ಹಿರಿಯ ಸಿನಿ ಛಾಯಾಗ್ರಾಹಕ ಎಸ್‌.ವಿ. ಶ್ರೀಕಾಂತ್‌ ನಿಧನ

ಹಿರಿಯ ಸಿನಿ ಛಾಯಾಗ್ರಾಹಕ  ಎಸ್‌.ವಿ. ಶ್ರೀಕಾಂತ್‌(87) ವಿಧಿವಶರಾಗಿದ್ದಾರೆ. ಡಾ. ರಾಜ್ ಕುಮಾರ್ ಅಭಿನಯದ 'ಬಬ್ರುವಾಹನ' ಚಿತ್ರದ ಛಾಯಾಗ್ರಹಣ ನೆರವೇರಿಸಿದ್ದ ಶ್ರೀಕಾಂತ್ ಗುರುವಾರ ನಿಧನರಾಗಿದ್ದು ಕನ್ನಡ ಚಿತ್ರರಂಗದ ಗಣ್ಯರು ಹಿರಿಯರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

Published: 08th May 2020 01:12 PM  |   Last Updated: 08th May 2020 01:25 PM   |  A+A-


ಎಸ್.ವಿ.ಶ್ರೀಕಾಂತ್

Posted By : Raghavendra Adiga
Source : Online Desk

ಹಿರಿಯ ಸಿನಿ ಛಾಯಾಗ್ರಾಹಕ  ಎಸ್‌.ವಿ. ಶ್ರೀಕಾಂತ್‌(87) ವಿಧಿವಶರಾಗಿದ್ದಾರೆ. ಡಾ. ರಾಜ್ ಕುಮಾರ್ ಅಭಿನಯದ 'ಬಬ್ರುವಾಹನ' ಚಿತ್ರದ ಛಾಯಾಗ್ರಹಣ ನೆರವೇರಿಸಿದ್ದ ಶ್ರೀಕಾಂತ್ ಗುರುವಾರ ನಿಧನರಾಗಿದ್ದು ಕನ್ನಡ ಚಿತ್ರರಂಗದ ಗಣ್ಯರು ಹಿರಿಯರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನವರಾದ ಶ್ರೀಕಾಂತ್  ಬಿ.ಎಸ್ಸಿ ಪದವಿ ವ್ಯಾಸಂಗದ ನಂತರ ಚೆನ್ನೈನ  ಗೋಲ್ಡನ್‌ ಸ್ಡುಡಿಯೋದಲ್ಲಿ ಸೇರಿದರು. ಅಲ್ಲಿಂದ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದ ಶ್ರೀಕಾಂತ್ 'ಟ್ರಿಕ್ ಫೋಟೋಗ್ರಫಿ ಎಕ್ಸ್‌ಪರ್ಟ್'  ಎಂದು ಹೆಸರಾಗಿದ್ದರು.

ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆಯಾಗದೆ ಇದ್ದ ಕಾಲದಲ್ಲೇ ದ್ವಿಪಾತ್ರ ಪ್ರಯೋಗ ಸಹ ಮಾಡಿದ್ದ ಶ್ರೀಕಾಂತ್ ಬಬ್ರುವಾಹನ ಚಿತ್ರದ ಛಾಯಾಗ್ರಹಣ ಕಾರ್ಯ ಸಿನಿರಂಗದ ಗಣ್ಯರ ಹುಬ್ಬೇರಿಸಿತ್ತು.

'ಸಾಕ್ಷಾತ್ಕಾರ', 'ಗೆಜ್ಜೆಪೂಜೆ', 'ಮಾರ್ಗದರ್ಶಿ', 'ಉಪಾಸನೆ', 'ಜೀವನ ಚೈತ್ರ', 'ತ್ರಿಮೂರ್ತಿ' ಸೇರಿ ಹಲವಾರು ಶ್ರೇಷ್ಠ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಶ್ರೀಕಾಂತ್ ಅವರಿಗೆ ಮೂರುಬಾರಿ ರಾಜ್ಯ ಪ್ರಶಸ್ತಿ  ಸಹ ಲಭಿಸಿತ್ತು.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp