ಗುರು ದೇಶಪಾಂಡೆ ನಿರ್ದೇಶನದ ಠಾಕ್ರೆ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಬದಲಿಗೆ ಹೊಸ ಮುಖ!

ಮೂರು ವರ್ಷಗಳ ಹಿಂದೆ ಮುಹೂರ್ತ ಮಾಡಿದ್ದ ಠಾಕ್ರೆ ಚಿತ್ರ ಇದೀಗ ಸೆಟ್ಟೇರುತ್ತಿದ್ದು ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಅವರು ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಬದಲಿಗೆ ಮತ್ತೊಬ್ಬ ನಟನನ್ನು ಕರೆತರಲಿದ್ದಾರೆ. 

Published: 29th June 2020 11:32 AM  |   Last Updated: 29th June 2020 12:01 PM   |  A+A-


Ravichandran

ರವಿಚಂದ್ರನ್

Posted By : Vishwanath S
Source : The New Indian Express

ಮೂರು ವರ್ಷಗಳ ಹಿಂದೆ ಮುಹೂರ್ತ ಮಾಡಿದ್ದ ಠಾಕ್ರೆ ಚಿತ್ರ ಇದೀಗ ಸೆಟ್ಟೇರುತ್ತಿದ್ದು ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಅವರು ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಬದಲಿಗೆ ಮತ್ತೊಬ್ಬ ನಟನನ್ನು ಕರೆತರಲಿದ್ದಾರೆ. 

ನಟ, ನಿರ್ಮಾಪಕರು ಮತ್ತು ನಿರ್ದೇಶಕರು ಬೇರೆ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಠಾಕ್ರೆ ಚಿತ್ರ ಮುಂದಕ್ಕೆ ಹೋಗಬೇಕಾಯಿತು ಎಂದು ನಿರ್ದೇಶಕ ಗುರು ದೇಶಪಾಂಡೆ ಅವರು ಹೇಳಿದ್ದಾರೆ. 

"ಕಳೆದ ಮೂರು ವರ್ಷಗಳಿಂದ ನಾನು ಕೆಲಸ ಮಾಡುತ್ತಿರುವ ಠಾಕ್ರೆ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ನಾನು ಸ್ಕ್ರಿಪ್ಟ್ನಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಹೀಗಾಗಿ ಹೊಸ ನಟನ ಬಗ್ಗೆ ಚಿಂತಿಸಿದ್ದು  ಹೊಸ ಮುಖದ ಹುಡುಕಾಟದಲ್ಲಿದ್ದೇವೆ. ಇನ್ನು ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮ್ಯಾಕ್‌ಬೆತ್ ಹಿರಿಯರ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಗುರು ದೇಶಪಾಂಡೆ ಹೇಳಿದ್ದಾರೆ. 

ಪಡ್ಡೆಹುಲಿ ನಿರ್ದೇಶಕರು ಈ ಹಿಂದೆ ಪ್ರಜ್ವಲ್ ದೇವರಾಜ್ ಅವರೊಂದಿಗೆ ಜಂಟಲ್ಮ್ಯಾನ್ ಚಿತ್ರದ ನಿರ್ಮಾಪಕರಾಗಿ ಸಹಯೋಗ ಮಾಡಿದ್ದರು. ಇದನ್ನು ಜಡೇಶ್ ಕುಮಾರ್ ನಿರ್ದೇಶಿಸಿದ್ದರು.

ಇದು ನನ್ನ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ನಾವು ಶೀಘ್ರದಲ್ಲೇ ಪ್ರಮುಖ ನಾಯಕ ಮತ್ತು ತಾರಾಗಣವನ್ನು ಬಹಿರಂಗಪಡಿಸುತ್ತೇವೆ ಎಂದು ನಿರ್ದೇಶಕರು ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp