ರೆಬೆಲ್ ಸ್ಟಾರ್ ಅಂಬರೀಶ್ ಬರ್ತಡೇ, ಅಭಿಮಾನಿಗಳಿಗೆ ಗಿಫ್ಟ್: 'ಬ್ಯಾಡ್​ ಮ್ಯಾನರ್ಸ್' ಫಸ್ಟ್​ ಲುಕ್​ ಮೋಷನ್​​ ಪೋಸ್ಟರ್ ರಿಲೀಸ್

ಇಂದು (ಮೇ29) ರೆಬೆಲ್ ಸ್ಟಾರ್ ಅಂಬರೀಶ್ ಜನ್ಮದಿನ. ಅಂಬಿ ಅಭಿಮಾನಿಗಳ ಪಾಲಿಗೆ ಹಬ್ಬ. ಆದರೆ ಈ ವರ್ಷ ಕೊರೋನಾ ಹಾವಳಿ ಕಾರಣ ಲಾಕ್ ಡೌನ್ ಇದ್ದು ಅನೇಕರಿಗೆ ಅಂಬಿ ಸಮಾಧಿ ದರ್ಶನ ಮಾಡಲು ಅವಕಾಶ ಸಿಕ್ಕದೆ ನಿರಾಶರಾಗಿದ್ದಾರೆ. ಆದರೆ ಈ ನಡುವೆ ಅಂಬರೀಶ್ ಪುತ್ರ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಂಬಿ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಅಭ
ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್​ ಲುಕ್ ಮೋಷನ್​​ ಪೋಸ್ಟರ್
ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್​ ಲುಕ್ ಮೋಷನ್​​ ಪೋಸ್ಟರ್

ಇಂದು (ಮೇ29) ರೆಬೆಲ್ ಸ್ಟಾರ್ ಅಂಬರೀಶ್ ಜನ್ಮದಿನ. ಅಂಬಿ ಅಭಿಮಾನಿಗಳ ಪಾಲಿಗೆ ಹಬ್ಬ. ಆದರೆ ಈ ವರ್ಷ ಕೊರೋನಾ ಹಾವಳಿ ಕಾರಣ ಲಾಕ್ ಡೌನ್ ಇದ್ದು ಅನೇಕರಿಗೆ ಅಂಬಿ ಸಮಾಧಿ ದರ್ಶನ ಮಾಡಲು ಅವಕಾಶ ಸಿಕ್ಕದೆ ನಿರಾಶರಾಗಿದ್ದಾರೆ. ಆದರೆ ಈ ನಡುವೆ ಅಂಬರೀಶ್ ಪುತ್ರ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಂಬಿ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಎರಡನೇ ಚಿತ್ರ "ಬ್ಯಾಡ್ ಮ್ಯಾನರ್ಸ್" ಚಿತ್ರದ ಫಸ್ಟ್​ ಲುಕ್ ಮೋಷನ್​​ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಖ್ಯಾತ ನಿರ್ದೇಶಕ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ಬ್ಯಾಡ್ ಮ್ಯಾನರ್ಸ್" "ಅಮರ್" ನಂತರದಲ್ಲಿ ಮೂಡಿಬರುತ್ತಿರುವ ಅಭಿಷೇಕ್ ಅವರ ಎರಡನೇ ಚಿತ್ರವಾಗಿದೆ.

ಸ್ಟುಡಿಯೋ 18 ಬ್ಯಾನರ್ ನಡಿ ಸುಧೀರ್ ಕೆ.ಎಂ ನಿರ್ಮಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com