4ನೇ ಭಾರತೀಯ ವಿಶ್ವ ಸಿನಿಮೋತ್ಸವ: 'ಅಮೃತಮತಿ' ಹರಿಪ್ರಿಯಾ ಶ್ರೇಷ್ಠ ನಟಿ

ಕನ್ನಡ ನಟಿ ಹರಿಪ್ರಿಯಾ ಸಖತ್ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಅವರೀಗ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿರುವುದು. ಹೌದು  ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ಹರಿಪ್ರಿಯಾ ಅಭಿನಯದ "ಅಮೃತಮತಿ" ಚಿತ್ರ ಪ್ರದರ್ಶನಗೊಂಡಿದ್ದು ಈ ಚಿತ್ರದ ಅಭಿನಯಕ್ಕಾಗಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.

ಬ್ರೆಜಿಲ್, ಬ್ರಿಟನ್, ಚೀನಾ, ಕೊರಿಯಾ, ಅರ್ಜೆಂಟೈನ, ಅಲ್ಜೀರಿಯಾ, ಸ್ಪೇನ್, ಟರ್ಕಿ ಇನ್ನೂ ಮೊದಲಾದ ರಾಷ್ಟ್ರಗಳ ಸಿನಿಮಾಗಳನ್ನು ಹಿಂದಿಕ್ಕಿ ಅಮೃತಮತಿಯಲ್ಲಿನ ಅಭಿನಯಕ್ಕಾಗಿ ಕನ್ನಡ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.

13ನೇ ಶತಮಾನದ ಜನ್ನಕವಿ ರಚಿತ 'ಯಶೋಧರ ಚರಿತೆ'ಯ ಆಧಾರದ ಮೇಲೆ ತಯಾರಾದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿದ್ದು 'ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್' ನ ಪುಟ್ಟಣ್ಣ ನಿರ್ಮಾಪಕರಾಗಿದ್ದಾರೆ.ಈ ಚಿತ್ರದಲ್ಲಿ ಹರಿಪ್ರಿಯಾ ಜತೆಗೆ ಕಿಶೋರ್, ಸುಂದರ್‌ರಾಜ್‌, ಪ್ರಮೀಳಾ ಜೋಷಾಯ್, ಸುಪ್ರಿಯಾ ರಾವ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್ ಮೊದಲಾದವರು ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com