ದುನಿಯಾ ವಿಜಯ್ ಮುಂದಿನ ಚಿತ್ರಕ್ಕೆ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ನಾಯಕಿ!

"ಸಲಗ" ನಂತರ ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಚಿತ್ರಕ್ಕೆ ನಾಯಕಿಯಾಗಿ "ಪಾರು" ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ಮೋಕ್ಷಿತಾ ಪೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮೋಕ್ಷಿತಾ ಪೈ ದುನಿಯಾ ವಿಜಯ್
ಮೋಕ್ಷಿತಾ ಪೈ ದುನಿಯಾ ವಿಜಯ್

"ಸಲಗ" ನಂತರ ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಚಿತ್ರಕ್ಕೆ ನಾಯಕಿಯಾಗಿ "ಪಾರು" ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಟಿ ಮೋಕ್ಷಿತಾ ಪೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಾಜ್ ಕುಟುಂಬದ ಲಕ್ಕಿ ಗೋಪಾಲ್  ನಾಯಕನಾಗಿರುವ ಈ ಚಿತ್ರಕ್ಕೆ ಇದೀಗ ಕರಾವಳಿ ಮೂಲದ ಮೋಕ್ಷಿತಾ ಪೈ ನಾಯಕಿ ಎಂದು ವಿಜಯ್ ಘೋಷಿಸಿದ್ದಾರೆ.

ಧಾವಾಹಿ ಬಿಟ್ಟರೆ ಇದುವರೆಗೆ ಮೋಕ್ಷಿತಾ ಯಾವುದೇ ಚಿತ್ರಗಳಲ್ಲಿ ಅಭಿನಯಿಸಿಲ್ಲ. ಹಾಗಾಗಿ ವಿಜಯ್ ನಿರ್ದೇಶನದ ಈ ಚಿತ್ರ ಅವರ ಪಾಲಿಗೆ ಸ್ಯಾಂಡಲ್ ವುಡ್  ಪ್ರವೇಶಕ್ಕೆ ರಾದಾರು ಎನ್ನಲಾಗಿದೆ.

ಇನ್ನುಳಿದಂತೆ ಚಿತ್ರದ ಇತರೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದ್ದು ಚಿತ್ರಕ್ಕೆ  ಚರಣ್ ರಾಜ್ ಮತ್ತು ವಾಸುಕಿ ವೈಭವ್ ಸಂಗೀತ ಸಂಯೋಜನೆ ಇದೆ.  ಅಲ್ಲದೆ ಬಾಲು ಶಿವಮೊಗ್ಗ ಛಾಯಾಗ್ರಹಣ, ಮಾಸ್ತಿ ಮಂಜು ಸಂಭಾಷಣೆ ಇದ್ದು ಇನ್ನೂ ಹೆಸರಿಡದ ಈ ಚಿತ್ರದ ಶೂಟ್ಂಗ್ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಹೇಳೀದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com