ಕೆಜಿಎಫ್ ವಿಲನ್ ಗರುಡ ರಾಮಚಂದ್ರ ರಾಜುಗೆ 'ಬಂಪರ್' ಆಫರ್

ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದ ಮೂಲಕ ಪ್ರಸಿದ್ದರಾಗಿರುವ ರಾಮಚಂದ್ರ ರಾಜುವಿಗೆ ಬಂಪರ್‌ ಆಫ‌ರ್‌ ಸಿಕ್ಕಿದೆ. ಈ ಮೂಲಕ ಮತ್ತೂಮ್ಮೆ ತೆರೆಮೇಲೆ ಮಿಂಚಲಿದ್ದಾರೆ.

Published: 10th March 2020 12:22 PM  |   Last Updated: 10th March 2020 12:31 PM   |  A+A-


Dhanveerah and Ramchandra Raju

ಧನವೀರ್ ಮತ್ತು ರಾಮಚಂದ್ರ ರಾಜು

Posted By : shilpa
Source : The New Indian Express

ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದ ಮೂಲಕ ಪ್ರಸಿದ್ದರಾಗಿರುವ ರಾಮಚಂದ್ರ ರಾಜುವಿಗೆ ಬಂಪರ್‌ ಆಫ‌ರ್‌ ಸಿಕ್ಕಿದೆ. ಈ ಮೂಲಕ ಮತ್ತೂಮ್ಮೆ ತೆರೆಮೇಲೆ ಮಿಂಚಲಿದ್ದಾರೆ.

ಗರುಡ ಅವರು ಈಗ “ಬಂಪರ್‌’ ತಂಡ ಸೇರಿಕೊಂಡಿದ್ದಾರೆ. ಹರಿ ಸಂತೋಷ್‌ ನಿರ್ದೇಶನದಲ್ಲಿ ಮೂಡಿಬರಲಿರುವ “ಬಂಪರ್‌’ ಚಿತ್ರದಲ್ಲಿ ವಿಲನ್‌ ಆಗಿ ಗರುಡ ನಟಿಸಲಿದ್ದಾರೆ. 

ಖಡಕ್‌ ವಿಲನ್‌ ಆಗಿ ಸಿನಿಮಾದುದ್ದಕ್ಕೂ ಸಾಗಿಬರಲಿದ್ದಾರೆ. ಈ ಮೂಲಕ
ಬಂಪರ್‌  ಒಂದು ಹೈವೋಲ್ಟೆಜ್‌ ಆ್ಯಕ್ಷನ್‌ ಸಿನಿಮಾವಾಗಿ ಮೂಡಿಬರುವುದು ಖಚಿತ.

ಧನ್ವೀರ್‌ ಈ ಚಿತ್ರದ ನಾಯಕ. ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಲಾಂಚ್‌ ಆದ ಧನ್ವೀರ್‌ ನಾಯಕರಾಗಿರುವ ನಟಿಸುತ್ತಿರುವ ಎರಡನೇ ಚಿತ್ರವಿದು. ಚಿತ್ರವನ್ನು ಸುಪ್ರೀತ್‌ ನಿರ್ಮಿಸುತ್ತಿದ್ದಾರೆ. 

ಈ ನಡುವೆಯೇ ಸುಪ್ರೀತ್‌ ನಿರ್ಮಾಣದಲ್ಲಿ ಗಣೇಶ್‌ ನಾಯಕರಾಗಿರುವ “ಸಖತ್‌’ ಚಿತ್ರವೂ ಚಿತ್ರೀಕರಣದಲ್ಲಿದೆ. “ಬಂಪರ್‌’ ಚಿತ್ರಕ್ಕೆ ಪ್ರಶಾಂತ್‌ ರಾಜಪ್ಪ ಸಂಭಾಷಣೆ ಇದ್ದು, ಶಿವಸೇನಾ ಅವರ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಕೆ.ಎಂ. ಪ್ರಕಾಶ್‌ ಸಂಕಲನವಿದೆ.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp