ಕೊರೋನಾ ಹೋರಾಟಕ್ಕೆ ನಟ ಪ್ರಭಾಸ್ 4 ಕೋಟಿ ರು ದೇಣಿಗೆ

ಕೊರೋನಾ ವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರಣಕ್ಕಾಗಿ  ಬಾಹುಬಲಿ ಖ್ಯಾತಿಯ ನಟ, ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್  4 ಕೋಟಿ ರೂ. ಕೊಡುಗೆ ನೀಡಿದ್ದಾರೆ.
ಪ್ರಭಾಸ್
ಪ್ರಭಾಸ್

ಹೈದರಾಬಾದ್ : ಕೊರೋನಾ ವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರಣಕ್ಕಾಗಿ  ಬಾಹುಬಲಿ ಖ್ಯಾತಿಯ ನಟ, ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್  4 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ಪ್ರಭಾಸ್ ಗುರುವಾರ 4 ಕೋಟಿ ರೂ. ನೀಡಿದ್ದಾರೆ. ಇದರಲ್ಲಿ 3 ಕೋಟಿ ರೂ.ಗಳನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಲಾಗಿದ್ದರೆ, ತಲಾ 50 ಲಕ್ಷ ರೂ.ಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಪ್ರಭಾಸ್ ಇತ್ತೀಚೆಗೆ ಜಾರ್ಜಿಯಾದಿಂದ ಹಿಂದಿರುಗಿದರು, ಅಲ್ಲಿ ಅವರು ಪೂಜಾ ಹೆಗ್ಡೆ ಅವರೊಂದಿಗೆ ತಾತ್ಕಾಲಿಕವಾಗಿ "ಪ್ರಭಾಸ್ 20" ಎಂಬ ಶೀರ್ಷಿಕೆಯ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿದ್ದರು. ಹಿಂದಿರುಗಿದ ನಂತರ ಇಬ್ಬರೂ ನಟರು 14 ದಿನಗಳ ಕಾಲ ಕ್ವಾರೆಂಟೈನ್ ಗೆ ತೆರಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com