ದೀಪಾವಳಿ ಹಬ್ಬದಂದು ಸಿಹಿ ಸುದ್ದಿ ಹಂಚಿಕೊಂಡ ನಟಿ ಮಯೂರಿ

ಸ್ಯಾಂಡಲ್ ವುಡ್ ಕೃಷ್ಣ ಲೀಲಾ ಚಿತ್ರ ಖ್ಯಾತಿಯ ನಟಿ ಮಯೂರಿ ಬೆಳ್ಳಂಬೆಳಿಗ್ಗೆ ದೀಪಾವಳಿ ಹಬ್ಬದಂದು ಸಿಹಿ ಸುದ್ದಿಯೊಂದು ಹಂಚಿಕೊಂಡಿದ್ದಾರೆ.
ದೀಪಾವಳಿ ಹಬ್ಬದಂದು ಸಿಹಿ ಸುದ್ದಿ ಹಂಚಿಕೊಂಡ ನಟಿ ಮಯೂರಿ

ಸ್ಯಾಂಡಲ್ ವುಡ್ ಕೃಷ್ಣ ಲೀಲಾ ಚಿತ್ರ ಖ್ಯಾತಿಯ ನಟಿ ಮಯೂರಿ ಬೆಳ್ಳಂಬೆಳಿಗ್ಗೆ ದೀಪಾವಳಿ ಹಬ್ಬದಂದು ಸಿಹಿ ಸುದ್ದಿಯೊಂದು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವಿವಾಹ ವಿಚಾರವನ್ನು ಬಹಿರಂಗ ಪಡಿಸಿದ್ದ ಮಯೂರಿ, ಇದೀಗ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದೇ ಜೂನ್ 12ಕ್ಕೆ ತಮ್ಮ ಬಾಲ್ಯದ ಗೆಳೆಯ ಅರುಣ್ ಜತೆಗೆ ಹಸೆಮಣೆ ಏರಿದ್ದ ನಟಿ ಇದೀಗ ತಾಯಿಯಾಗುತ್ತಿದ್ದಾರೆ. ಇಂದು ಬೆಳಿಗ್ಗೆ ಮಯೂರಿ ಈ ಸಂಬಂಧ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com