ಕ್ಲಾಸಿಕ್ ರೊಮ್ಯಾನ್ಸ್'ಗಾಗಿ ಮತ್ತೆ ಒಂದಾದ 'ಗೋಧಿ ಬಣ್ಣ' ಬಳಗ

ಅವನೇ ಶ್ರೀಮನ್ನಾರಾಯಣ ಬಳಿಕ #777 ಚಾರ್ಲಿ ಚಿತ್ರದಲ್ಲಿ ತೊಡಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರು ಬೇರೆಂದು ಬ್ಯೂಟಿಫುಲ್ ಟೈಟಲ್ ನೊಂದಿಗೆ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಬಳಿಕ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜನಯ್ಯ ಅವರು ಮತ್ತೆ ಒಂದಾಗುತ್ತಿದ್ದಾರೆ. 
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ

ಅವನೇ ಶ್ರೀಮನ್ನಾರಾಯಣ ಬಳಿಕ #777 ಚಾರ್ಲಿ ಚಿತ್ರದಲ್ಲಿ ತೊಡಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರು ಬೇರೆಂದು ಬ್ಯೂಟಿಫುಲ್ ಟೈಟಲ್ ನೊಂದಿಗೆ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಬಳಿಕ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜನಯ್ಯ ಅವರು ಮತ್ತೆ ಒಂದಾಗುತ್ತಿದ್ದಾರೆ. 

ಈ ಹಿಂದೆ ಮೂವರೂ ಹಿಂದೆ ಕಳೆದುಹೋದ ತಂದೆಯನ್ನು ಹುಡುಕುವಂತಹ ಕತೆಯುಳ್ಳ ಭಾವನಾತ್ಮಕ ಚಿತ್ರ ನಿರ್ಮಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಈ ಬಾರಿ ಕ್ಲಾಸಿಕ್ ರೊಮ್ಯಾನ್ಸ್ ಜೊತೆಗೆ ಚಿತ್ರ ಬರುತ್ತಿದ್ದು, ಸಿನಿಮಾಗೆ ಚಿತ್ರತಂಡ ಸಪ್ತ ಸಾಗರದಾಚೆ ಎಲ್ಲೋ ಎಂಬ ಸುಂದರವಾದ ಟೈಟಲ್ ನೀಡಿದೆ. 

ಈ ಕುರಿತು ಮಾತನಾಡಿರುವ ಪುಷ್ಕರ್ ಅವರು, ರಕ್ಷಿತ್ ಅವರು ಚಾರ್ಲಿ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ಬಳಿಕ ನಮ್ಮ ಚಿತ್ರದ ಚಿತ್ರೀಕರಣ ಜೂನ್'ನಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 27 ಕ್ಕೆ ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿದ್ದು, 2019ರಲ್ಲಿಯೂ ಇದೇ ದಿನಾಂಕದಂತೇ ಅವನೇ ಶ್ರೀಮನ್ನಾರಾಯರಣ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಚಿತ್ರ ಕುರಿತ ಕೆಲಸಗಳು ಆರಂಬಗೊಂಡಿವೆ. ಶೀಘ್ರದಲ್ಲೇ ನಟ-ನಟಿಯರ ಆಯ್ಕೆ ಪ್ರಕ್ರಿಯೆ ಕೂಡ ಪೂರ್ಣಗೊಳ್ಳಲಿದೆ. ಚಿತ್ರತಂಡ ಹೊಸಮುಖಗಳಿಗಾಗಿ ಹುಡುಕಾಟ ನಡೆಸಿದ್ದು, ಶೀಘ್ರದಲ್ಲಿಯೇ ಆಡಿಷನ್ ನಡೆಸಲಿದೆ ಎಂದು ತಿಳಿದುಬಂದಿದೆ. 

ಚಿತ್ರದ ಬಗ್ಗೆ ಸಾಕಷ್ಟು ಸ್ಪಷ್ಟತೆಗಳನ್ನು ಹೊಂದಿದ್ದೆವು. ಮತ್ತೆ ಒಟ್ಟಿಗೆ ಸೇರುತ್ತೇವೆಂಬುದೂ ಗೊತ್ತಿತ್ತು. ಚಿತ್ರದಲ್ಲಿ ಕ್ಲಾಸಿಕ್ ಲವ್ ಸ್ಟೋರಿಯಿದೆ. ಹೀಗಾಗಿಯೇ ಚಿತ್ರಕ್ಕೆ ಸಪ್ತ ಸಾಗರದಾಚೆ ಎಲ್ಲೋ ಎಂಬ ಶೀರ್ಷಿಕೆ ನೀಡಿದ್ದೇವೆಂದು ಹೇಮಂತ್ ಹೇಳಿದ್ದಾರೆ.

ಪದ್ಯದ ರೀತಿಯ ಲವ್ ಸ್ಟೋರಿ ಇದ್ದು, ಹಾಲು ಜೇನು, ಬೆಂಕಿಯ ಬಲೆ, ಬಂಧನ, ಮೌನರಾಗಾ ಚಿತ್ರಗಳನ್ನು ನೆನಪು ಮಾಡಲಿದೆ. ಹಳೇ ಕಾಲದ ಪ್ರಣಯವನ್ನು ನಿರ್ದೇಶಿಸುವುದು ನನ್ನ ಇಚ್ಛೆಯಾಗಿತ್ತು. ಇದೀಗ ಅದು ನನಸಾಗುತ್ತಿದೆ. ವಿಭಿನ್ನ ಕಥೆಯಿರುವ ಚಿತ್ರಗಳಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ. 

ಚಿತ್ರಕ್ಕೆ ಚರಣ್ ಅವರು ಸಂಗೀತ ನೀಡುತ್ತಿದ್ದು, ಛಾಯಾಗ್ರಹಣವನ್ನು ಅದ್ವೈತಾ ಗುರುಮೂರ್ತಿ ಮಾಡುತ್ತಿದ್ದಾರೆ. 

ತನಾಲಿ ಚಿತ್ರಕ್ಕೂ ರಕ್ಷಿತ್ ಹಾಗೂ ಹೇಮಂತ್ ಅವರು ಜೊತೆಗೂಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆಗಳು ಬಂದಿಲ್ಲ. ಸಿನಿಮಾಗೆ ಹೆಚ್ಚಿನ ಪ್ರಮಾಣದ ಕೆಲಸ ಮತ್ತು ಬಜೆಟ್ ಅಗತ್ಯವಿದ್ದು, ಅದಕ್ಕೆಂದೇ ಸಾಕಷ್ಟು ಕಾಲಾವಕಾಶ ನೀಡಿ ಆನಂತರ ತೆಲಾನಿ ಶುರುವ ಆಲೋಚನೆಯಲ್ಲಿದ್ದರು ಎನ್ನಲಾಗುತ್ತಿದೆ. ಜೊತೆಗೆ ದೊಡ್ಡ ಪ್ರಾಜೆಕ್ಟ್ ಚಿತ್ರವಾಗಿರುವ ಕಾರಣ ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಪೂರ್ಣಗೊಂಡ ಬಳಿಕ ತೆನಾಲಿ ಚಿತ್ರದ ಬಗ್ಗೆ ಮಾಹಿತಿಗಳು ಹೊರ ಬೀಳಲಿವೆ ಎಂದು ಹೇಳಲಾಗುತ್ತಿದೆ. 

ಹೇಮಂತ್ ಜೊತೆಗೆ ಮತ್ತೆ ಕೆಲಸ ಮಾಡುವುದಕ್ಕೆ ಸಾಕಷ್ಟು ಉತ್ಸುಕನಾಗಿದ್ದೇನೆ. ಚಿತ್ರ ಕತೆ ಸಾಕಷ್ಟು ಆಸಕ್ತಿಯನ್ನು ಮೂಡಿಸಿದೆ. ಚಿತ್ರದ ಪಾತ್ರದಲ್ಲಿ ನಟಿಸಲು ಕಾಯುತ್ತಿದ್ದೇನೆಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com