ಬೇರೆ ಚಿತ್ರದ ಕಾರ್ಯಕ್ರಮದಲ್ಲಿ ಬಾಯಿತಪ್ಪಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ರಿವೀಲ್ ಮಾಡಿದ ಚಿರು!

ಬೇರೆ ಚಿತ್ರವೊಂದರ ಕಾರ್ಯಕ್ರಮದಲ್ಲಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ಮೆಗಾ ಸ್ಟಾರ್ ಚಿರಂಜೀವಿ ರಿವೀಲ್ ಮಾಡಿದ ಘಟನೆ ನಡೆದಿದೆ.

Published: 04th March 2020 03:37 PM  |   Last Updated: 04th March 2020 03:37 PM   |  A+A-


Chiranjeevi’s next titled Acharya

ಸಂಗ್ರಹ ಚಿತ್ರ

Posted By : srinivasamurthy
Source : Online Desk

ವಿಶಾಖಪಟ್ಟಣಂ: ಬೇರೆ ಚಿತ್ರವೊಂದರ ಕಾರ್ಯಕ್ರಮದಲ್ಲಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ಮೆಗಾ ಸ್ಟಾರ್ ಚಿರಂಜೀವಿ ರಿವೀಲ್ ಮಾಡಿದ ಘಟನೆ ನಡೆದಿದೆ.

ಹೌದು.. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಬೇರೆ ಚಿತ್ರವೊಂದರ ಕಾರ್ಯಕ್ರಮದಲ್ಲಿ ತಮ್ಮ ಚಿತ್ರದ ಶೀರ್ಷಿಕೆಯನ್ನೇ ಬಾಯಿ ತಪ್ಪಿ ಹೇಳಿದ್ದಾರೆ. ಇತ್ತೀಚೆಗೆ ಚಿರಂಜೀವಿ, ಚಂದ್ರು ಮುದ್ದು ನಿರ್ದೇಶನದ 'ಓ ಪಿಟ್ಟ ಕಥಾ' ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರವೊಂದಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಮಾರಂಭದಲ್ಲಿ ಚಿರು 'ಓ ಪಿಟ್ಟ ಕಥಾ' ಸಿನಿಮಾದ ಬಗ್ಗೆ ಮತ್ತು ಹೊಸ ನಟರಲ್ಲಿರಬೇಕಾದ ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ತಮ್ಮ ಹೊಸ ಸಿನಿಮಾದ ಟೈಟಲ್ ಅನ್ನೇ ಬಾಯಿತಪ್ಪಿ ಹೇಳಿ ಬಿಟ್ಟಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡುತ್ತ ಚಿರಂಜೀವಿ ತನ್ನ ಹೊಸ ಸಿನಿಮಾದ ಟೈಟಲ್ 'ಆಚಾರ್ಯ' ಎಂದು ಹೇಳಿದ್ದಾರೆ. ಈ ವಿಚಾರ ಕೇಳಿದ ವೇದಿಕೆ ಮೇಲಿದ್ದ ಗಣ್ಯರು ಇತರೆ ನಟರು ಮಾತ್ರವಲ್ಲದೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳು ಕೂಡ ಕೂಗಿ ಹರ್ಷ ವ್ಯಕ್ತಪಡಿಸಿದರು.

ಖೈದಿ ನಂಬರ್ 150 ಮೂಲಕ ಚಿತ್ರರಂಗಕ್ಕೆ ವಾಪಸ್ ಆಗಿದ್ದ ಚಿರು ಇತ್ತೀಚಿಗಷ್ಟೆೇ ಸೈರಾ ನರಸಿಂಹ ರೆಡ್ಡಿ ಮೂಲಕ ಬಿಗ್ ಹಿಟ್ ನೀಡಿದ್ದರು. ಈಗ 152ನೇ ಸಿನಿಮಾದಲ್ಲಿ ಚಿರು ಬ್ಯುಸಿಯಾಗಿದ್ದು, ಚಿರಂಜೀವಿ 152ನೇ ಸಿನಿಮಾಗೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಒಂದು ದೊಡ್ಡ ಕಾರ್ಯಕ್ರಮದ ಮೂಲಕ ನಿರ್ದೇಶಕ ಕೊರಟಾಲ ರವಿ ಚಿತ್ರದ ಶೀರ್ಷಿಕೆಯನ್ನು ರಿವೀಲ್ ಮಾಡಬೇಕು ಎಂದುಕೊಂಡಿದ್ದರಂತೆ. ಇದೇ ಕಾರಣಕ್ಕೆ ಚಿತ್ರದ ಕುರಿತು ಎಲ್ಲಿಯೂ ಮಾಹಿತಿ ಬರದಂತೆ ನಿರ್ದೇಶಕರು ಎಚ್ಚರ ವಹಿಸಿದ್ದರು. ಆದರೆ ಚಿರಂಜೀವಿ ಬಾಯಿತಪ್ಪಿ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಚಿರು ಬಾಯಿಂದ ದಿಢೀರನೆ ಚಿತ್ರದ ಶೀರ್ಷಿಕೆ ಬಹಿರಂಗವಾಗಿರುವುದು ಚಿತ್ರತಂಡಕ್ಕೆ ನಿರಾಸೆ ಮೂಡಿಸಿದೆ. 

ತಂಡದ ಬಳಿ ಕ್ಷಮೆ ಕೇಳಿದ ಚಿರಂಜೀವಿ
ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳಾದರು ಚಿತ್ರತಂಡ ಟೈಟಲ್ ಅನ್ನು ರಿವೀಲ್ ಮಾಡದೆ ಗುಟ್ಟಾಗಿ ಕಾಪಾಡಿಕೊಂಡು ಬಂದಿತ್ತು. ಚಿರಂಜೀವಿ ಬಾಯಿಂದನೆ ಬಹಿರಂಗವಾಗಿರುವುದ ಚಿತ್ರಡಕ್ಕೆ ಕೊಂಚ ಬೇಸರವೊಂಟು ಮಾಡಿದೆ. ದೊಡ್ಡ ಕಾರ್ಯಕ್ರಮ ಮಾಡಿ ಟೈಟಲ್ ಅನನ್ನು ಅದ್ಧೂರಿಯಾಗಿ ರಿವೀಲ್ ಮಾಡಬೇಕು ಎಂದುಕೊಂಡಿದ್ದ ತಂಡಕ್ಕೆ ನಿರಾಸೆಯಾಗಿದ್ದರಿಂದ ಚಿರಂಜೀವಿ ಮಾಡಿದ ತಪ್ಪಿಗೆ ಚಿತ್ರತಂಡ ಬಳಿ ಕ್ಷಮೆ ಕೇಳಿದ್ದಾರಂತೆ. ಸದ್ಯ ಚಿರಂಜೀವಿ ಅಂಡ್ ಟೀಂ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಅಡ್ಡಾದಿಂದ ಚಿರಂಜೀವಿ ಲುಕ್ ರಿವೀಲ್ ಆಗಿದೆ. ಚಿರಂಜೀವಿ ಮಧ್ಯವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಕ್ಸಲೀಯ ಸಮಾಜ ಸುಧಾರಕನಾಗಿ ಬದಲಾಗುವ ಪಾತ್ರವಂತೆ. ಚಿರುಗೆ ನಾಯಕಿಯಾಗಿ ತ್ರಿಷಾ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಖಳ ನಟನಾಗಿ ಸೋನು ಸೂದ್ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp