲಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ" ಎಂದು ಕೆಂಡಸಂಪಿಗೆ ನಟಿ ಹೇಳಿದ್ದಾರೆ.

ಬಿ-ಟೌನ್‌ನಲ್ಲಿಯೂ ಅದನ್ನು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸ್ವಜನ ಪಕ್ಷಪಾತ ಉತ್ತಮ ಪಿಆರ್ ಇಲ್ಲದೆ ಅಲ್ಲಿ ಒಂದು ಜಾಗವನ್ನು ಕಂಡುಕೊಳ್ಳುವುದು ಬಹು ಕಷ್ಟ ಎಂದು ನಟಿ ಹೇಳಿದ್ದಾರೆ.ಅವರು ಯಶ್ ರಾಜ್ ಫಿಲ್ಮ್ ಗಾಗಿ ಮಾಡಿದ್ದ  ಆಡಿಷನ್ ಅನ್ನು ನೆನಪಿಸಿಕೊಂಡಿದ್ದು  "ನಾನು ಉತ್ತಮ ನಟಿ ಎಂದು ನಿರ್ದೇಶಕರು ಹೇಳಿದ್ದರು. ಆದರೆ ಬೇರೊಬ್ಬ ನಟಿ ಪ್ರಭಾವಶಾಲಿಯಾಗಿದ್ದ ಕಾರಣ  ನನಗಿಂತ ಬೇರೊಬ್ಬರನ್ನು ಆಯ್ಕೆ ಮಾಡಲಾಗಿತ್ತು. 

ಮುಂಬೈ ಮೂಲದ ನಟ ಠಾಕೂರ್ ಅನೂಪ್ ಸಿಂಗ್, ಎಲ್ಲೆಡೆ ಸ್ವಜನಪಕ್ಷಪಾತವಿದೆ ಎಂದು ಹೇಳುತ್ತಾರೆ. "ಸ್ಟಾರ್ ಕುಟುಂಬದ ಕುಡಿ ಹೆಚ್ಚಿನ ಅವಕಾಶ ಪಡೆಯಲಿದ್ದಾರೆ. ಆದರೆ ಹೊರಗಿನಿಂದ ಬಂದವರಿಗೆ ಕೇವಲ ಒಂದೇ ಅವಕಾಶ ಸಿಕ್ಕಲಿದೆ." ಎಂದು ಅವರು ಹೇಳುತ್ತಾರೆ. ಕೊನೆಯ ನಿಮಿಷದಲ್ಲಿ ಪಾತ್ರಗಳನ್ನು ಕೈಬಿಡುವುದರಿಂದ ಅಥವಾ ಯೋಜನೆಗಳು ವಿಳಂಬವಾಗುವುದರಿಂದಲೂ ಒತ್ತಡ ಬರಬಹುದು.ಕಮಾಂಡೋ 2 (ಹಿಂದಿ) ಮತ್ತು ಉದ್ಗರ್ಷ, ಯಜಮಾನ ಮತ್ತು ರೋಗ್ (ಕನ್ನಡ) ಚಿತ್ರದಲ್ಲಿ ನಟಿಸಿರುವ ನಟ ಸ್ಯಾಂಡಲ್ ವುಡ್ ನಲ್ಲಿನ ಅನುಭವವನ್ನೂ ಹಂಚಿಕೊಂಡಿದ್ದಾರೆ. 

ತಾಳ್ಮೆ ಮತ್ತು ಕಠಿಣ ಪರಿಶ್ರಮ ಈ ಕ್ಷೇತ್ರದಲ್ಲಿ ಬದುಕಲು ಪೂರ್ವಾಪೇಕ್ಷಿತವಾಗಿದೆ ಎಂದು ನಟ ಪೃಥ್ವಿ ಅಂಬಾ ನಂಬಿದ್ದಾರೆ. ದಿಯಾ ಚಿತ್ರದಲ್ಲಿ ಆದಿ ಪಾತ್ರಕ್ಕಾಗಿ ಅವರು ರಾತ್ರೋರಾತ್ರಿ ಜನಪ್ರಿಯವಾಗಿದ್ದರು ಎಂದು ಹೇಳಲಾಗಿದೆ. ಆದರೆ ಈ ಕಲಾವಿದ ದಿಯಾಗೆ ಮುನ್ನ ನಾಲ್ಕು ಧಾರಾವಾಹಿಗಳು, 10 ತುಳು ಚಲನಚಿತ್ರಗಳು ಮತ್ತು ನಾಲ್ಕು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು! ಗಾಡ್ ಫಾದರ್ ಇಲ್ಲದವರಿಗೆ ಒಂದು ಒಳ್ಳೇ ಸ್ಥಳ ಹುಡುಕಿಕೊಳ್ಲಲು ಹೋಆಟ ಅನಿವಾರ್ಯ. ಎಂದು ಪೃಥ್ವಿ ಹೇಳಿದ್ದಾರೆ. "ನಾನು ಎಲ್ಲಿದ್ದೇನೆ ಎಂದು ಕಂಡುಕೊಳ್ಳಲು  11 ವರ್ಷಗಳು ಬೇಕಾಯಿತು. "ಹೊರಗಿನವನಿಗೆ, ಅಡೆತಡೆಗಳು ಇವೆ. ಮೂರು ವರ್ಷಗಳ ನಂತರ ಸರಿಯಾದ ಅವಕಾಶ ಸಿಗದಿದ್ದರಿಂದ ಅನುಭವಿಸುವ ದುಃಖವನ್ನು ಜನರು ನನ್ನಲ್ಲಿ ತಿಳಿಸುತ್ತಾರೆ. ನಾನು 12 ವರ್ಷಗಳಿಂದ ಕಷ್ಟಪಡುತ್ತಿದ್ದೇನೆ ಎಂದು ನಾನು ಅವರಿಗೆ ಹೇಳುತ್ತೇನೆ, ”

 ಯಾವುದೇ ಉದ್ಯಮದಲ್ಲಿ ಒತ್ತಡವು ಒಂದು ಭಾಗವಾಗಿದೆ ಎಂದು ಚಲನಚಿತ್ರ ನಿರ್ಮಾಪಕ ರಮೇಶ್ ಅರವಿಂದ್ ಹೇಳುತ್ತಾರೆ. "ನಟರಿಗೆ, ಅವರು ಹೆಚ್ಚು ಪ್ರಚಾರದಲ್ಲಿದ್ದಲ್ಲಿ  ಟೀಕೆಗಳು ಸುಲಭವಾಗಿ ಪರಿಣಾಮ ಬೀರಬಹುದು" ಎಂದು ಅವರು ಹೇಳುತ್ತಾರೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com