ತೆಲುಗು ಆಯ್ತು ಈಗ ಮರಾಠಿಯಲ್ಲೂ ಕನ್ನಡದ ರಾಮಾ ರಾಮಾ ರೇ ರಿಮೇಕ್!

ಸತ್ಯ ಪ್ರಕಾಶ್ ನಿರ್ದೇಶನದ ಜನಪ್ರಿಯ ಚಿತ್ರ ರಾಮಾ ರಾಮಾ ರೇ ತೆಲುಗು ಸೇರಿದಂತೆ ಬೇರೆ ಭಾಷೆಗಳಿಗೆ ರೀಮೇಕ್ ಆಗಿತ್ತು. ಈಗ ಮರಾಠಿ ಭಾಷೆಯಲ್ಲೂ ಕನ್ನಡದ ಈ ಸಿನಿಮಾ ರೀಮೇಕ್ ಆಗುತ್ತಿದೆ. 
ರಾಮಾ ರಾಮಾ ರೇ
ರಾಮಾ ರಾಮಾ ರೇ

ಬೆಂಗಳೂರು: ಸತ್ಯ ಪ್ರಕಾಶ್ ನಿರ್ದೇಶನದ ಜನಪ್ರಿಯ ಚಿತ್ರ ರಾಮಾ ರಾಮಾ ರೇ ತೆಲುಗು ಸೇರಿದಂತೆ ಬೇರೆ ಭಾಷೆಗಳಿಗೆ ರೀಮೇಕ್ ಆಗಿತ್ತು. ಈಗ ಮರಾಠಿ ಭಾಷೆಯಲ್ಲೂ ಕನ್ನಡದ ಈ ಸಿನಿಮಾ ರೀಮೇಕ್ ಆಗುತ್ತಿದೆ. 

ಕೊರೋನಾ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ “ಸತ್ಯ ಪಿಕ್ಚರ್ಸ್” ಯೂ ಟ್ಯೂಬ್ ಚಾನಲ್ ನಲ್ಲಿ ಪ್ರದರ್ಶನಗೊಂಡಿದ್ದ ರಾಮಾ ರಾಮಾ ರೇ ಚಿತ್ರಕ್ಕೆ ಒಂದು ತಿಂಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಮಂದಿ (1 ಮಿಲಿಯನ್) ವೀಕ್ಷಿಸಿದ್ದು ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. 

ಈ ಬೆನ್ನಲ್ಲೇ ಮರಾಠಿ ನಿರ್ಮಾಣ ಸಂಸ್ಥೆಯೊಂದು ರಾಮಾ ರಾಮಾ ರೇ ಚಿತ್ರವನ್ನು ಮರಾಠಿ ಭಾಷೆಯಲ್ಲಿ ರಿಮೇಕ್ ಮಾಡಲು ಮುಂದಾಗಿದೆ “ಸತ್ಯ ಪಿಕ್ಚರ್ಸ್” ಸಹಯೋಗದೊಂದಿಗೆ ಚಿತ್ರ ನಿರ್ಮಾಣ ಕಾರ್ಯವು ಪ್ರಾರಂಭವಾಗಲಿದೆ. ಲಾಕ್ ಡೌನ್ ಮುಗಿದ ನಂತರ ಮುಂದಿನ ಕೆಲಸಗಳು ಶುರುವಾಗಲಿದೆ ಎಂದು ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಹೇಳಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಈ ಚಿತ್ರದ ರಿಮೇಕ್‌ ಹಕ್ಕುಗಳನ್ನು ಪಡೆದುಕೊಂಡು, ತೆಲುಗಿನಲ್ಲಿ 'ಆಟಗಾಧಾರ ಶಿವ' ಹೆಸರಿನಲ್ಲಿ ನಿರ್ಮಾಣ ಮಾಡಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com