'ಫ್ಯಾಮಿಲಿ ಪ್ಯಾಕ್ ' ನಿಂದ ಹೊಸ ಪೋಸ್ಟರ್ ಬಿಡುಗಡೆ

ನಟ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಚಿತ್ರೀಕರಣ ಶೇ. 60 ರಷ್ಟು ಮುಗಿದಿದ್ದು, ಚಿತ್ರತಂಡ ಹೊಸ ಸ್ಟಿಲ್ ರಿಲೀಸ್ ಮಾಡಿದೆ.

Published: 17th November 2020 09:51 AM  |   Last Updated: 17th November 2020 12:24 PM   |  A+A-


Family pack new still

ಫ್ಯಾಮಿಲಿ ಪ್ಯಾಕ್ ಹೊಸ ಪೋಸ್ಟರ್

Posted By : Shilpa D
Source : The New Indian Express

ನಟ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಚಿತ್ರೀಕರಣ ಶೇ. 60 ರಷ್ಟು ಮುಗಿದಿದ್ದು, ಚಿತ್ರತಂಡ ಹೊಸ ಸ್ಟಿಲ್ ರಿಲೀಸ್ ಮಾಡಿದೆ.

ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟನೆಯ ಫ್ಯಾಮಿಲಿ ಪ್ಯಾಕ್ ಸಿನಿಮಾದ ಹೊಸ ಪೋಸ್ಟರ್ ಅನ್ನು ದೀಪಾವಳಿ ಅಂಗವಾಗಿ ರಿಲೀಸ್ ಮಾಡಲಾಗಿದೆ.

ಕಾಮಿಡಿ ಮನರಂಜನಾ ಚಿತ್ರವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನು ಅರ್ಜುನ್ ಕುಮಾರ್ ನಿರ್ದೇಶಿಸುತ್ತಿದ್ದು, ಸೆಪ್ಟಂಬರ್ 21ರಿಂದ ಶೂಟಿಂಗ್ ಆರಂಭವಾಗಿತ್ತು.  ಮತ್ತೆ ಡಿಸೆಂಬರ್ ನಲ್ಲಿ ಶೂಟಿಂಗ್ ಪುನಾರಂಭಗೊಳ್ಳಲಿದೆ. ಲಿಖಿತ್ ಮತ್ತು ದೇಶರಾಜ್ ರೈ ಅವರ ಜೊತೆಗೂಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಿನಿಮಾ ನಿರ್ಮಾಣ  ಮಾಡುತ್ತಿದ್ದಾರೆ.

ರಂಗಾಯಣ ರಘು, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಿಹಿಕಹಿ ಚಂದ್ರು, ಅಚ್ಯುತ ಕುಮಾರ್, ಪದ್ಮಜಾ ರಾವ್, ಶರ್ಮಿತಾ ಗೌಡ, ಸಾಧು ಕೋಕಿಲ, ಚಂದುಗೌಡ, ಶಿವರಾಮ್, ನಾಗಭೂಷಣ್, ರಘು ಗೌಡ ಮುಂತಾದವರು ನಟಿಸಿದ್ದಾರೆ.

ನಾಲ್ಕನೇ ಶೆಡ್ಯೂಲ್ ನಲ್ಲಿ ಮತ್ತಷ್ಟು  ಕಲಾವಿದರು ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ,  ಸಂಕಷ್ಟಕರ ಗಣಪತಿ ನಂತರ ನಿರ್ದೇಶಕ ಅರ್ಜುನ್ ಮತ್ತು ನಿರ್ಮಾಪಕ ಲಿಖಿತ್ ಮತ್ತೊಮ್ಮೆ ಫ್ಯಾಮಿಲಿ ಪ್ಯಾಕ್ ನಲ್ಲಿ ಒಂದಾಗಿದ್ದಾರೆ. ಸಿನಿಮಾಗೆ ಗುರುಕಿರಣ್ ಸಂಗೀತ ನೀಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp