ಕೊರೋನಾವೈರಸ್ ಬಗ್ಗೆ ಒಂಬತ್ತು ವರ್ಷದ ಹಿಂದೆಯೇ ಹೇಳಿತ್ತು ಈ ಹಾಲಿವುಡ್ ಚಿತ್ರ!

ಇಂದು ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್ ಮಹಾಮಾರಿಯ ಕುರಿತಂತೆ ಹಾಲಿವುಡ್ ಚಿತ್ರವೊಂದರಲ್ಲಿ ಒಂಬತ್ತು ವರ್ಷಗಳ ಹಿಂದೆಯೇ ತೋರಿಸಲಾಗಿತ್ತು!  2011ರಲ್ಲಿತೆರೆಕಂಡ 'ಕಂಟೇಜನ್‌'  ಎಂಬ ಇಂಗ್ಲೀಷ್ ಚಿತ್ರದಲ್ಲಿ ಕೊರೋನಾವೈರಸ್ ಮಹಾಮಾರಿಯ ಕುರಿತು ಹೇಳಲಾಗಿದೆ.
ಕಂಟೇಜನ್‌'
ಕಂಟೇಜನ್‌'

ಇಂದು ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್ ಮಹಾಮಾರಿಯ ಕುರಿತಂತೆ ಹಾಲಿವುಡ್ ಚಿತ್ರವೊಂದರಲ್ಲಿ ಒಂಬತ್ತು ವರ್ಷಗಳ ಹಿಂದೆಯೇ ತೋರಿಸಲಾಗಿತ್ತು!  2011ರಲ್ಲಿತೆರೆಕಂಡ 'ಕಂಟೇಜನ್‌'  ಎಂಬ ಇಂಗ್ಲೀಷ್ ಚಿತ್ರದಲ್ಲಿ ಕೊರೋನಾವೈರಸ್ ಮಹಾಮಾರಿಯ ಕುರಿತು ಹೇಳಲಾಗಿದೆ.

ಸ್ಟೀವನ್‌ ಸೋಡರ್‌ಬರ್ಗ್‌ ನಿರ್ದೇಶನದ 'ಕಂಟೇಜನ್‌' ಚಿತ್ರದಲ್ಲಿ ಗ್ವಿನೆತ್ ಪಾಲ್ಟ್ರೋ, ಮ್ಯಾಟ್ ಡಮನ್, ಜೂಡ್ ಲಾ ಮತ್ತು ಕೇಟ್ ವಿನ್ಸ್ಲೆಟ್ ಅವರಂತಹ ನಟರು ನಟಿಸಿದ್ದರು. ಕೊರೋನಾ ಹಾವಳಿಯ ಈ ದಿನಗಳಲ್ಲಿ ಒಂಬತ್ತು ವರ್ಷಗಳ ಹಿಂದಿನ ಚಿತ್ರವೀಗ ಮತ್ತೆ ಎಲ್ಲೆಡೆ ಸುದ್ದಿಯಲ್ಲಿದೆ.ಒಟಿಟಿ ಸ್ಟ್ರೀಮಿಂಗ್‌ ಆ್ಯಪ್‌ ಗಳಲ್ಲಿ ಜನರು ಈ ಚಿತ್ರವನ್ನು ಹುಡುಕಿ ವೀಕ್ಷಿಸುತ್ತಿದ್ದಾರೆ.

ಒಂಬತ್ತು ವರ್ಷಗಳ ನಂತರ. ಯುಎಸ್ ಕೊರೋನಾಗಾಗಿ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ಐಟ್ಯೂನ್ಸ್ ಇದನ್ನು ಈಗ ಹೆಚ್ಚು ರೆಂಟಲ್ ಪಡೆದ  ನಾಲ್ಕನೇ ಚಲನಚಿತ್ರವೆಂದು ಪಟ್ಟಿ ಮಾಡಿದೆ. ಇದು 2020 ರಲ್ಲಿ ವಾರ್ನರ್ ಬ್ರದರ್ಸ್ ಕ್ಯಾಟಲಾಗ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಎರಡನೇ ಚಲನಚಿತ್ರವಾಗಿದೆ.

ಕಂಟೇಜನ್‌ ಚಿತ್ರದಲ್ಲಿ ದ ಘಟನೆಗಳು ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಮಾರಣಾಂತಿಕ ವೈರಸ್ ಹರಡುವಿಕೆಯನ್ನು ಹೇಳುತ್ತದೆ. ಚಿತ್ರದ ಒಂದು ಪಾತ್ರ ಮಕಾವೊದಲ್ಲಿನ ಬಾಣಸಿಗ ಸೋಂಕಿದ್ದ  ಹಂದಿಮಾಂಸವನ್ನುಮುಟ್ಟಿದ ಬಳಿಕ ಕೈಗಳನ್ನು ತೊಳೆಯದೆ  ಗ್ವಿನೆತ್ ಪಾಲ್ಟ್ರೋ ಅವರೊಂದಿಗೆ ಕೈಕುಲುಕುತ್ತದೆ.ಚಿತ್ರದಲ್ಲಿ ಗ್ವಿನೆತ್ ಪಾಲ್ಟ್ರೋ ಪಾತ್ರವು ಹಾಂಗ್ ಕಾಂಗ್ ನಲ್ಲಿ ವಿಚಿತ್ರವಾದ ಕಾಯಿಲೆಗೆ ತುತ್ತಾದ ನಂತರ ಯುಎಸ್ಎಗೆ ಮರಳುವ  ಹಾಗೂ ಅಲ್ಲಿ ಕೆಲ ದಿನಗಳ ನಂತರ ಸಾವನ್ನಪ್ಪುವ ದೃಶ್ಯದಲ್ಲಿ ನಟಿಸಿದ್ದಾರೆ. ಆಕೆ ಸತ್ತಾಗ ರೋಗಲಕ್ಷಣಗಳಿದ್ದು ಬಳಿಕ ಅವು ಏಕಾಏಕಿ ಹಬ್ಬುತ್ತದೆ.

ಇಂದು ಇಡೀ ಜಗತ್ತಿನ ವೈದ್ಯರು 'ಕೊರೊನಾ'ಹೇಗೆ ಹರಡುತ್ತದೆ ಎಂದು ಹೇಳುತ್ತಾ ಜನಜಾಗೃತಿ ಮೂಡಿಸುತ್ತಿದ್ದಾರೆಯೋ ಅದೇ ರೀತಿಯಲ್ಲಿ 9 ವರ್ಷಗಳ ಹಿಂದಿನ ಈ ಚಿತ್ರದಲ್ಲಿ  ಸಹ ದೃಶ್ಯಗಳಿರುವುದು ಕಾಕತಾಳೀಯವಾದರೂ ಸತ್ಯ. ಹೀಗಾಗಿ ಇದನ್ನು ಈಗ ವಿಶ್ವಾದ್ಯಂತ ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com