ಕೆಜಿಎಫ್ 2 ನಂತರವೇ ಮೆಗಾ ಪ್ರಾಜೆಕ್ಟ್: ಸುಳಿವು ಬಿಟ್ಟುಕೊಟ್ಟ ಪ್ರಶಾಂತ್ ನೀಲ್!

ಟಾಲಿವುಡ್ ನ ಜೂನಿಯರ್ ಎನ್ ಟಿಆರ್ ಅವರ ಹುಟ್ಟುಹಬ್ಬಕ್ಕೆ ಕನ್ನಡದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಶುಭಾ ಹಾರೈಸಿದ್ದಾರೆ. ಇದರೊಂದಿಗೆ ಕನ್ನಡದ ಅಭಿಮಾನಿಗಳಿಗೆ ಶಾಕ್ ನ್ಯೂಸ್ ಕೊಟ್ಟಿದ್ದಾರೆ. 

Published: 21st May 2020 12:00 PM  |   Last Updated: 21st May 2020 12:27 PM   |  A+A-


Yash-prashanth neel

ಯಶ್-ಪ್ರಶಾಂತ್ ನೀಲ್

Posted By : Vishwanath S
Source : The New Indian Express

ಟಾಲಿವುಡ್ ನ ಜೂನಿಯರ್ ಎನ್ ಟಿಆರ್ ಅವರ ಹುಟ್ಟುಹಬ್ಬಕ್ಕೆ ಕನ್ನಡದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಶುಭಾ ಹಾರೈಸಿದ್ದಾರೆ. ಇದರೊಂದಿಗೆ ಕನ್ನಡದ ಅಭಿಮಾನಿಗಳಿಗೆ ಶಾಕ್ ನ್ಯೂಸ್ ಕೊಟ್ಟಿದ್ದಾರೆ. 

ಜೂನಿಯರ್ ಎನ್ ಟಿಆರ್ ಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಮೇ 20ರಂದೂ ಜೂನಿಯರ್ ಎನ್ ಟಿಆರ್ ಅವರ ಹುಟ್ಟುಹಬ್ಬವಾಗಿದ್ದು ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನಲ್ಲಿ ಪ್ರಶಾಂತ್ ನೀಲ್ ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದಲ್ಲಿ ಕುಳಿತರೆ ಹೇಗಿರುತ್ತದೆ ಎಂಬುದು ನನಗೆ ಅಂತಿಮವಾಗಿ ತಿಳಿಯಿತು. ಮುಂದಿನ ಸಲ ಕ್ರೇಜಿ ಎನರ್ಜಿಗೆ ನನ್ನ ರೇಡಿಯೇಶನ್ ಸೂಟ್ ತರುತ್ತೇನೆ ಎಂದು ಜೂನಿಯರ್ ಎನ್ಟಿಆರ್ ತಾರಕ್9999 ಖಾತೆಗೆ ಟ್ಯಾಗ್ ಮಾಡಿ ಸೀ ಯು ಸೂನ್ ಎಂದು ಬರೆದುಕೊಂಡಿದ್ದಾರೆ. 

ಕೆಜಿಎಫ್ ಚಿತ್ರದ ನಂತರ ಪ್ರಶಾಂತ್ ನೀಲ್ ಮತ್ತೊಂದು ಕನ್ನಡದ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂಬ ಆಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದರು. ಇದಕ್ಕೆ ತಣ್ಣೀರೆರೆಚಿದಂತಾಗಿದೆ. ಆದರೆ ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರಿಗೆ ತೆಲುಗಿನ ನಿರ್ಮಾಪಕರು ಮಣೆ ಹಾಕಿದ್ದಾರೆ ಎಂಬುದು ಸಮಾಧಾನದ ಸಂಗತಿ.

ಸದ್ಯಕ್ಕೆ ನಾನು ಕೆಜಿಎಫ್ 2 ಚಿತ್ರದ ಕಡೆ ಹೆಚ್ಚು ಗಮನ ಹರಿಸಿದ್ದೇನೆ. ಈ ಚಿತ್ರ ಮುಗಿದ ಬಳಿಕವೇ ಮುಂದಿನ ಯೋಜನೆಗಳ ಬಗ್ಗೆ ಗಮನ ಹರಿಸುತ್ತೇನೆ. ಮುಂದೆ ಯಾವು ಭಾಷೆಯಲ್ಲಿ ಮಾಡಿದರೂ ಅದು ಕನ್ನಡ ಚಿತ್ರ ಎಂದೇ ಭಾವಿಸಿ ನಿರ್ದೇಶಿಸುತ್ತೇನೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp