ನಿರ್ಭಯಾ ಹತ್ಯಾಚಾರಿಗಳಿಗೆ ಶಿಕ್ಷೆ: ಹಂತಕರ ಗಲ್ಲಿಗೇರಿಸಿದ ಹ್ಯಾಂಗ್'ಮನ್'ಗೆ ರೂ.1 ಲಕ್ಷ ದೇಣಿಗೆ ನೀಡಿದ ನಟ ಜಗ್ಗೇಶ್!

ನಿರ್ಭಯಾ ಹತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳಿಗೆ ಶುಕ್ರವಾರ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್'ಮನ್'ಗೆ ಸ್ಯಾಂಡಲ್'ವುಡ್'ನ ನವರಸ ನಾಯಕ ಜಗ್ಗೇಶ್ ಅವರು ರೂ.1 ಲಕ್ಷ ದೇಣಿಗೆ ನೀಡಿದ್ದಾರೆ. 

Published: 20th March 2020 08:54 AM  |   Last Updated: 20th March 2020 08:54 AM   |  A+A-


Sandalwood actor jaggesh donates Rs. 1 Lakh to nirbhaya convicts hangman

ನಿರ್ಭಯಾ ಹತ್ಯಾಚಾರಿಗಳಿಗೆ ಶಿಕ್ಷೆ: ಹಂತಕರ ಗಲ್ಲಿಗೇರಿಸಿದ ಹ್ಯಾಂಗ್'ಮನ್'ಗೆ ರೂ.1 ಲಕ್ಷ ದೇಣಿಗೆ ನೀಡಿದ ನಟ ಜಗ್ಗೇಶ್!

Posted By : Manjula VN
Source : Online Desk

ಬೆಂಗಳೂರು: ನಿರ್ಭಯಾ ಹತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳಿಗೆ ಶುಕ್ರವಾರ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್'ಮನ್'ಗೆ ಸ್ಯಾಂಡಲ್'ವುಡ್'ನ ನವರಸ ನಾಯಕ ಜಗ್ಗೇಶ್ ಅವರು ರೂ.1 ಲಕ್ಷ ದೇಣಿಗೆ ನೀಡಿದ್ದಾರೆ. 

ನಿರ್ಭಯಾ ಹಂತಕರಿಗೆ ಈ ಹಿಂದೆ ಗಲ್ಲು ಶಿಕ್ಷೆ ಪ್ರಕಟವಾದ ವೇಳೆ ಹೇಳಿಕೆ ನೀಡಿದ್ದ ಜಗ್ಗೇಶ್ ಅವರು, ಹ್ಯಾಂಗ್'ಮನ್'ಗೆ ರೂ.1 ಲಕ್ಷ ನೀಡುವುದಾಗಿ ತಿಳಿಸಿದ್ದರು. ಇದರಂತೆ ಕೊನೆಗೂ ಹಂತಕರಿಗೆ ಗಲ್ಲು ಶಿಕ್ಷೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಾಗಿ ಜಗ್ಗೇಶ್ ತಿಳಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೊಟ್ಟ ಮಾತಿನಂತೆ ರೂ.1 ಲಕ್ಷವನ್ನು ನಿರ್ಭಯಾ ಹಂತಕರ ಹ್ಯಾಂಗ್'ಮನ್'ಗೆ ದೇಣಿಗೆ ನೀಡುತ್ತಿದ್ದೇನೆ. ದೇವನೊಬ್ಬನಿರುವ ಅವ ಎಲ್ಲಾ ನೋಡುತ್ತಿರುವ. ಸತ್ಯದ ಹಾದಿಯಲ್ಲಿ ನಡೆದವನಿಗೆ ಭಯವಿಲ್ಲಾ. ಅಸತ್ಯದ ಮಾರ್ಗಕ್ಕೆ ಶಿಕ್ಷೆ ತಪ್ಪುವುದಿಲ್ಲ. ಈ ದಿನಕ್ಕೆ ಹಲ್ಲು ಕಚ್ಚಿ ಎಂದು ಅಂತ್ಯ ದುಷ್ಟ ಕ್ರಿಮಿಗಳಿಗೆ ಎಂದು ಕಾಯುತ್ತಿದ್ದೆ. ಸುದ್ದಿ ಕೇಳಲು ನಿದ್ರೆ ಮಾಡದೆ ಕಾದೆ. ಹರಿಓಂ. ಶುಭದಿನ ಎಂದು ಹೇಳಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp