'ಮನಿ ಹೀಸ್ಟ್' ಚಿತ್ರ ರಿಮೇಕ್ ಆದರೆ ಪ್ರೊಫೆಸರ್ ಪಾತ್ರ ಯಾರಿಗೆ? ಅಲೆಕ್ಸ್ ರೊಡ್ರಿಗೋ ಆಯ್ಕೆ ಮಾಡಿದ್ದು ಯಾರನ್ನು?

ಸ್ಪಾನಿಷ್ ಭಾಷೆಯ ಅಪರಾಧ ಕಥೆಯನ್ನೊಳಗೊಂಡ ಸಿನೆಮಾ ಸರಣಿ 'ಮನಿ ಹೀಸ್ಟ್' ನೆಟ್ ಫ್ಲಿಕ್ಸ್ ನಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಜನಪ್ರಿಯ ಚಿತ್ರವಾಗಿದೆ.
ಪ್ರೊಫೆಸರ್ ಪಾತ್ರಧಾರಿ ವಿಜಯ್
ಪ್ರೊಫೆಸರ್ ಪಾತ್ರಧಾರಿ ವಿಜಯ್

ಸ್ಪಾನಿಷ್ ಭಾಷೆಯ ಅಪರಾಧ ಕಥೆಯನ್ನೊಳಗೊಂಡ ಸಿನೆಮಾ ಸರಣಿ 'ಮನಿ ಹೀಸ್ಟ್' ನೆಟ್ ಫ್ಲಿಕ್ಸ್ ನಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಜನಪ್ರಿಯ ಚಿತ್ರವಾಗಿದೆ.

ಇದರ ನಿರ್ದೇಶಕರು ಅಲೆಕ್ಸ್ ರೊಡ್ರಿಗೊ, ಅಲ್ವರೊ ಮೊರ್ಟೆಯ ಪಾತ್ರದ ಸುತ್ತದ ಕಥೆ ಇದಾಗಿದ್ದು ಈ ಪಾತ್ರದ ಜೊತೆಗೆ ಅನೇಕ ವೃತ್ತಿಪರ ಕ್ರಿಮಿನಲ್ ಗಳು ಕೆಂಪು ಜಂಪ್ ಸೂಟ್ ನಲ್ಲಿ, ಸಲ್ವದೊರ್ ದಲಿ ಮಾಸ್ಕ್ ಧರಿಸಿ ಸ್ಪೈನ್ ನ ರಾಯಲ್ ಮಿಂಟ್ ನ್ನು ಕದಿಯುತ್ತಾರೆ.ಇದೊಂದು ಅಪರಾಧ ಹಿನ್ನಲೆಯ ಕಥೆ ಮಾತ್ರವಲ್ಲದೆ ಪ್ರೇಕ್ಷಕರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಬಗ್ಗೆ ಚರ್ಚಿಸಲು ಅನುವು ಮಾಡಿಕೊಡುತ್ತದೆ.

ಇದನ್ನು ಭಾರತದ ಭಾಷೆಗೆ ರಿಮೇಕ್ ಮಾಡಿದರೆ ತಾವು ನಟಿಸಬೇಕು ಎಂದು ಹಲವು ಕಲಾವಿದರು ಆಸೆ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಯಾರು ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರಪ್ರೇಮಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದೂ ಉಂಟು.

ಇತ್ತೀಚೆಗೆ ಬಿಹೈಂಡ್ ವುಡ್ ಸಂವಾದದ ವೇಳೆ ಮನಿ ಹೈಸ್ಟ್ ನಿರ್ದೇಶಕ ಅಲೆಕ್ಸ್ ರೊಡ್ರಿಗೊ ಅವರಲ್ಲಿ ಭಾರತದಲ್ಲಿ ಈ ಪಾತ್ರ ಯಾರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಕೇಳಲಾಗಿತ್ತು. ಆಗ ಅವರು ಆಯ್ಕೆ ಮಾಡಿದ್ದು ತಮಿಳು ನಟ ವಿಜಯ್ ಅವರನ್ನು. ಸೆರ್ಗಿಯೊ ಎಲ್ ಪ್ರೊಫೆಸರ್ ಮರ್ಖ್ಯಿನಾ ಪಾತ್ರವನ್ನು ವಿಜಯ್ ಮತ್ತು ಬೊಗೊಟ ಪಾತ್ರವನ್ನು ಅಜಿತ್ ಕುಮಾರ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದರು.

ಬಾಲಿವುಡ್ ನಟ ಶಾರೂಕ್ ಖಾನ್ ಬರ್ಲಿನ್ ಮತ್ತು ರಣವೀರ್ ಸಿಂಗ್ ದೆನ್ವೆರ್ , ಮಹೇಶ್ ಬಾಬು ಮತ್ತು ಸೂರ್ಯ ಡಾನ್ ಪಾತ್ರಗಳಾದ ತಮಯೊ ಮತ್ತು ಸೌರೆಝ್ ಪಾತ್ರ ನಿಭಾಯಿಸಬೇಕೆಂದು ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com