ಅನೂಪ್ ಭಂಡಾರಿಯ 'ಫ್ಯಾಂಟಮ್'ಗಾಗಿ ಡಿಫರೆಂಟ್ ಲುಕ್ ನಲ್ಲಿ ಬಂದ ಕಿಚ್ಚ ಸುದೀಪ್!

ಸುದೀಪ್ ಈ ಲಾಕ್ ಡೌನ್ ಅವಧಿಯಲ್ಲಿ ಫ್ಯಾಂಟಮ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಮುಂಬರುವ ಕಮರ್ಷಿಯಲ್ ಆಕ್ಷನ್ ಎಂಟರ್ಟೈನ್ಮೆಂಟ್ ಗಾಗಿ ಹೊಸ ಗೆಟಪ್ ಪಡೆದಿದ್ದಾರೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

Published: 09th May 2020 11:10 AM  |   Last Updated: 09th May 2020 12:28 PM   |  A+A-


ಸುದೀಪ್

Posted By : Raghavendra Adiga
Source : The New Indian Express

ಸುದೀಪ್ ಈ ಲಾಕ್ ಡೌನ್ ಅವಧಿಯಲ್ಲಿ ಫ್ಯಾಂಟಮ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಮುಂಬರುವ ಕಮರ್ಷಿಯಲ್ ಆಕ್ಷನ್ ಎಂಟರ್ಟೈನ್ಮೆಂಟ್ ಗಾಗಿ ಹೊಸ ಗೆಟಪ್ ಪಡೆದಿದ್ದಾರೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

ಈ ಚಿತ್ರದಲ್ಲಿ ವಿಕ್ರಾಂತ್ ರೋಣ ಪಾತ್ರಧಾರಿಯಾಗಿರುವ ಸುದೀಪ್ತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಇತ್ತೀಚಿನ ಲ್ಲುಕ್ ಹಂಚಿಕೊಂಡಿದ್ದರು. ಜತೆಗೆ ‘Efforts...Invest it to do better.’ ಎಂಬ ಸಾಲುಗಳನ್ನು ಬರೆದಿದ್ದರು.

ಕಿಚ್ಚ ಸುದೀಪ್ ಇತ್ತೀಚಿನ ಪೋಸ್ಟ್ ಲಾಕ್ ಡೌನ್ ಸಮಯದಲ್ಲಿ ನಟನ ಜೀವನದ ಒಳನೋಟವನ್ನು ನೀಡುತ್ತಿದೆ. ಾವರ ದೇಹದ ರೂಪಾಂತರ ನಟನ ಫಿಟ್ನೆಸ್ ಬಗ್ಗೆ ಪ್ರತಿಯೊಬ್ಬರೂ ಮಾತನಾಡುವಂತೆ ಮಾಡಿದೆ. "ಫ್ಯಾಂಟಮ್ ನಲ್ಲಿ  ಅವರ ಪಾತ್ರವು ಟೋನಡ್ ಬಾಡಿಯನ್ನು ಹೊಮ್ಮಿಸಲು ಬಯಸಲಾಗಿತ್ತು. ಇದಾಗಲೇ ಅವರು ಪೈಲ್ವಾನ್ ಪಾತ್ರದಲ್ಲಿ ಮಿಂಚಿದ್ದು ಮ್ಮ ಫಿಟ್ನೆಸ್ ಕಟ್ಟುಪಾಡುಗಳೊಂದಿಗೆ ಮುಂದುವರಿಯಲು ಬಯಸಿದ್ದರು ಈಗ ಅವರು ಮುಂದಿನ ಹಂತಕ್ಕೆ ತಲುಪಿದ್ದಾರೆ"ಅನೂಪ್ ಭಂಡಾರಿ ಹೇಳಿದ್ದಾರೆ.  ಚಿತ್ರಕ್ಕಾಗಿ ಸುದೀಪ್‌ಗೆ ಸಿಕ್ಸ್ ಪ್ಯಾಕ್ ಮಾಡಿಸಲಾಗುತ್ತದೆಯೆ ಎಂದು ಕೇಳಲಾಗಿ , “ನಾವು ಸಿಕ್ಸ್ ಪ್ಯಾಕ್ ಎಬಿಎಸ್ ಇರಬೇಕೆಂದು ಹೇಳಿಲ್ಲ. ಆದರೆ ಅವರು ಅದರೊಡನೆ ಬರುತ್ತಾರೆ ಎಂದು ನಮಗೆ ಖಾತ್ರಿಯಾಗಿದೆ. ಅವರು ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಅವರ ಪ್ರಯತ್ನವನ್ನು ನಾವು  ಕಾಣಬಹುದು. ಸುದೀಪ್ ಪೈಲ್‌ವಾನ್‌ಗೆ ಸೂಕ್ತವಾದ ಆಕಾರ ನಿಡಿದ್ದಾರೆ. ತೀವ್ರವಾದ ತಾಲೀಮಿನ ನಂತರ ಈಗ ಮತ್ತೆ ಉತ್ತಮ ದೇಹದಾರ್ಡ್ಯ ಹೊಂದಿದ್ದಾರೆ.

“ನಮ್ಮ ಮೊದಲ ಶೆಡ್ಯೂಲ್ ಪ್ಯಾಕ್-ಅಪ್ ನಂತರ ನಾನು ಜಿಮ್ ಗೆ ಸೇರಿಕೊಳ್ಳುವುದಾಗಿ ಅವರು ಖಾತ್ರಿಪಡಿಸಿದ್ದರು. ಅಲ್ಲದೆ ಹೋದರೆ ನಾನಿಂದು ಈ ಪ್ರಯತ್ನಕ್ಕೆ ಇಳಿಯುತ್ತಿರಲಿಲ್ಲ. "

 

 
 
 
 
 
 
 
 
 
 
 
 
 

Efforts,,,,Invest it to do better.

A post shared by KicchaSudeepa (@kichchasudeepa) on

 

ಬೃಹತ್ ಬಜೆಟ್‌ನೊಂದಿಗೆ ಮಾಡಿದ ಫ್ಯಾಂಟಮ್ ಚಿತ್ರ ಮಂಜುನಾಥ್ ಗೌಡ ಅವರ ನಿರ್ಮಾಣವಾಗಿದೆ. ಸುದೀಪ್ ಜೊತೆಗೆ, ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಶ್ರದ್ಧಾ ಶ್ರೀನಾಥ್ ಸಹ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಆದರೆ ಸುದೀಪ್ ಗೆ ನಾಯಕಿಯಾಗಿ ಯಾರು ಬರಲಿದ್ದಾರೆ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp