ಕೊರೋನಾ ವೈರಸ್ ಲಾಕ್​ಡೌನ್ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಎ.ಪಿ ಅರ್ಜುನ್

ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಅಂಬಾರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Published: 10th May 2020 12:15 PM  |   Last Updated: 10th May 2020 12:15 PM   |  A+A-


AP Arjun-Marraige

ನಿರ್ದೇಶಕ ಎಪಿ ಅರ್ಜುನ್ ಮದುವೆ

Posted By : Srinivasamurthy VN
Source : Online Desk

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಅಂಬಾರಿ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿರ್ದೇಶಕ ಎ. ಪಿ. ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣರನ್ನು ವಿವಾಹವಾಗಿದ್ದು, 5 ವರ್ಷದ ನಿರಂತರದ ಪ್ರೇಮದ ಫಲವಾಗಿ ಇಂದು ನಾಗರಬಾವಿಯಲ್ಲಿರುವ ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಅರ್ಜುನ್ ಮದುವೆಗೆ ಸ್ಯಾಂಡಲ್‍ವುಡ್ ಕಲಾವಿದರು ಬರಲು ಸಾಧ್ಯವಾಗಿಲ್ಲ. ಆದರೆ ಕೆಲವೇ ಆಪ್ತರ ಸಮ್ಮುಖದಲ್ಲಿ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧ್ರುವ ಸರ್ಜಾ, ಹರಿಸಂತು, ಕಿಸ್ ಚಿತ್ರದ ನಾಯಕ ವಿರಾಟ್ ಸೇರಿದಂತೆ ಅರ್ಜುನ್ ಆಪ್ತ ಗೆಳೆಯರ  ಬಳಗ ವಿವಾಹದಲ್ಲಿ ಭಾಗಿಯಾಗಿದ್ದರು.

ನಿರ್ದೇಶಕ ಎ.ಪಿ.ಅರ್ಜುನ್ ‘ತಂಗಿಗಾಗಿ’ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳಲ್ಲಿ ನಿರ್ದೇಶಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ ಅರ್ಜುನ್  ನಿರ್ದೇಶನದ ‘ಕಿಸ್’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಕಂಡಿತ್ತು. ಈ ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ನಟ ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾಕ್ಕೂ ಇವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎಂದು ತಿಳಿದು ಬಂದಿದೆ.
 

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp