ಸಿನಿಮಾ‌ ಕಾರ್ಮಿಕರಿಗೆ 37 ಲಕ್ಷ ರೂ. ಧನಸಹಾಯ ಮಾಡಿದ ನಿಖಿಲ್ ಕುಮಾರಸ್ವಾಮಿ

ಕನ್ನಡ‌ ಚಿತ್ರರಂಗದ ಯುವರಾಜ ನಿಖಿಲ್ ಕುಮಾರ್ ಅವರ ಹೃದಯ ಕನ್ನಡ ಚಿತ್ರರಂಗದ ಕಾರ್ಮಿಕರಿಗಾಗಿ ಮಿಡಿದಿದೆ. ಈ ಮೂಲಕ ತಂದೆ ಎಚ್.ಡಿ ಕುಮಾರಸ್ವಾಮಿ ರೀತಿಯಲ್ಲಿಯೇ ತಾವೊಬ್ಬ ಹೃದಯವಂತ ಎನ್ನವುದನ್ನು ಸಾಬೀತು ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನೀಡಿದ ಚೆಕ್ ಗಳನ್ನು​ ಆಯಾ ವಿಭಾಗಗಳಿಗೆ ತಲಿಪಿಸಲಾಯಿತು.
ನಿಖಿಲ್ ಕುಮಾರಸ್ವಾಮಿ ನೀಡಿದ ಚೆಕ್ ಗಳನ್ನು​ ಆಯಾ ವಿಭಾಗಗಳಿಗೆ ತಲಿಪಿಸಲಾಯಿತು.

ಬೆಂಗಳೂರು: ಕನ್ನಡ‌ ಚಿತ್ರರಂಗದ ಯುವರಾಜ ನಿಖಿಲ್ ಕುಮಾರ್ ಅವರ ಹೃದಯ ಕನ್ನಡ ಚಿತ್ರರಂಗದ ಕಾರ್ಮಿಕರಿಗಾಗಿ ಮಿಡಿದಿದೆ. ಈ ಮೂಲಕ ತಂದೆ ಎಚ್.ಡಿ ಕುಮಾರಸ್ವಾಮಿ ರೀತಿಯಲ್ಲಿಯೇ ತಾವೊಬ್ಬ ಹೃದಯವಂತ ಎನ್ನವುದನ್ನು ಸಾಬೀತು ಮಾಡಿದ್ದಾರೆ.

ಕೊರೋನೋ ವೈರಾಣು ಸೋಂಕಿನಿಂದ ಚಿತ್ರರಂಗದ ಚಟಿವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ದಿನನಿತ್ಯದ ಕಾಯಕ ನಂಬಿ ಜೀವನ ಸಾಗಿಸುತ್ತಿದ್ದ ಚಲನಚಿತ್ರ ಕಾರ್ಮಿಕರ ಬದುಕು ಆಂತಕಕ್ಕೆ ಸಿಲುಕುವಂತಾಗಿದೆ.

ಇದನ್ನು ಅರಿತ ನಟ ಹಾಗು ರಾಜಕಾರಣಿ ನಿಖಿಲ್ ಕುಮಾರ್ ತಂದೆ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ ಅವರ ಸಲಹೆಯಂತೆ ಚಲನಚಿತ್ರ ರಂಗದಲ್ಲಿ ದುಡಿಯುತ್ತಿರುವ 20ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಸದಸ್ಯರಿಗಾಗಿ 37 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಹಣ ಕಾರ್ಮಿಕರ ಖಾತೆಗೆ ನೇರ ಸಂದಾಯವಾಗಲಿದೆ.

ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಮೂಲಕ ಚಲನ‌ಚಿತ್ರ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ‌ ಕಾರ್ಮಿಕರಿಗಾಗಿ 37 ಲಕ್ಷ ರೂಪಾಯಿ ಮೊತ್ತದ ಚೆಕ್ ಹಸ್ತಾಂತರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮೂಲತಃ ಚಿತ್ರ ನಿರ್ಮಾಪಕರು ಆಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕಷ್ಟಗಳನ್ನು ಅರಿತು ಪುತ್ರನ‌ ಆಸೆಯಂತೆ ಕಾರ್ಮಿಕರಿಗೆ ನೆರವು ನೀಡಿದ್ದಾರೆ.

ಚಲನಚಿತ್ರ ಕಾರ್ಮಿಕರಿಗೆ 32 ಲಕ್ಷ‌ ಮತ್ತು ಕಿರಿತೆರೆ ಕಾರ್ಮಿಕರಿಗೆ 5 ಲಕ್ಷ ಸೇರಿ ಒಟ್ಟು 37 ಲಕ್ಷ ರೂಪಾಯಿ ನೀಡಿದ್ದಾರೆ.

ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕಾರ್ಮಿಕರಿಗೆ ಅಗತ್ಯವಿರುವ ಆಹಾರ ಧಾನ್ಯ ವಿತರಿಸುಲು ಮುಂದಾಗಿದ್ದರು. ಆದರೆ ‌ಸರಕು ಸಾಗಾಣೆ ಸಮಸ್ಯೆಯಿಂದಾಗಿ ಎಲ್ಲರಿಗೂ ತಲುಪಿಸುವುದು ಕಷ್ಟ ಎನ್ನುವುದನ್ನು ಅರಿತು ಸ್ವತಃ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ಮುಂದಾಗಿದ್ದಾರೆ.

ಸಾ.ರಾ ಗೋವಿಂದು ಅವರು ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವ 500 ಕಾರ್ಮಿಕರಿಗೂ ನೆರವು ನೀಡಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ ಅವರು ಕಿರಿತೆರೆ ಕಲಾವಿದರಿಗೂ 5 ಲಕ್ಷ ಸಹಾಯ ಮಾಡಿದ್ದಾರೆ.

ಕಿರುತೆರೆಯ ಟೆಲಿವಿಷನ್ ಅಸೋಸಿಯೇಷನ್ ಪರವಾಗಿ ಹಿರಿಯ ನಟಿ ಅಭಿನಯ ಚೆಕ್ ಪಡೆದರು.

ನಿಖಿಲ್ ಕುಮಾರಸ್ವಾಮಿ ಅವರು ನೀಡಿರುವ ಸುಮಾರು 32 ಲಕ್ಷ ರೂಪಾಯಿಯನ್ನು 20ಕ್ಕೂ ಹೆಚ್ಚು ಕಾರ್ಮಿಕ‌ ಸಂಘಟನೆ ‌ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ಹಾಕಲು ಚಲನಚಿತ್ರ ಕಾರ್ಮಿಕರ ಒಕ್ಕೂಟ ನಿರ್ಧರಿಸಿದೆ.

 
 
 
 
 
 
 
 
 
 
 
 
 
 
 

A post shared by Nikhil Kumar (@nikhilgowda_jaguar) on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com