ಸಾಂಗ್ ರೆಕಾರ್ಡಿಂಗ್ ನೊಂದಿಗೆ ಮದಗಜ ಸಿನಿಮಾ ಮತ್ತೆ ಆರಂಭ: ಮಹೇಶ್ ಕುಮಾರ್

ಮದಗಜ ನಿರ್ದೇಶಕ ಮಹೇಶ್ ಕುಮಾರ್ ಮತ್ತೆ ಸಿನಿಮಾ ಕೆಲಸ ಆರಂಭಿಸಿದ್ದಾರೆ. ರವಿ ಬಸ್ರೂರ್ ಸಂಗೀತ ವಿರುವ ಹಾಡಿನ ರೆಕಾರ್ಡಿಂಗ್ ನೊಂದಿಗೆ  ಕೆಲಸ ಆರಂಭಿಸಿದ್ದಾರೆ.
ಮದಗಜ ಸ್ಟಿಲ್
ಮದಗಜ ಸ್ಟಿಲ್

ಮದಗಜ ನಿರ್ದೇಶಕ ಮಹೇಶ್ ಕುಮಾರ್ ಮತ್ತೆ ಸಿನಿಮಾ ಕೆಲಸ ಆರಂಭಿಸಿದ್ದಾರೆ. ರವಿ ಬಸ್ರೂರ್ ಸಂಗೀತ ವಿರುವ ಹಾಡಿನ ರೆಕಾರ್ಡಿಂಗ್ ನೊಂದಿಗೆ  ಕೆಲಸ ಆರಂಭಿಸಿದ್ದಾರೆ.

ಉಮಾಪತಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಶ್ರೀಮುರುಳಿಗೆ ಅಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಸನ್ನಿವೇಶಕ್ಕೆ ತಕ್ಕ ಹಾಗೆ ಸಾಹಿತ್ಯ ಬರೆಯಲಾಗಿದೆ. ಎರಡು ಹಾಡುಗಳಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ, ಇನ್ನೆರಡು ಹಾಡುಗಳಿಗೆ ರವಿ ಬಸ್ರೂರ್ ಮತ್ತು ಕಿನ್ನಲ್ ರಾಜ್ ಸಾಹಿತ್ಯವಿದೆ.

ಈಗಾಗಲೇ ಶೇ.25 ರಷ್ಟು ಶೂಟಿಂಗ್ ಮುಗಿದಿದೆ, ಲಾಕ್ ಡೌನ್ ಮುಂಚೆಯೇ ವಾರಾಣಾಸಿಯಲ್ಲಿ ಶೂಟಿಂಗ್ ಪೂರ್ಣಗೊಳಿಸಲಾಗಿತ್ತು. ಶೂಟಿಂಗ್ ಪುನಾರಂಭಿಸಲು ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಮೈಸೂರಿನಿಂದ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಲಾಗಿದೆ. ಅನಂತರ ಗುಂಡ್ಲುಪೇಟೆ ಮತ್ತು ಹೊಗೆನೇಕಲ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುವುದು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com