ಕಾರ್ಮಿಕರ ದಿನದ ಪ್ರಯುಕ್ತ ರಾಬರ್ಟ್ ಮೇಕಿಂಗ್ ವಿಡಿಯೋ ಬಿಡುಗಡೆ!

ಇಂದು ಕಾರ್ಮಿಕರ ದಿನಾಚರಣೆ. ಹಾಗಾಗಿ ಬೆಳ್ಳೆ ತೆರೆ  ಹಿಂದೆ ದುಡಿದಿರುವ ಎಲ್ಲ ಕಾರ್ಮಿಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ರಾಬರ್ಟ್ ಚಿತ್ರತಂಡದ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ.
ರಾಬರ್ಟ್ ಚಿತ್ರತಂಡ
ರಾಬರ್ಟ್ ಚಿತ್ರತಂಡ

ಬೆಂಗಳೂರು: ಇಂದು ಕಾರ್ಮಿಕರ ದಿನಾಚರಣೆ. ಹಾಗಾಗಿ ಬೆಳ್ಳೆ ತೆರೆ  ಹಿಂದೆ ದುಡಿದಿರುವ ಎಲ್ಲ ಕಾರ್ಮಿಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ರಾಬರ್ಟ್ ಚಿತ್ರತಂಡದ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ.

1. 37 ನಿಮಿಷದ ಈ ಸ್ಪೆಷಲ್ ವಿಡಿಯೋದಲ್ಲಿ  ನಾಯಕ ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಜೊತೆಗೆ ದುಡಿದಿರುವ ಕಾರ್ಮಿಕರ ಶ್ರಮವನ್ನು ತೋರಿಸಲಾಗಿದೆ. 

ಬೆಳ್ಳಿ ಪರದೆಯ ಹಿಂದಿನ ನಿಜವಾದ ಮಿಂಚು ತಾಂತ್ರಿಕ ವರ್ಗ ಎಂದು ವಿಡಿಯೋ ಕೊನೆಯಲ್ಲಿ ಹೇಳಲಾಗಿದ್ದು,  ಕಾರ್ಮಿಕ ದಿನಾಚರಣೆಯ ಶುಭಾಶಯವನ್ನು ಕೋರಲಾಗಿದೆ. 

ರಾಬರ್ಟ್ ಸಿನಿಮಾ ಹಲವು ಕಾರಣಗಳಿಂದಾಗಿ ಸ್ಯಾಂಡಲ್ ವುಡ್ ನಲ್ಲಿ  ಕೌತುಕ ಮೂಡಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್‌ ಮತ್ತು ಹಾಡುಗಳು ಧೂಳೆಬ್ಬಿಸಿವೆ. ಅದ್ದೂರಿ ಮೇಕಿಂಗ್‌ನಿಂದ ಭರವಸೆ ಮೂಡಿಸಿದೆ. ಬೇರೆ ಬೇರೆ ಗೆಟಪ್‌ಗಳಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಆಶಾ ಭಟ್‌ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com