ಮಗುವಿಗೆ ಜನ್ಮಕೊಟ್ಟಿದ್ದೇನೆನ್ನುವುದು ಸುಳ್ಳು! ನಕಲಿ ಸುದ್ದಿ ಪ್ರಕಟಿಸಿದ ಮಾದ್ಯಮಗಳ ವಿರುದ್ಧ ಬಿಗ್ ಬಾಸ್ ಖ್ಯಾತಿಯ ನೇಹಾ ಗೌಡ ಕಿಡಿ

ಬಿಗ್ ಬಾಸ್ ಕನ್ನಡ ಸೀಸನ್ 3 ರ ಖ್ಯಾತಿಯ ನೇಹಾ ಗೌಡ ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ  ಹೆಣ್ಣುಮಗುವುಗೆ ಜನ್ಮನೀಡಿದ್ದಾರೆ ಎಂಬ ಸುದ್ದಿ ಮಾದ್ಯಮಗಳಲ್ಲಿ ಹರಿದಾಡಿತ್ತು. ಅಲ್ಲದೆ ಅವರೇ ಹಾಕಿದ್ದರೆನ್ನಲಾದ ಮಗುವಿನ ಫೋಟೋ ಸಹ ಸಾಮಾಜಿಕ ತಾಣದಲ್ಲಿ ಹರಿದಾಡಿದೆ. ಆದರೆ ಈ ವರದಿ ಒಂದು ಸುಳ್ಳು ಸುದ್ದಿಯಾಗಿದ್ದು ಈ ಬಗ್ಗೆ ನಟಿ ಸಾಮಾಜಿಕ ತಾಣದ ಮೂಲಕವೇ ಸ್ಪಷ್ಟನೆ ನ

Published: 28th June 2020 10:18 PM  |   Last Updated: 28th June 2020 10:18 PM   |  A+A-


ಬಿಗ್ ಬಾಸ್ ಖ್ಯಾತಿಯ ನೇಹಾ ಗೌಡ

Posted By : Raghavendra Adiga
Source : Online Desk

ಬಿಗ್ ಬಾಸ್ ಕನ್ನಡ ಸೀಸನ್ 3 ರ ಖ್ಯಾತಿಯ ನೇಹಾ ಗೌಡ ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ  ಹೆಣ್ಣುಮಗುವುಗೆ ಜನ್ಮನೀಡಿದ್ದಾರೆ ಎಂಬ ಸುದ್ದಿ ಮಾದ್ಯಮಗಳಲ್ಲಿ ಹರಿದಾಡಿತ್ತು. ಅಲ್ಲದೆ ಅವರೇ ಹಾಕಿದ್ದರೆನ್ನಲಾದ ಮಗುವಿನ ಫೋಟೋ ಸಹ ಸಾಮಾಜಿಕ ತಾಣದಲ್ಲಿ ಹರಿದಾಡಿದೆ. ಆದರೆ ಈ ವರದಿ ಒಂದು ಸುಳ್ಳು ಸುದ್ದಿಯಾಗಿದ್ದು ಈ ಬಗ್ಗೆ ನಟಿ ಸಾಮಾಜಿಕ ತಾಣದ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ. ತನ್ನ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಸುದ್ದಿ ಅಥವಾ ಮಾಹಿತಿಯ ಪ್ರಕಟಣೆಗೆ ಮುನ್ನ ತನ್ನನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದ್ದಾರೆ. 

ಮನರಂಜನಾ ಪೋರ್ಟಲ್ ವರದಿ ಮಾಡಿದಂತೆಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ನೇಹಾ ಗೌಡ ಅವರು ಹೀಗೆ ಬರೆದಿದ್ದಾರೆ, "ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುವ ಲೇಖನದ ಬಗ್ಗೆ ಮಾಹಿತಿ ಒದಗಿಸಿದ್ದಕ್ಕಾಗಿ  ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ಅಂತಹ ಲೇಖನಗಳು  ಪ್ರಕಟವಾಗಿದ್ದಾಗ ಕೆಲ ಮೂಲಭೂತ ಕಾರಣದಿಂಡ ಬಹುಬೇಗನೇ ವೈರಲ್ ಆಗುತ್ತದೆ. ಆದರೆ ತಮ್ಮ ಸುದ್ದಿಗಳನ್ನು ವೈರಲ್ ಮಾಡುವ ಉದ್ದೇಶದಿಂದ ಅವರೇಕೆ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಾರೆ ಎನ್ನುವುದು ನಾನು ತಿಳಿದಿಲ್ಲ.

"ಮತ್ತೊಮ್ಮೆ ನಾನಿದರ ಬಗ್ಗೆ ಸ್ಪಷ್ಟಪಡಿಸುತ್ತೇನೆ. ಇಂತಹಾ ನಕಲಿ ಸುದ್ದಿ ವೈರಲ್ ಆದಾಗ ಆತ ಅಥವಾ ಆಕೆಯ ಮನಸ್ಸಿನ ಮೇಲೆ ಯಾವ ಪರಿಣಾಮವಾಗುತ್ತದೆ ಎನ್ನುವುದು ನಿಮಗೆ ಅರಿವಿಲ್ಲ ಯಾರನ್ನಾದರೂ ತೊಂದರೆಗೆ ಸಿಲುಕಿಸುವ ಆಲೋಚನೆಗಳು ಕೆಲವೊಮ್ಮೆ ಅಪಾಯಕಾರಿಯಾಗಲಿದೆ. ಅಂತಹಾ ಸಾಕಷ್ಟು ಪ್ರಕರಣಗಳನ್ನು ನಾನೀಗಾಗಲೇ ಕಂಡಿದ್ದೇನೆ. ನಾವೆಲ್ಲರೂ ಬದುಕಲು, ಬದುಕಿಸಲು ಪ್ರಯತ್ನ ಮಾಡೋಣ. ಮಾಧ್ಯಮ ಬರಹಗಾರರು ನನ್ನನ್ನು ಸಂಪರ್ಕಿಸಿದಾಗ ನಾನು ಯಾವಾಗಲೂ  ಅವರನ್ನು ಪ್ರೋತ್ಸಾಹಿಸುತ್ತೇನೆ. ದಯವಿಟ್ಟು ಭವಿಷ್ಯದಲ್ಲಿ ನನ್ನನ್ನು ಸಂಪರ್ಕಿಸಿ ಮತ್ತು ನಿಜವಾದ ಸುದ್ದಿಯನ್ನಷ್ಟೇ ಪ್ರಕಟಿಸಲು ಕೇಳಿಕೊಳ್ಳುತ್ತೇನೆ. ಅದರಿಂದ ನನಗೆ ಸಂತೋಷವಾಗುತ್ತದೆ.

ಇದೇ ವೇಳೆ ನೇಹಾ ಗೌಡ ಅವರು ತಮ್ಮ ಬಗ್ಗೆ ನಕಲಿ ಸುದ್ದಿಗಳನ್ನು ಬರೆದಿದ್ದಕ್ಕಾಗಿ ಮಾಧ್ಯಮಗಳನ್ನು ದೂಷಿಸಿದರು ಮತ್ತು ಅಂತಹ ಸುದ್ದಿಗಳನ್ನು ವರದಿ ಮಾಡುವಾಗ ಬರಹಗಾರರು ಸ್ವಲ್ಪ ಜಾಗರೂಕತೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. 

ಬಿಗ್ ಬಾಸ್ ಕನ್ನಡ 3 ಸ್ಪರ್ಧಿಯಾಗಿದ್ದ ನೇಹಾ  2018 ರಲ್ಲಿ ಚಂದನ್ ಗೌಡ ಅವರೊಂದಿಗೆ ವಿವಾಹವಾಗಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ  ನಟಿ ಕಳೆದ ಮಾರ್ಚ್ ನಲ್ಲಿ ಭಾರತಕ್ಕೆ ಹಿಂತಿರುಗಿದ್ದಾರೆ.  ಅಮೆರಿಕಾದಿಂದ ಬಂದ ಕೆಲ ದಿನಗಳ ಕಾಲ ಸ್ವಯಂ ಕ್ವಾರಂಟೈನ್ ನಲ್ಲಿದ್ದರು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp