ತೆರೆ ಮೇಲೆ ಮಿಂಚಲು ತಂದೆ-ಮಗ ಜೋಡಿ ರೆಡಿ! ಒಂದೇ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ವಿಕ್ರಂ ಅಭಿನಯ

ಕ್ರೇಜಿ ಸ್ಟಾರ್ ರವಿಚಂದ್ರನ್ ಜನ್ಮದಿನವವನ್ನು ಈ ವರ್ಷ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಕೊರೋನಾವೈರಸ್ ಸಾಂಕ್ರಾಮಿಕ  ಸಮಯದಲ್ಲಿ ಸಮಾಜಿಕ ಅಂತರವನ್ನು ಭ್ಯಾಸ ಮಾಡುವಂತೆ ಅವರು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. 

Published: 30th May 2020 10:32 AM  |   Last Updated: 30th May 2020 01:05 PM   |  A+A-


Posted By : Raghavendra Adiga
Source : The New Indian Express

ಕ್ರೇಜಿ ಸ್ಟಾರ್ ರವಿಚಂದ್ರನ್ ಜನ್ಮದಿನವವನ್ನು ಈ ವರ್ಷ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಕೊರೋನಾವೈರಸ್ ಸಾಂಕ್ರಾಮಿಕ  ಸಮಯದಲ್ಲಿ ಸಮಾಜಿಕ ಅಂತರವನ್ನು ಭ್ಯಾಸ ಮಾಡುವಂತೆ ಅವರು ತಮ್ಮ ಅಭಿಮಾನಿಗಳನ್ನು ಕೋರಿದ್ದಾರೆ. ಈ ನಡುವೆ ರವಿಮಾಮ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುವುದನ್ನು ಕಾಣಬೇಕೆನ್ನುವ ಅವರ ಅಭಿಮಾನಿಗಳ ಆಸೆ ಶೀಘ್ರವೇ ಈಡೇರುವ ಭರವಸೆಯನ್ನವರು ಕೊಟ್ಟಿದ್ದಾರೆ.

ರವಿಚಂದ್ರನ್ ಅವರ ಪುತ್ರನ ಸಿನಿಮಾವನ್ನು ನಿರ್ದೇಶನ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ನಟ-ನಿರ್ದೇಶಕ-ನಿರ್ಮಾಪಕ, ಅಭಿಮಾನಿಗಳ ಕ್ರೇಜಿ ಸ್ಟಾರ್ ತಮ್ಮ ಪುತ್ರನಿಗಾಗಿ ಸ್ಕ್ರಿಪ್ಟ್‌ನ ತಯಾರಿ ನಡೆಸಲು ಲಾಕ್‌ಡೌನ್ ಸಮಯವನ್ನು ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ ಜತೆಗೆ ಅವರ ಎರಡನೇ ಮಗನಾದ ವಿಕ್ರಂ ರವಿಚಂದ್ರನ್ ತೆರೆಯ ಮೇಲೆ ಕಾಣಿಸಲಿದ್ದಾರೆ. 

ಲಾಕ್‌ಡೌನ್ ಸಮಯದಲ್ಲಿ ಎಡಿಟ್ ಡೆಸ್ಕ್‌ನಲ್ಲಿ ನಿರತರಾಗಿರುವ ಹಿರಿಯ ನಟ  ಚಿತ್ರಕಥೆಯ ಬಗ್ಗೆ ಸುಳಿವು ನೀಡಿಲ್ಲ. “ನಾನು ರವಿ ಬೋಪಣ್ಣ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಈ  ನಡುವೆ ಮೂರು ಸ್ಕ್ರಿಪ್ಟ್‌ಗಳನ್ನು ಪೂರ್ಣಗೊಳಿಸಿದೆ.ಒಂದು ಚಿತ್ರದಲ್ಲಿ ತಂದೆ ಮತ್ತು ಮಗ ಒಟ್ಟಿಗೆಸೇರಲಿದ್ದೇವೆ. ನಾನು ಹಾಗೂ ವಿಕ್ರಮ್ ಆ ಚಿತ್ರದಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರ ನಿರ್ದೇಶನ ನನ್ನದ್ ಆಗಿರಲಿದೆ.

"ಇದು ನನ್ನ ಕಡೆಯಿಂದ ಇನ್ನೊಂದು ವಿಶಿಷ್ಟ ಪ್ರಯತ್ನವಾಗಿದೆ. ವಿನೂತನ ಚಿತ್ರಕಥೆಯನ್ನಿದು ಹೊಂದಿರಲಿದೆ. ರಾಜ್ಯವು ಲಾಕ್ ಡೌನ್ ನಿಂದ ಹೊರಬಂದ ನಂತರ  ನಾನು ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇನೆ" ರವಿಚಂದ್ರನ್ ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp