ತೆಲುಗು ನಟ ಹಾಗೂ ರಾಜಕಾರಣಿ ಚಿರಂಜೀವಿಗೆ ಕೊರೋನಾ ಪಾಸಿಟಿವ್, ಶೂಟಿಂಗ್ ಬಿಟ್ಟು ಹೋಂ ಕ್ವಾರಂಟೈನ್

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.ಈ ವಿಷಯವನ್ನು ಸ್ವತಃ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. 

Published: 09th November 2020 11:56 AM  |   Last Updated: 09th November 2020 12:49 PM   |  A+A-


Telugu actor Chiranjeevi

ತೆಲುಗು ನಟ ಚಿರಂಜೀವಿ

Posted By : Sumana Upadhyaya
Source : The New Indian Express

ಹೈದರಾಬಾದ್: ತೆಲುಗಿನ ಖ್ಯಾತ ನಟ ಚಿರಂಜೀವಿ ಅವರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.ಈ ವಿಷಯವನ್ನು ಸ್ವತಃ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಇಂದು ಅವರು 'ಆಚಾರ್ಯ'ಚಿತ್ರದ ಶೂಟಿಂಗ್ ಗೆ ತೆರಳುವ ಮುನ್ನ ಶಿಷ್ಟಾಚಾರದಂತೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು. ಆ ವೇಳೆ ಪಾಸಿಟಿವ್ ಬಂದಿದ್ದು ಯಾವುದೇ ರೋಗಲಕ್ಷಣಗಳು ಇಲ್ಲದಿರುವುದರಿಂದ ಮನೆಯಲ್ಲಿಯೇ ಕ್ವಾರಂಟೈನ್ ಗೊಳಗಾಗಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರೆಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿರುವ ಚಿರಂಜೀವಿ ಯಾವುದೇ ಆತಂಕವಿಲ್ಲ, ಆದಷ್ಟು ಶೀಘ್ರವೇ ಗುಣಮುಖನಾಗಿ ನಿಮ್ಮ ಮುಂದೆ ಮತ್ತೆ ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ. 

ಕಳೆದ ವಾರ ಹೈದರಾಬಾದ್ ನೆರೆ ವಿಕೋಪ ಪರಿಹಾರ ನಿಧಿಗೆ 1 ಕೋಟಿ ರೂಪಾಯಿಗಳನ್ನು ನಟ ಚಿರಂಜೀವಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಭೇಟಿ ಮಾಡಿ ನೀಡಿದ್ದರು.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp