ರಾಜ್ಯ ಬಜೆಟ್ 2020: ನಟ ಯಶ್ ಬೇಡಿಕೆ ಬೆನ್ನಲ್ಲೇ ಬೆಂಗಳೂರಿನಲ್ಲಿ 500 ಕೋಟಿ ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಬಿಎಸ್ವೈ ಅಸ್ತು!

ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಳಿ ಬೆಂಗಳೂರಿನಲ್ಲಿ ನಮಗೊಂದು ಅತ್ಯುತ್ತನ ಫಿಲಂ ಸ್ಟುಡಿಯೋವನ್ನು ಕಟ್ಟಿಕೊಡಿ ಜಗತ್ತು ನಮ್ಮತ್ತ ತಿರುಗುವಂತೆ ಮಾಡುತ್ತೇವೆ ಎಂದು ಹೇಳಿದ್ದರು.
ಯಶ್-ಬಿಎಸ್ ವೈ
ಯಶ್-ಬಿಎಸ್ ವೈ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಳಿ ಬೆಂಗಳೂರಿನಲ್ಲಿ ನಮಗೊಂದು ಅತ್ಯುತ್ತನ ಫಿಲಂ ಸ್ಟುಡಿಯೋವನ್ನು ಕಟ್ಟಿಕೊಡಿ ಜಗತ್ತು ನಮ್ಮತ್ತ ತಿರುಗುವಂತೆ ಮಾಡುತ್ತೇವೆ ಎಂದು ಹೇಳಿದ್ದರು.

ಇದೀಗ ಬಿಎಸ್ ಯಡಿಯೂರಪ್ಪನವರು 2020ರ ರಾಜ್ಯ ಬಜೆಟ್ ಮಂಡಿಸಿದ್ದು ಬರೋಬ್ಬರಿ 500 ಕೋಟಿ ರೂ.ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಬೆಂಗಳೂರಿನಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಚಾಲನಾ ಕಾರ್ಯಕ್ರಮದ ಸಂದರ್ಭದಲ್ಲಿ ಯಶ್ ಬೆಂಗಳೂರಿನಲ್ಲಿ ಫಿಲಂ ಸಿಟಿಯ ಬೇಡಿಕೆ ಇಟ್ಟಿದ್ದರು. ನಮ್ಮ ಹುಡುಗರಿಗೆ ಶಕ್ತಿಯಿದೆ. ಸ್ವಲ್ಪ ಹುರಿದುಂಬಿಸಬೇಕು ಎಂದು ಹೇಳಿದ್ದರು. 

ಕರ್ನಾಟಕದಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ, ನಮ್ಮ ಹುಡುಗರಿಗೆ ಶಕ್ತಿ ಇದೆ. ಮಾಡಬೇಕು ಎಂಬ ಛಲವಿದೆ. ಅದಕ್ಕೆ ನೀವು ಸಹಕಾರ ನೀಡಬೇಕು. ಕಾಲಕಾಲದಿಂದ ಈ ಸ್ಟುಡಿಯೋ ವಿಚಾರ ಮುಂದೆ ಹೋಗುತ್ತಲೆ ಇದೆ. ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಸ್ಟುಡಿಯೋಗಾಗಿ ಬೇರೆ ರಾಜ್ಯಗಳತ್ತ ಹೋಗಿ ಹೋಗಿ ಸಾಕಾಗಿದೆ. ಹಾಗಾಗಿ ನಮ್ಮಲ್ಲೇ ಒಂದು ಸ್ಟುಡಿಯೋ ಕಟ್ಟಿಸಿ ನಮ್ಮ ಉದ್ಯಮವು ಬೆಳೆಯುತ್ತೆ ಎಂದು ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com