ಅಣ್ಣಾವ್ರು, ಬಿಗ್'ಬಿ ಬಳಸಿದ ಪಿಸ್ತೂಲ್ ಈಗ ಉಪ್ಪಿ ಕೈಯಲ್ಲಿ

ಗಂಧದ ಗುಡಿಯಲ್ಲಿ ಡಾ. ರಾಜ್ ಕುಮಾರ್, ಶೋಲೇ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಿಡಿದಿದ್ದ ಪಿಸ್ತೂಲ್ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೈಯಿಗೆ ಬಂದಿದೆ. 

Published: 14th March 2020 10:10 AM  |   Last Updated: 14th March 2020 10:10 AM   |  A+A-


Actor Upendra to hold pistol used by Dr Rajkumar in Gandhada Gudi, Amitabh Bachchan in Sholay

ಅಣ್ಣಾವ್ರು, ಬಿಗ್'ಬಿ ಬಳಸಿದ ಪಿಸ್ತೂಲ್ ಈಗ ಉಪ್ಪಿ ಕೈಯಲ್ಲಿ

Posted By : Manjula VN
Source : The New Indian Express

ಬೆಂಗಳೂರು: ಗಂಧದ ಗುಡಿಯಲ್ಲಿ ಡಾ. ರಾಜ್ ಕುಮಾರ್, ಶೋಲೇ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಿಡಿದಿದ್ದ ಪಿಸ್ತೂಲ್ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೈಯಿಗೆ ಬಂದಿದೆ. 

ಪ್ರೇಕ್ಷಕರಲ್ಲಿ ಈಗಾಗಲೇ ತೀವ್ರ ಸಂಚಲನ ಮೂಡಿಸಿರುವ ಕಬ್ಜ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಚಿತ್ರದಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ಗಂಧದ ಗುಡಿ ಹಾಗೂ ಅಮಿತಾಭ್ ಬಚ್ಚನ್ ಅವರ ಶೋಲೆ ಚಿತ್ರದಲ್ಲಿ ಬಳಸಲಾಗಿದ್ದ ಪಿಸ್ತೂಲ್ ಹಿಡಿದು ಉಪೇಂದ್ರ ಅವರು ನಟಿಸಿದ್ದಾರೆ. 

ಈ ಕುರಿತಂತೆ ಸ್ವತಃ ಉಪೇಂದ್ರ ಅವರೇ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ. 

ಎರಡೂ ಕೈಯಲ್ಲಿ ಪಿಸ್ತೂಲುಗಳನ್ನು ಹಿಡಿದು ಮೂರು ವಿಭಿನ್ನ ಭಂಗಿಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಉಪೇಂದ್ರ ಅವರು ಶೇರ್ ಮಾಡಿದ್ದು, ಅಣ್ಣಾವ್ರು, ಅಮಿತಾಬ್ ಬಚ್ಚನ್ ರಂತಹ ಮೇರು ನಟರು ಗಂಧದ ಗುಡಿ, ಶೋಲೆ ಚಿತ್ರಗಳಲ್ಲಿ ಬಳಸಿದಂತಹ ಪಿಸ್ತೂಲನ್ನು ಕಬ್ಜ ಚಿತ್ರದ ಚಿತ್ರೀಕರಣದಲ್ಲಿ ಬಳಸಿದಾಗ ಆದ ರೋಮಾಂಚರ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ. 

ಕಬ್ಜ ಚಿತ್ರ ಉಪೇಂದ್ರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಚಿತ್ರದಲ್ಲಿ ಉಪೇಂದ್ರ ಅವರು ವಿಭಿನ್ನರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. 80ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದ್ದು, ಈ ಹಿಂದೆ 80 ದಶಕದ ಶೈಲಿಯಂತೆ ಅಂಗಿ ಹಾಗೂ ಬೆಲ್ ಬಾಟಂ ಪ್ಯಾಂಟ್ ಧರಿಸಿ, ಲಾಂಗ್ ಹಿಡಿದಿರುವ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆದಿದೆ. 

ಚಿತ್ರವೊಂದು ಪ್ಯಾನ್ ಇಂಡಿಯಾ ಸಿನಿವಾಗಿದ್ದು, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಲಂ, ಹಿಂದಿ, ಮರಾಠಿ ಹಾಗೂ ಬೆಂಗಾಲಿ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಅಲ್ಲದೆ ಚೀನಾದಲ್ಲಿಯೂ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಿ ಭಾಷೆಗೂ ಚಿತ್ರವನ್ನು ಡಬ್ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp