ಮಾಲೂರು: ನಟ ಧ್ರುವ ಸರ್ಜಾ ನೋಡಲು ನೂಕುನುಗ್ಗಲು

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ. 
ಧ್ರುವ ಸರ್ಜಾ
ಧ್ರುವ ಸರ್ಜಾ

ಬೆಂಗಳೂರು/ಕೋಲಾರ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ. 
 
ಮಾಲೂರು ಪಟ್ಟಣದಲ್ಲಿ ಕೊಂಡಯ್ಯ ಹಾರ್ಡ್‌ ವೇರ್ ಮಳಿಗೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಆಗಮಿಸಿದ್ದ ವಿಷಯ ತಿಳಿದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸೆಲ್ಫಿಗೆ ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಸ್ಥಳಿಯ ಪೊಲೀಸರು ಹರಸಾಹಸಪಟ್ಟಿದ್ದು, ಲಾಠಿ ರುಚಿ ತೋರಿಸಿದ್ದಾರೆ. 
 
ಧ್ರುವ ಸರ್ಜಾ ಭೇಟಿ ಹಿನ್ನೆಲೆ ಕೋಲಾರ - ಹೊಸೂರು- ಬೆಂಗಳೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಹಾರ್ಡ್‌ ವೇರ್ ಮಳಿಗೆ ಉದ್ಘಾಟನೆ ಬಳಿಕ ಮಾತನಾಡಿದ ಧ್ರುವ ಸರ್ಜಾ, ''ಕೊರೋನಾ ಸಂದರ್ಭದಲ್ಲಿ ನಿಮ್ಮನ್ನು ಭೇಟಿ ಮಾಡಿಲ್ಲ, ಇಂದು ಇಷ್ಟು ಜನರನ್ನು ನೋಡಿದಕ್ಕೆ ಖುಷಿಯಾಗುತ್ತಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 
 
ಕೊರೋನಾ ನಿಯಮ ಉಲ್ಲಂಘನೆ
ಧ್ರುವ ಸರ್ಜಾ ಅವರನ್ನು ನೋಡಿದ ಖುಷಿಯಲ್ಲಿ ಜನರು ಕೊರೋನಾ ನಿಯಮವನ್ನು ಗಾಳಿಗೆ ತೂರಿರುವ ಘಟನೆ ನಡೆದಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ಅನೇಕರು ಮಾಸ್ಕ್ ಧರಿಸಿಲ್ಲ, ಮತ್ತೊಂದೆಡೆ ನಟ ಧ್ರುವ ಸರ್ಜಾ ಫೇಸ್ ಶೀಲ್ಡ್ ಹಾಕಿಕೊಂಡು ಬಂದರಾದರೂ ಸಹ ಮಾಸ್ಕ್ ಧರಿಸಿರಲಿಲ್ಲ. 
 
ಸದ್ಯ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com