ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ 'ದುಬಾರಿ' ಹೀರೋ!

ಪೊಗರು ಬಳಿಕ ಧ್ರುವ ಸರ್ಜಾ ‘ದುಬಾರಿ’ಯಾಗುತ್ತಿದ್ದಾರೆ. ಧ್ರುವ ಸರ್ಜಾ ನಾಯಕಾರಲಿಗಲಿರುವ ನಂದಕಿಶೋರ್ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ನಗರದ ದೇವಾಲಯವೊಂದರಲ್ಲಿ ನೆರವೇರಿದೆ. 

Published: 06th November 2020 12:53 PM  |   Last Updated: 06th November 2020 12:55 PM   |  A+A-


Dhruva sarja

ಧ್ರುವ ಸರ್ಜಾ

Posted By : Shilpa D
Source : UNI

ಬೆಂಗಳೂರು: ಪೊಗರು ಬಳಿಕ ಧ್ರುವ ಸರ್ಜಾ ‘ದುಬಾರಿ’ಯಾಗುತ್ತಿದ್ದಾರೆ. ಧ್ರುವ ಸರ್ಜಾ ನಾಯಕಾರಲಿಗಲಿರುವ ನಂದಕಿಶೋರ್ ನಿರ್ದೇಶನದ ಹೊಸ ಸಿನಿಮಾದ ಮುಹೂರ್ತ ನಗರದ ದೇವಾಲಯವೊಂದರಲ್ಲಿ ನೆರವೇರಿದೆ. 

ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ, ಧ್ರುವ ಸರ್ಜಾ ನಾಯಕತ್ವದ ನೂತನ ಸಿನಿಮಾ ದುಬಾರಿಯ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಶುಕ್ರವಾರ ಬೆಳಗ್ಗೆ ನವರಂಗ ಗಣೇಶ್ ದೇವಸ್ಥಾನದಲ್ಲಿ ನೆರವೇರಿದೆ.

ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್​ ಮಾಡಿದರು. ಇನ್ನುಳಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗ ಇದೇ ವೇಳೆ ಹಾಜರಾಗಿತ್ತು. ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ಇದೇ ತಿಂಗಳ ಕೊನೆಯ ವಾರದಲ್ಲಿ ಚಿತ್ರೀಕರಣಕ್ಕೆ ನಿರ್ಧರಿಸಿದೆ.

ಪೊಗರು ಸಿನಿಮಾ ನಿರ್ದೇಶನ ಮಾಡಿರುವ ನಂದಕಿಶೋರ್​, ದುಬಾರಿ ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳಲಿದ್ದು, ಈಗಾಗಲೇ ಚಿತ್ರಕಥೆ ಎಲ್ಲವೂ ಅಂತಿಮವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಉದಯ್​ ಮೆಹ್ತಾ, ‘ಪ್ರೀ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಎಲ್ಲವೂ ಮುಗಿದಿವೆ. ಇನ್ನೇನಿದ್ದರೂ ಶೂಟಿಂಗ್​ ಶುರುಮಾಡುವುದಷ್ಟೇ ಕೆಲಸ. ಇದೇ ತಿಂಗಳ ಕೊನೆಯಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದೇವೆ. ಬೆಂಗಳೂರು, ಮಂಡ್ಯ ಮತ್ತು ವಿದೇಶದ ಹಲವೆಡೆ ಶೂಟಿಂಗ್ ನಡೆಯಲಿದೆ’ ಎಂದಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp