ಹರಿಪ್ರಿಯಾ ಎಂಬ ಹೆಸರ ಹಿಂದಿನ ಕಥೆ ಗೊತ್ತಾ?

ಕನ್ನಡದ ಹೆಸರಾಂತ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ತೆರೆದಿಟ್ಟಿದ್ದಾರೆ. ಹೌದು ಇತ್ತೀಚೆಗೆ ತಾವು ಪ್ರಾರಂಭಿಸಿರುವ ಬ್ಲಾಗ್ ನಲ್ಲಿ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ಬರೆದುಕೊಂಡಿದ್ದಾರೆ.
ಹರಿಪ್ರಿಯಾ
ಹರಿಪ್ರಿಯಾ

ಕನ್ನಡದ ಹೆಸರಾಂತ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ತೆರೆದಿಟ್ಟಿದ್ದಾರೆ. ಹೌದು ಇತ್ತೀಚೆಗೆ ತಾವು ಪ್ರಾರಂಭಿಸಿರುವ ಬ್ಲಾಗ್ ನಲ್ಲಿ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ಬರೆದುಕೊಂಡಿದ್ದಾರೆ.

"ಅನೇಕರಿಗೆ ನನ್ನ ಜನ್ಮ ಹೆಸರು ಶ್ರುತಿ ಎಂದುತಿಳಿದಿಲ್ಲ, ಆದರೆ ಹಾಗೆ ತಿಳಿದಿದ್ದವರು ನಾನೇಕೆ ಹರಿಪ್ರಿಯಾ ಎಂದು ಹೆಸರನ್ನು ಬದಲಿಸಿದೆ ಎಂದು ಕೇಳುತ್ತಾರೆ. ತುಳು ಚಿತ್ರದಲ್ಲಿ ನನಗೆ ಮೊದಲ ಬಾರಿ ಅಭಿನಯಿಸಲು ಅವಕಾಶ ಸಿಕ್ಕಾಗ ನಾನು ಪಿಯು ಮೊದಲ ವರ್ಷದಲ್ಲಿ ಕಲಿಯುತ್ತಿದ್ದೆ. ನನ್ನ ಮೊದಲ ತುಳು ಚಲನಚಿತ್ರ ‘ಬದಿ’ ಅನ್ನು ನೀವು ನೋಡಿದರೆ, ರೋಲಿಂಗ್ ಕ್ರೆಡಿಟ್‌ಗಳಲ್ಲಿ ಅವರು ನನ್ನ  ಹೆಸರನ್ನು ಶ್ರುತಿ  ಎಂದು ತೋರಿಸಿರುವುದು ಕಾಣುತ್ತದೆ. ಹಾಗೆ ನಾನು ತುಳು ಚಿತ್ರದಲ್ಲಿ ನಟಿಸುತ್ತಿದ್ದಾಗ ಕನ್ನಡ ಚಿತ್ರೋದ್ಯಮದಿಂದಲೂ ನನಗೆ ಆಫರ್ ಬಂದವು. ಆಗ ನಾನು ನನ್ನ ಹೆಸರನ್ನು ಬದಲಿಸಿಕೊಳ್ಲುವಂತೆ ಬದಿ ಚಿತ್ರದ ನಿರ್ದೇಶಕ ಸುಧಾಕರ್ ಬನ್ನಂಜೆ ಸೂಚಿಸಿದ್ದರು. ಏಕೆಂದರೆ ಕನ್ನಡದಲ್ಲಿ ಶ್ರುತಿ ಹೆಸರಿನ ಖ್ಯಾತ ನಟಿ ಅದಾಗಲೇ ಇದ್ದರು. 

"ನಿರ್ದೇಶಕ ಬನ್ನಂಜೆ ಜ್ಯೋತಿಷ್ಯದಲ್ಲಿಯೂ ಪರಿಣತರಾಗಿದ್ದ ಕಾರಣ ನಾನು  ‘ಹೆಚ್’ ಅಕ್ಷರದಿಂದ ಪ್ರಾರಂಭಿಸಿ ನನ್ನ ಹೆಸರನ್ನು ಬದಲಾಯಿಸುವಂತೆ ತನ್ನ ತಾಯಿಗೆ ಸೂಚಿಸಿದರು. ಹಲವಾರು ಹೆಸರುಗಳ ಆಯ್ಕೆಪಟ್ಟಿಯನ್ನು ಹುಡುಕಿದ ನಂತರ ಅಂತಿಮವಾಗಿಹರಿಪ್ರಿಯಾ ಎಂಬ ಹೆಸರನ್ನು ಆರಿಸಿದೆ. ನಾನು ಭಾವಿಸಿದ ಸಕಾರಾತ್ಮಕ ಅರ್ಥ ಹಾಗೂ ಸ್ವರಗಳು ಮಾತ್ರವಲ್ಲ ಹರಿಪ್ರಿಯಾ ಎಂದರೆ ಲಕ್ಷ್ಮಿ  ಎಂಬ ಕಾರಣದಿಂದ ಹರಿಪ್ರಿಯಾ ಎಂಬ ಹೆಸರನ್ನು ಇಷ್ಟಪಟ್ಟೆ- ಹರಿಪ್ರಿಯ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.

ಮುಂದುವರಿದು " ಈಗ ನಾನು ನನ್ನ ಹೆಸರ ಬಗ್ಗೆ ಯೋಚಿಸಿದಾಗ ಹರಿಪ್ರಿಯಾ 12 ವರ್ಷಗಳ ಹಿಂದೆ ಅಸ್ತಿತ್ವದಲ್ಲಿರಲಿಲ್ಲ ಎಂದು ನಂಬುವುದು ಕಷ್ಟವಾಗುತ್ತದೆ. ಆದರೆ ಶ್ರುತಿ ಈಗಲೂ ಇದ್ದಾಳೆ. ಹರಿಪ್ರಿಯಾ ಎಂಬ ಹೆಸರಿನಿಂದ  ಲಕ್ಷಾಂತರ ಜನರಿಂದ ನಾನು ಪ್ರೀತಿಸಲ್ಪಟ್ಟಿದ್ದೇನೆ ಮತ್ತು ಗುರುತಿಸಲ್ಪಟ್ಟಿದ್ದೇನೆ, ಆದರೆ ನನ್ನ ತಂದೆಗೆ ಈ ಬಗ್ಗೆ ಗೊತ್ತಿಲ್ಲ ಅಥವಾ ಆ ಹೆಸರಿನಿಂದ ನನ್ನನ್ನು ಅವರು ಕರೆದಿಲ್ಲ ಎಂದು ನನಗೆ ನೋವಿದೆ. ಅವರು ಒಮ್ಮೆಯಾದರೂ ನನ್ನನ್ನು ಹರಿಪ್ರಿಯಾ ಎಂದು ಕರೆಯಬೇಕೆಂದು ನಾನು ಬಯಸುತ್ತೇನೆ. ಹೇಗಾದರೂ, ನಾನು ನನ್ನ ಹೆಸರನ್ನು ಬದಲಾಯಿಸಿದ ನಂತರ, ನನ್ನ ಮೊದಲ ಕನ್ನಡ ಚಲನಚಿತ್ರದಿಂದ ರೋಲಿಂಗ್ ಕ್ರೆಡಿಟ್‌ಗಳಲ್ಲಿ ಹರಿಪ್ರಿಯಾ ಎಂದೇ ನನ್ನನ್ನು ತೋರಿಸಲು ಪ್ರಾರಂಭಿಸಿದ್ದರು. ತಮಾಷೆಯ ಸಂಗತಿಯೆಂದರೆ, ನನ್ನ ಕುಟುಂಬವು ನನ್ನನ್ನು ಹರಿಪ್ರಿಯಾ ಎಂಬ ಹೆಸರಿನಿಂದ ಕರೆದಾಗ ನಾನು ಎಂದಿಗೂ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ಅವರ ಪಾಲಿಗೆ ನಾನೆಂದಿಗೂ ಶ್ರುತಿಯಾಗಿಯೇ ಇದ್ದೆ. 

"ಆದ್ದರಿಂದ, ಇಲ್ಲಿಯವರೆಗೆ ನನ್ನ ತಾಯಿ, ಸಹೋದರ ಮತ್ತು ಸಂಬಂಧಿಕರು ನನ್ನನ್ನು ಶ್ರುತಿ ಎಂದು ಕರೆಯುತ್ತಾರೆ. ನನ್ನ ಎರಡೂ ಹೆಸರುಗಳು ನನಗೆ ತುಂಬಾ ಪ್ರಿಯವಾಗಿವೆ ಮತ್ತು ನಾನು ಯಾವುದನ್ನೂ ಬಿಡಲು ಬಯಸುವುದಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ನಾನು ಯಾವಾಗಲೂ ಶ್ರುತಿಯಾಗಿರುತ್ತೇನೆ, ಆದರೆ ಪರದೆಯ ಮೇಲೆ, ನಾನು ಯಾವಾಗಲೂ ನಿಮ್ಮ ಪ್ರಿಯ ಹರಿಪ್ರಿಯಾ ಆಗಿರುತ್ತೇನೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com