ನಾಳೆ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಬರ್ತಡೇ, ಮಡದಿ ಜನ್ಮದಿನಾಚರಣೆಗೆ ಯಶ್ ಮಾಡಿರೋ ಮನವಿ ಹೀಗಿದೆ

ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಗೆ ನಾಳೆ (ಶನಿವಾರ)35ನೇ ಜನ್ಮದಿನದ ಸಂಭ್ರಮ. "ಮೊಗ್ಗಿನ ಮನಸು" ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ಅಂದಿನಿಂದಲೂ ಪ್ರತಿ ವರ್ಷ ತಮ್ಮ ಅಭಿಮಾನಿಗಳೊಡನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಮಾತ್ರ ಹಾಗಾಗುತ್ತಿಲ್ಲ. ಕಾರಣ ಈ ಬಾರಿ ರಾಧಿಕಾ ತಮ್ಮ ಕುಟುಂಬದೊಡನೆ ಸರಳವಾಗಿ ಆಚರಿಸಿಕೊಳ್ಲುತ್ತಾರೆ ಎ
ಯಶ್-ರಾಧಿಕಾ ಜೋಡಿ
ಯಶ್-ರಾಧಿಕಾ ಜೋಡಿ

ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಗೆ ನಾಳೆ (ಶನಿವಾರ)35ನೇ ಜನ್ಮದಿನದ ಸಂಭ್ರಮ. "ಮೊಗ್ಗಿನ ಮನಸು" ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟಿ ಅಂದಿನಿಂದಲೂ ಪ್ರತಿ ವರ್ಷ ತಮ್ಮ ಅಭಿಮಾನಿಗಳೊಡನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಮಾತ್ರ ಹಾಗಾಗುತ್ತಿಲ್ಲ. ಕಾರಣ ಈ ಬಾರಿ ರಾಧಿಕಾ ತಮ್ಮ ಕುಟುಂಬದೊಡನೆ ಸರಳವಾಗಿ ಆಚರಿಸಿಕೊಳ್ಲುತ್ತಾರೆ ಎಂದು ರಾಧಿಕಾ ಪಂಡಿತ್ ಪತಿ ನಟ ಯಶ್ ಹೇಳಿದ್ದಾರೆ.

'ಓಬೆರಾಯನ' ಸಿನಿಮಾ ಪೋಸ್ಟರ್‌ ಬಿಡುಗಡೆ ಸಮಾರಂಭದಲ್ಲಿ ಮಾದ್ಯಮಗಳೊಡನೆ ಮಾತನಾಡಿದ ಯಶ್ "ಇದೀಗ ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಅಲ್ಲದೆ ಎಲ್ಲೆಡೆ ಕೊರೋನಾವಾಇರಸ್ ಹಾವಳಿ ಅತಿಯಾಗಿರುವ ಕಾರಣ ಈ ಬಾರಿ ರಾಧಿಕಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಾರೆ" ಎಂದರು.

"ಈ ಬಾರಿ ನಟಿ ರಾಧಿಕಾ ಪಂಡಿತ್ ಹಾಗೂ ಣಾನು ಎಲ್ಲಾದರೂ ಹೋಗಿ ಒಟ್ತಾಗಿ ಕಾಲ ಕಳೆಯುವ ಮೂಲಕ ಅವರ ಜನ್ಮದಿನ ಆಚರಿಸುತ್ತೇವೆ. ಹಾಗಾಗಿ ಅಭಿಮಾನಿಗಳು ಮನೆ ಮುಂದೆ ಗುಂಪಾಗಿ ಬರುವುದು ಬೇಡ" ಯಶ್ ಹೇಳಿದ್ದಾರೆ.

ಇನ್ನು ಕೊರೋನಾವೈರಸ್ ಕುರಿತು ಜಾಗೃತಿ ಮೂಡಿಸಲು ಮಾತನಾಡಿದ ಯಶ್ ಸ್ವಚ್ಚತೆ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನ ನೀಡಿ, ಎಲ್ಲರಿಗೆ ಶೇಕ್ ಹ್ಯಾಡ್ ಮಾಡುವ ಬದಲು ಭಾರತೀಯ ಸಂಸ್ಕೃತಿಯಲ್ಲಿ "ನಮಸ್ತೆ" ಮಾಡಿ ಗೌರವಿಸಿ. ಜನಸಂದಣಿ ಇರುವ ಕಡೆ ಹೆಚ್ಚು ಸೇರಬೇಡಿ ಎಂದು ಸಲಹೆ ನಿಡಿದ್ದಾರೆ.

ಇದೇ ವೇಳೆ ಬಜೆಟ್ ನಲ್ಲಿ ಫಿಲ್ಮ್ ಸಿಟಿಗಾಗಿ 500 ಕೋಟಿ ನೀಡಿದ ಸಿಎಂ ಯಡಿಯೂರಪ್ಪ ಅವರಿಗೆ ಯಶ್ ಅಭಿಮನ್ಂದನೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com