ಏ.9ಕ್ಕೆ 'ರಾಬರ್ಟ್' ತೆರೆಗೆ ತರುವ ಉದ್ದೇಶವಿದೆ: ತರುಣ್ ಕಿಶೋರ್ ಸುಧೀರ್

ಕೊರೋನಾ ವೈರಸ್ ನಿಂದಾಗಿ ಅನೇಕ ಸಿನೆಮಾಗಳ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಬಿಡುಗಡೆಯಾದ ಸಿನಿಮಾಗಳ ಪ್ರದರ್ಶಕ್ಕೆ ಅಡ್ಡಿಯಾಗಿದೆ. 
ದರ್ಶನ್ ಮತ್ತು ರಾಬರ್ಟ್ ಚಿತ್ರತಂಡ
ದರ್ಶನ್ ಮತ್ತು ರಾಬರ್ಟ್ ಚಿತ್ರತಂಡ

ಬೆಂಗಳೂರು:ಕೊರೋನಾ ವೈರಸ್ ನಿಂದಾಗಿ ಅನೇಕ ಸಿನೆಮಾಗಳ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಬಿಡುಗಡೆಯಾದ ಸಿನಿಮಾಗಳ ಪ್ರದರ್ಶಕ್ಕೆ ಅಡ್ಡಿಯಾಗಿದೆ. 


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ರಾಬರ್ಟ್ ಚಿತ್ರ ನಿಗದಿಯಂತೆ ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ತರುಣ್ ಕಿಶೋರ್ ಸುದೀರ್ ಹೇಳುತ್ತಾರೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿದ ಕೂಡಲೇ ಈ ಕುರಿತು ಚಿತ್ರತಂಡ ಅಧಿಕೃತ ಪ್ರಕಟಣೆ ಹೊರಡಿಸಲಿದೆಯಂತೆ. 


ಕೊರೋನಾ ವೈರಸ್ ನ ಪರಿಣಾಮದ ಬಗ್ಗೆ ನಮಗೆ ಅರಿವಿದೆ.ಇದು ಹೀಗೆ ಹಬ್ಬುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಥಿಯೇಟರ್ ಗಳು ವಾರದ ಮಟ್ಟಿಗೆ ಮುಚ್ಚಿದ್ದರೂ ಕೂಡ ರಾಬರ್ಟ್ ಬಿಡುಗಡೆಗೆ ಸುಮಾರು ಒಂದು ತಿಂಗಳ ಹತ್ತಿರ ಸಮಯವಿದೆ, ಈಗ ಚಿತ್ರ ಬಿಡುಗಡೆ ಬಗ್ಗೆ ಮಾತನಾಡುವುದು ಬೇಗ ಆಗುತ್ತದೆ. ಸದ್ಯ ನಾವು ಏಪ್ರಿಲ್ 9ಕ್ಕೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದೇವೆ. ಯಾವುದೇ ಅನಿರೀಕ್ಷಿತ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ತರುಣ್ ಸುದೀರ್ ಹೇಳುತ್ತಾರೆ.


ಚಿತ್ರದ ಕೊನೆಯ ಹಾಡಿನ ಶೂಟಿಂಗ್ ಗೆ ಗುಜರಾತ್ ನ ಕಚ್ ಗೆ ಹೋಗಿದ್ದ ಚಿತ್ರತಂಡ ನಗರಕ್ಕೆ ವಾಪಸ್ಸಾಗಿದೆ. ಕೊರೋನಾ ವೈರಸ್ ಹಿನ್ನಲೆಯಲ್ಲಿ ಸ್ಪೈನ್ ಗೆ ಹೋಗದೆ ಕಚ್ ನಲ್ಲಿಯೇ ಉತ್ತಮ ಸ್ಥಳ ಹುಡುಕಿ ಶೂಟಿಂಗ್ ಮುಗಿಸಿದೆವು. ಹಾಡಿನ ಚಿತ್ರೀಕರಣ ಚೆನ್ನಾಗಿ ಮೂಡಿಬಂದಿದೆ ಎಂದರು ತರುಣ್.


ಉಮಾಪತಿ ಫಿಲ್ಮ್ಸ್ ನಡಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ರಾಬರ್ಟ್ ನಲ್ಲಿ ಕಲಾವಿದರು ಡಬ್ಬಿಂಗ್ ನಲ್ಲಿ ತೊಡಗಿದ್ದಾರೆ. ಈಗಾಗಲೇ ಚಿತ್ರತಂಡ ಎರಡು ಹಾಡುಗನ್ನು ಬಿಟ್ಟಿದ್ದು ಇನ್ನೆರಡು ಹಾಡುಗಳು ಬಾಕಿಯಿವೆ. 


ಅರ್ಜುನ್ ಜನ್ಯ ಸಂಗೀತ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ, ನಾಯಕಿಯಾಗಿ ಆಶಾ ಭಟ್,ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಲ್ ಮೊಂಟೈರೊ, ಶಿವರಾಜ್ ಕೆ ಆರ್ ಪೇಟೆ ಮತ್ತು ಚಿಕ್ಕಣ್ಣನಂತಹ ಕಲಾವಿದರ ತಾರಾ ಬಳಗವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com