ಹುಟ್ಟುಹಬ್ಬ ರದ್ದು, ಅಭಿಮಾನಿಗಳ ಸುರಕ್ಷತೆಯೇ ಉಡುಗೊರೆ ಎಂದ ಅಪ್ಪು

ಕೊರೋನಾ ವೈರಸ್ ನಿಯಂತ್ರಿಸಲು ಸರ್ಕಾರಕ್ಕೆ ಕೈಜೋಡಿಸುವ ಸಲುವಾಗಿ ಖ್ಯಾತ ನಟ ಪುನೀತ್ ರಾಜ್ಕುಮಾರ್ ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)
ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಿಸಲು ಸರ್ಕಾರಕ್ಕೆ ಕೈಜೋಡಿಸುವ ಸಲುವಾಗಿ ಖ್ಯಾತ ನಟ ಪುನೀತ್ ರಾಜ್ಕುಮಾರ್ ತಮ್ಮ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

“ನಾನು ಈ ವರ್ಷ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಭಿಮಾನಿಗಳ್ಯಾರೂ ದೂರದೂರುಗಳಿಂದ ಬರುವ ಪ್ರಯತ್ನ ಮಾಡದಿರಿ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜನರು ಒಂದೆಡೆ ಸೇರದಂತೆ ಸರ್ಕಾರ ಸೂಚಿಸಿದೆ. ನಾವೆಲ್ಲರೂ ಅದನ್ನು ಅನುಸರಿಸೋಣ. ಅಭಿಮಾನಿಗಳು ಸುರಕ್ಷಿತವಾಗಿದ್ದರೆ ಅದೇ ನನಗೆ ದೊಡ್ಡ ಉಡುಗೊರೆ. ಎಲ್ಲರಿಗೂ ಒಳ್ಳೆಯದಾಗಲಿ, ಹುಶಾರಾಗಿರಿ” ಎಂದು ಪುನೀತ್ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.


ಕೊರೋನಾ ಭೀತಿಯಿಂದಾಗಿ ನಾಮಕರಣ, ಹುಟ್ಟುಹಬ್ಬ ಹಾಗೂ ಮದುವೆ ಕಾರ್ಯಕ್ರಮಗಳನ್ನು ಒಂದು ವಾರಗಳ ಕಾಲ ಮಾಡುವಂತಿಲ್ಲ. ಕೇವಲ 100 ಜನರನ್ನು ಸೇರಿಸಿ ಮದುವೆ ಮಾಡಿಸಿ ಎಂದು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಟ ಪುನೀತ್​ ರಾಜ್​ಕುಮಾರ್​ ಸಹ ಇದೇ 17ರಂದು ತಮ್ಮ ಅಭಿಮಾನಿಗಳ ಸುರಕ್ಷತೆಗಾಗಿ ಹುಟ್ಟುಹಬ್ಬದ ಆಚರಣೆಯನ್ನು ಕೈಬಿಟ್ಟಿದ್ದಾರೆ.

ಪುನೀತ್ ರಾಜ್ ಕುಮಾರ್ ಇದೇ 17ರಂದು 45ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com