ಶಿವಾರ್ಜುನ ಚಿತ್ರ ಅನನ್ಯ, ವಿಭಿನ್ನವೆಂದು ಹೇಳಲ್ಲ: ಚಿರಂಜೀವಿ ಸರ್ಜಾ

ಬಿಡುಗಡೆಗೆ ಸಿದ್ಧವಾಗಿರುವ ಶಿವಾರ್ಜುನ ಚಿತ್ರಕ್ಕೆ ಇದೀಗ ಕೊರೋನಾವೈರಸ್ ಭೀತಿ ಎದುರಾಗಿದ್ದು, ಈ ಭೀತಿಯ ನಡುವಲ್ಲೇ ಚಿತ್ರತಂಡ ಚಿತ್ರ ಯಶಸ್ವಿಗೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. 
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ

ಬಿಡುಗಡೆಗೆ ಸಿದ್ಧವಾಗಿರುವ ಶಿವಾರ್ಜುನ ಚಿತ್ರಕ್ಕೆ ಇದೀಗ ಕೊರೋನಾವೈರಸ್ ಭೀತಿ ಎದುರಾಗಿದ್ದು, ಈ ಭೀತಿಯ ನಡುವಲ್ಲೇ ಚಿತ್ರತಂಡ ಚಿತ್ರ ಯಶಸ್ವಿಗೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. 

ಜನರಲ್ಲಿ ಕೊರೋನಾ ವೈರಸ್ ಕುರಿತು ಭೀತಿಯಿದೆ. ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬುದು ನಮಗೆ ತಿಳಿಯುತ್ತಿಲ್ಲ. ಜನನಿಬಿಡ ಪ್ರದೇಶಗಳಿಗೆ ತೆರಳದಂತೆ ಜನರಿಗೆ ಸೂಚಿಸಲಾಗುತ್ತಿದೆ. ಆದರೆ, ಥಿಯೇಟರ್ ಹಾಗೂ ಮಾಲ್ ಗಳಲ್ಲಿ  ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭೀತಿಗೊಳಗಾಗದೆ ಚಿತ್ರವನ್ನು ನೋಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆಂದು ಚಿರಂಜೀವಿ ಸರ್ಜಾ ಹೇಳಿದ್ದಾರೆ. 

ಶಿವಾರ್ಜುನ ಚಿತ್ರದ ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದು ನನ್ನ ಅದೃಷ್ಟ. ನನ್ನದೇ ನಿರ್ಮಾಣ ಸಂಸ್ಥೆಯಲ್ಲಿ ನಾನು ಕೆಲಸ ಮಾಡಿದ ಹಾಗಿತ್ತು. ಚಿತ್ರದ ನಿರ್ಮಾಪಕರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ನಿರ್ಮಾಪಕು ಗೊತ್ತಿರುವ ವ್ಯಕ್ತಿಯಾಗಿದ್ದರು. 35 ವರ್ಷಗಳ ಚಿತ್ರರಂಗದ ಅನುಭವದೊಂದಿಗೆ ಶಿವಾರ್ಜುನ ಚಿತ್ರ ಬಂದಿದೆ. ಚಿತ್ರ ಬಿಡುಗಡೆ ಬಳಿಕ ಬರುವ ಪ್ರತಿಕ್ರಿಯೆಗೆ ಬಗ್ಗೆ ನಿರ್ಮಾಪಕರು ಉತ್ತಮ ವಿಶ್ವಾಸ ಇಟ್ಟಿದ್ದಾರೆ. ಇದು ನನಗೆ ಅತ್ಯಂತ ಮುಖ್ಯವಾದದ್ದು ಎಂದು ತಿಳಿಸಿದ್ದಾರೆ. 

ಚಿತ್ರಕಥೆ ವಿಭಿನ್ನ ಹಾಗೂ ಅನನ್ಯವೆಂದೇನು ನಾನು ಹೇಳುವುದಿಲ್ಲ. ಚಿತ್ರ ಕಥೆ ಅತ್ಯಂತ ಸಿಂಪಲ್ ಹಾಗೂ ಪ್ರಾಮಾಣಿಕವಾಗಿದೆ. ಹೊಸ ಬಾಟಲಿಗೆ ಹಳೇ ವೈನ್ ಹಾಕಿದ ರೀತಿ ಚಿತ್ರಕಥೆ ಇದೆ. ಚಿತ್ರದ ಕಥೆಯನ್ನು ಆಯ್ಕೆ ಮಾಡಿದಾಗ, ನನಗೆ ಮೊದಲೇ ಕಥೆ ಗೊತ್ತಿದೆ ಎಂಬಂತಹ ಭಾಸವಾಗಿತ್ತು. ಆದರೆ, ನನಗಿದು ಹೊಸದೆನಿಸಿತು. ಚಿತ್ರದಲ್ಲಿ ಅಭಿಮಾನಿಗಳು ನನ್ನ ಹೊಸ ಅವತಾರವನ್ನು ನೋಡಲಿದ್ದಾರೆ. ಹಗೆ ತೀರಿಸಿಕಕೊಳ್ಳುವ ಡ್ರಾಮಾವನ್ನು ಶಿವಾರ್ಜುನ ಹೊಂದಿದೆ ಎಂದಿದ್ದಾರೆ. 

ರಿಮೇಕ್ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ನಾನೆಂದಿಗೂ ಹೇಳಿಲ್ಲ. ಹಿಂದಿನ ಚಿತ್ರಗಳೆಲ್ಲದರಲ್ಲೂ ಹೊಸ ಹೊಸ ಕಥೆಗಳನ್ನು ಆಯ್ಕೆ ಮಾಡಿ ನಟಿಸಿದ್ದಕ್ಕೇ ಈ ರೀತಿಯ ಭಿನ್ನಿಸಲಾಗಿದೆಯೇನೋ ಗೊತ್ತಿಲ್ಲ. ಇತರೆ ಭಾಷೆಗಳ ಚಿತ್ರಗಳನ್ನು ನೋಡಿದಾಗ ಈ ಪಾತ್ರಕ್ಕೆ ನಾನು ಸೂಕ್ತ ಎಂದೆನಿಸುತ್ತದೆ. ನನಗೆ ಸೂಕ್ತವಾಗುವ ಪಾತ್ರಗಳು ಬಂದಿದ್ದೇ ಆದರೆ, ಆಯ್ಕೆ ಮಾಡುತ್ತೇನೆ. ಅಂತಹ ಪಾತ್ರಕ್ಕಾಗಿ ಕಾಯುತ್ತಿದ್ದೇನೆಂದು ಹೇಳಿದ್ದಾರೆ. 

ನಾಯಕ ನಟಿ ಅಮೃತಾ ಮಾತನಾಡಿ, ನನ್ನ ಹಿಂದಿನ ಎರಡು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಿವೆ. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿವೆ. ಈ ವರ್ಷ ಉತ್ತಮವಾಗಿಯೇ ಆರಂಭವಾಗಿದೆ. ಶಿವಾರ್ಜುನ ಹ್ಯಾಟ್ ಟ್ರಿಕ್ ತರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com