'ಬಾಲಿವುಡ್ ಗೆ ಹಾರಿದ ಉರ್ವಿ ಹೀರೋ'?: ಸಂಜಯ್ ಲೀಲಾ ಬನ್ಸಾಲಿರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದ ಪ್ರಭು ಮುಂಡ್ಕೂರ್

ಉರ್ವಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಉದಯೋನ್ಮುಖ ನಟ ಪ್ರಭು ಮುಂಡ್ಕೂರ್ ಇದೀಗ ಬಾಲಿವುಡ್ ರಂಗ ಪ್ರವೇಶ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

Published: 25th March 2020 05:54 PM  |   Last Updated: 25th March 2020 06:22 PM   |  A+A-


Prabhu Mundkur

ನಟ ಪ್ರಭು ಮುಂಡ್ಕೂರ್

Posted By : Srinivasamurthy VN
Source : The New Indian Express

ಬೆಂಗಳೂರು: ಉರ್ವಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಉದಯೋನ್ಮುಖ ನಟ ಪ್ರಭು ಮುಂಡ್ಕೂರ್ ಇದೀಗ ಬಾಲಿವುಡ್ ರಂಗ ಪ್ರವೇಶ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಬಾಲಿವುಡ್ ನ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜ್ ಕುಮಾರ್ ಹಿರಾನಿ ರಂತಹ ಖ್ಯಾತ ನಿರ್ದೇಶಕ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಬೇಕು ಎನ್ನುವುದು ಪ್ರಭು ಅವರ ಆಸೆಯಂತೆ. ಈ ಬಗ್ಗೆ ಮಾತನಾಡಿರುವ ಪ್ರಭು ಮುಂಡ್ಕೂರ್ ಅವರು, ನಾನು  ಬಾಲಿವುಡ್ ನ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜ್ ಕುಮಾರ್ ಹಿರಾನಿ ರಂತಹ ಖ್ಯಾತ ನಿರ್ದೇಶಕ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಬೇಕು ಎಂದುಕೊಂಡಿದ್ದೇನೆ, ಓರ್ವ ಪ್ರೇಕ್ಷಕನಾಗಿ ಈ ಇಬ್ಬರೂ ನಿರ್ದೇಶಕರ ಚಿತ್ರಗಳು ನನಗೆ ಬಹಳ  ಇಷ್ಟವಾಗುತ್ತದೆ. ಈ ಇಬ್ಬರೂ ನಿರ್ದೇಶಕರ ಚಿತ್ರಗಳಲ್ಲಿಯೇ ನನ್ನ ಬಾಲಿವುಡ್ ಪಯಣ ಆರಂಭವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ಚಿತ್ರಗಳು ಒಂದು ಗುಂಪು ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. ಉತ್ತಮ ಚಿತ್ರಗಳನ್ನು ನಾವು ಸೂಪರ್ ಹಿಟ್ ಮಾಡಬಹುದು. ಜನರು ಈಗ ತಮಗೆ ಬೇಕಾದ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶವನ್ನು ಹೊಂದಿದ್ದಾರೆ. ಇದನ್ನು ನಾವು ಸದುಪಯೋಗ  ಪಡಿಸಿಕೊಂಡು ನಮ್ಮ ಚಿತ್ರಗಳನ್ನು ಬೇರೆ ಬೇರೆ ಭಾಷೆಯಲ್ಲೂ ತೆರೆಕಾಣುವಂತೆ ಮಾಡಬೇಕು. ಮನರಂಜನೆಗೆ .ಯಾವುದೇ ಭಾಷೆ ಅಥವಾ ಪ್ರದೇಶದ ಗಡಿ ಇಲ್ಲ. ಓರ್ವ ಕಲಾವಿದನಾಗಿ ಎಲ್ಲ ಭಾಷೆಗಳಲ್ಲೂ ಕೆಲಸ ಮಾಡಲು ನಾನು ಇಷ್ಟ ಪಡುತ್ತೇನೆ. ಪ್ರಮುಖವಾಗಿ ಹಿಂದಿ ಟಿವಿಲೋಕ  ಮತ್ತು ಬಾಲಿವುಡ್ ಎಂದು ಪ್ರಭು ಹೇಳಿದ್ದಾರೆ.

ಪ್ರಸ್ತುತ ಪ್ರಭು ಕನ್ನಡದ ಮೈಸೂರು ಡೈರೀಸ್ ಮತ್ತು ಮಾಯಾ ಕನ್ನಡಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp