ಕೊರೋನಾ, ಸದ್ಯದಲ್ಲೇ ಮಾಡ್ತಿವಿ ತಿಥಿನಾ! ಚಂದನ್ ಶೆಟ್ಟಿ ಹಾಡಿಗೆ ನಿವೇದಿತಾ ಡ್ಯಾನ್ಸ್ - ವಿಡಿಯೋ ವೈರಲ್ 

ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೋವಿಡ್-19 ಸೋಂಕು ಕುರಿತು ಕನ್ನಡ ರಾಂಪರ್ ಚಂದನ್ ಶೆಟ್ಟಿ ಹಾಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನಿವೇದಿತ ಗೌಡ, ಚಂದನ್ ಶೆಟ್ಟಿ
ನಿವೇದಿತ ಗೌಡ, ಚಂದನ್ ಶೆಟ್ಟಿ

ಬೆಂಗಳೂರು: ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೋವಿಡ್-19 ಸೋಂಕು ಕುರಿತು ಕನ್ನಡ ರಾಂಪರ್ ಚಂದನ್ ಶೆಟ್ಟಿ ಹಾಡಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕೊರೋನಾ, ಕೊರೋನಾ, ಕೊರೋನಾ ಸದ್ಯದಲ್ಲೇ ಮಾಡ್ತಿವಿ ತಿಥಿನಾ ಎಂಬ ಹಾಡನ್ನು ಚಂದನ್ ಶೆಟ್ಟಿ ಹಾಡುತ್ತಿದ್ದರೆ, ಅವರ ಪಕ್ಕದಲ್ಲಿರುವ  ಪತ್ನಿ ನಿವೇದಿತಾ ಗೌಡ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.  

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ  ಕೆಲವರು ಮೆಚ್ಚುಗೆ ಕೊಂಡಿದ್ದರೆ ಮತ್ತೆ ಕೆಲವರು ಟೀಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾಗೃತಿ ಮೂಡಿಸುವುದನ್ನು ಬಿಟ್ಟು  ಈ ರೀತಿಯ ಹಾಡು ಬೇಕಿತ್ತಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com