ಪುನೀತ್ ಹುಟ್ಟುಹಬ್ಬಕ್ಕೆ ಯುವರತ್ನ ಟೀಸರ್ ರಿಲೀಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಮಾರ್ಚ್ 17 ರಂದು ಇದ್ದು, ಈ ದಿನಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ.
ಯುವರತ್ನ ಪೋಸ್ಟರ್
ಯುವರತ್ನ ಪೋಸ್ಟರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಮಾರ್ಚ್ 17 ರಂದು ಇದ್ದು, ಈ ದಿನಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ.
 
ಪುನೀತ್ ರಾಜಕುಮಾರ್ ಬರ್ತ್ ಡೇ ಹಿಂದಿನ ದಿನ ಅಂದರೆ ಮಾರ್ಚ್ 16 ರಂದು ಯುವರತ್ನ ಡೈಲಾಗ್ ಟೀಸರ್ ಬಿಡುಗಡೆಯಾಗಲಿದೆ. 

ಈಗಾಗಲೇ ಬಿಡುಗಡೆಯಾಗಿರುವ ಎರಡು ಪೋಸ್ಟರ್ ಗಳು ಪುನೀತ್ ಈ ಸಿನಿಮಾದಲ್ಲಿ ವೈವಿದ್ಯಮಯ ಪಾತ್ರ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿದೆ.
 
ಇನ್ನು, ಮಾರ್ಚ್ 17 ರಂದು ಬರ್ತ್ ಡೇ ದಿನ ಜೇಮ್ಸ್ ಸಿನಿಮಾ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ. ಯುವರತ್ನ ಸಿನಿಮಾವನ್ನು  ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ.  

ವಿಜಯ್ ಕಿರಂಗದೂರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಶೂಟಿಂಗ್  ಇನ್ನು  ಪೂರ್ಣವಾಗಿಲ್ಲ, 2 ಹಾಡುಗಳು ಬಾಕಿ ಉಳಿದಿವೆ. ಕರೋನಾ ವೈರಸ್  ಹಿನ್ನೆಲೆಯಲ್ಲಿ ಯೂರೂಪ್ ನಲ್ಲಿ ಮಾಡಬೇಕಿದ್ದ ಶೂಟಿಂಗ್ ರದ್ದುಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com