ಗಾಯಕಿ ಕನಿಕಾ ಕಪೂರ್ ಸ್ನೇಹಿತನಿಗಾಗಿ ಪೊಲೀಸರ ಶೋಧ

ಬಾಲಿವುಡ್‌ನ ಹೆಸರಾಂತ ಗಾಯಕಿ ಕನಿಕಾ ಕಪೂರ್‌ ಅವರ ಬೇಜವಾಬ್ದಾರಿತನದಿಂದ ಹಲವಾರು ಖ್ಯಾನಮರು ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಲಖನೌ ಪೊಲೀಸರು ಕನಿಕಾ ಕಪೂರ್ ಅವರ ಸ್ನೇಹಿತರಾದ ಓಜಸ್ ದೇಸಾಯಿ ಅವರಿಗಾಗಿ ಹುಡುಕುತ್ತಿದ್ದಾರೆ. 

Published: 23rd March 2020 03:52 PM  |   Last Updated: 23rd March 2020 03:53 PM   |  A+A-


Kanika Kapoor

ಗಾಯಕಿ ಕನಿಕಾ ಕಪೂರ್‌

Posted By : Srinivas Rao BV
Source : The New Indian Express

ಲಖನೌ: ಬಾಲಿವುಡ್‌ನ ಹೆಸರಾಂತ ಗಾಯಕಿ ಕನಿಕಾ ಕಪೂರ್‌ ಅವರ ಬೇಜವಾಬ್ದಾರಿತನದಿಂದ ಹಲವಾರು ಖ್ಯಾನಮರು ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಲಖನೌ ಪೊಲೀಸರು ಕನಿಕಾ ಕಪೂರ್ ಅವರ ಸ್ನೇಹಿತರಾದ ಓಜಸ್ ದೇಸಾಯಿ ಅವರಿಗಾಗಿ ಹುಡುಕುತ್ತಿದ್ದಾರೆ. 

ವಿದೇಶದಿಂದ ಆಗಮಿಸಿದ್ದ ಕನಿಕಾ ಕಪೂರ್ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವ ಬದಲು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗಿದ್ದರು. ನಂತರ ಕನಿಕಾಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಈ ಬೆನ್ನಲ್ಲೆ ಎಚ್ಚೆತ್ತುಕೊಂಡ ಪೊಲೀಸರು ಕನಿಕಾ ಕಪೂರ್ ಜೊತೆಗೆ, ಸಂವಹನ ನಡೆಸಿದ್ದ 260 ಮಂದಿಯನ್ನು ಪತ್ತೆ ಮಾಡಿದ್ದಾರೆ. ಆದರೆ ಕನಿಕಾ ಕಪೂರ್ ಜೊತೆಗೆ ಹೊಟೆಲ್ ತಾಜ್ ನಲ್ಲಿ ಕಾಣಿಸಿಕೊಂಡು ಮಾ.16 ರಿಂದ ನಾಪತ್ತೆಯಾಗಿರುವ, ಮುಂಬೈ ಮೂಲದ ಉದ್ಯಮಿ ಓಜಸ್ ದೇಸಾಯಿಯನ್ನು ಈವರೆಗೂ ಪೊಲೀಸರು ಪತ್ತೆ ಮಾಡಲು ಸಾಧ್ಯವಾಗಿಲ್ಲ. 

ಈ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಡಾ.ನರೇಂದ್ರ ಅಗರ್ವಾಲ್ ಮಾಹಿತಿ ನೀಡಿದ್ದು ದೇಸಾಯಿ ಕುರಿತು ಮಾಹಿತಿ ಪತ್ತೆ ಮಾಡುತ್ತಿದ್ದೇವೆ ಮುಂಬೈ ನಲ್ಲಿ ಆತನ ನಿಖರ ವಿಳಾಸ ಅಥವಾ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಹೇಳ್ದಿದಾರೆ. ಇನ್ನು ದೇಸಾಯಿ ಕುರಿತು ಪ್ರಶ್ನೆ ಮಾಡೋಣವೆಂದರೆ ಗಾಯಕಿ ಕನಿಕಾ ಕಪೂರ್ ಕ್ವಾರಂಟೈನ್ ನಲ್ಲಿದ್ದಾರೆ. 

ಇನ್ನು ಕನಿಕಾ ಜೊತೆ ಮಾತನಾಡಿದ್ದ ಹೊಟೆಲ್ ತಾಜ್ ನ 11 ಉದ್ಯೋಗಿಗಳನ್ನೂ ಸಹ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವಂತೆ ಸೂಚಿಸಲಾಗಿದೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp