ನಿಗದಿಯಂತೆ ಕೆಜಿಎಫ್ ಚಾಪ್ಟರ್-2 ಚಿತ್ರ ಬಿಡುಗಡೆ

ಕೊರೋನಾ ವೈರಸ್ ಲಾಕ್ ಡೌನ್ ಆತಂಕದಿಂದಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ ಆತಂಕ ಎದುರಾಗಿತ್ತು. ಆದರೆ ಈ ಬಗ್ಗಿ ಸಿಹಿ ಸುದ್ದಿ ನೀಡಿರುವ ಚಿತ್ರತಂಡ ಚಿತ್ರ ನಿಗದಿತ  ಸಮಯಕ್ಕೇ ಬಿಡುಗಡೆಯಾಗಲಿದೆ ಎಂದು ಹೇಳಿದೆ.

Published: 19th May 2020 01:26 PM  |   Last Updated: 19th May 2020 01:26 PM   |  A+A-


KGF Chapter 2

ಕೆಜಿಎಫ್ ಚಿತ್ರತಂಡ

Posted By : Srinivasamurthy VN
Source : The New Indian Express

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಆತಂಕದಿಂದಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ ಆತಂಕ ಎದುರಾಗಿತ್ತು. ಆದರೆ ಈ ಬಗ್ಗಿ ಸಿಹಿ ಸುದ್ದಿ ನೀಡಿರುವ ಚಿತ್ರತಂಡ ಚಿತ್ರ ನಿಗದಿತ  ಸಮಯಕ್ಕೇ ಬಿಡುಗಡೆಯಾಗಲಿದೆ ಎಂದು ಹೇಳಿದೆ.

ಹೌದು.. ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಬಹು ನಿರೀಕ್ಷೆಯ ಚಿತ್ರ ಕೆಜಿಎಫ್‌-2 ಚಿತ್ರದ ಬಿಡುಗಡೆ ದಿನಾಂಕ ಈಗಾಗಲೇ ನಿರ್ಧಾರವಾಗಿದೆ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅದರ ಚಿತ್ರೀಕರಣ ಬಾಕಿ ಉಳಿದುಕೊಂಡಿದ್ದು, ಅಂದುಕೊಂಡ ಸಮಯಕ್ಕೆ ಬಿಡುಗಡೆ ಆಗುತ್ತದೋ ಇಲ್ಲವೋ  ಎಂಬ ಭಯ ಅಭಿಮಾನಿಗಳಲ್ಲಿತ್ತು. ಆದರೆ ಈ ಆತಂಕವನ್ನು ಚಿತ್ರತಂಡ ದೂರ ಮಾಡಿದ್ದು, ಲಾಕ್ ಡೌನ್ ಮತ್ತು ಕೊರೋನಾ ವೈರಸ್ ಭೀತಿ ಚಿತ್ರದ ಕೆಲಸಗಳಿಗೆ ತಡೆಯೊಡ್ಡಿಲ್ಲ. ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಚಿತ್ರತಂಡ ತನ್ನ ಹಾಡಿನ ರೆಕಾರ್ಡಿಂಗ್‌ ಕೆಲಸವನ್ನು  ಆರಂಭಿಸಿದೆ.

ಭಾನುವಾರದಿಂದ ಚಿತ್ರದ ಸಂಗೀತದ ಕೆಲಸವನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ಆರಂಭಿಸಿದ್ದು, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನೇತೃತ್ವದಲ್ಲಿ ಚಿತ್ರದ ಹಾಡಿನ ಕೆಲಸಗಳು ಆರಂಭಿಸಲಾಗಿದೆ. ಈ ಬಗ್ಗೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಟ್ವೀಟ್‌ ಮಾಡಿದ್ದು,  ಚಿತ್ರತಂಡ ಸಂಗೀತ ಕಾರ್ಯದಲ್ಲಿ ತೊಡಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಕೆಜಿಎಫ್‌ ಚಾಪ್ಟರ್‌-2 ಮ್ಯೂಸಿಕ್‌ ಸೆಷನ್ಸ್‌ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌, ಸಿನಿಮಾಟೋಗ್ರಫರ್‌ ಭುವನ್‌ ಗೌಡ, ಸಂಗೀತ ನಿರ್ದೇಶಕ ರವಿ  ಬಸ್ರೂರು ಇದ್ದಾರೆ.

ಈ ಟ್ವೀಟ್‌ಗೆ ನೂರಾರು ಜನ ಅಭಿಮಾನಿಗಳು ಕಮೆಂಟ್‌ ಮಾಡಿದ್ದು, ಲಾಕ್‌ಡೌನ್‌ ಒಳಗೆ ಟ್ರೇಲರ್‌ ಅಥವಾ ಟೀಸರ್‌ ರಿಲೀಸ್‌ ಮಾಡಿ, ಜತೆಗೆ ಅನೌನ್ಸ್‌ ಮಾಡಿದ ದಿನದಂದೇ ಸಿನಿಮಾ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಚಿತ್ರತಂಡ ಈ ಹಿಂದೆ ಚಿತ್ರವನ್ನು ದಸರಾ ರಜೆ ದಿನಗಳಲ್ಲಿ ಅಂದರೆ ಅಕ್ಟೋಬರ್ 23ರಂದೇ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

Stay up to date on all the latest ಸಿನಿಮಾ ಸುದ್ದಿ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp