ಹೊಸ ಗೆಟಪ್ ನಲ್ಲಿ ಧ್ರುವ ಸರ್ಜಾ: ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಆಕ್ಷನ್ ಫ್ರಿನ್ಸ್; ವಿಡಿಯೋ

 ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ 'ಪೊಗರು' ಚಿತ್ರದ ಶೂಟಿಂಗ್ ಮುಗಿದಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅವರ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ
ಧ್ರುವ ಸರ್ಜಾ
ಧ್ರುವ ಸರ್ಜಾ

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ 'ಪೊಗರು' ಚಿತ್ರದ ಶೂಟಿಂಗ್ ಮುಗಿದಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅವರ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಪೊಗರು ಸಿನಿಮಾದ ಪಾತ್ರಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ಉದ್ಧ ಕೂದಲು ಬಿಟ್ಟಿದ್ದ ಧ್ರುವ ಸರ್ಜಾ, ಇದೀಗ ಹೊಸ ಗೆಟಪ್ ನಲ್ಲಿ ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ.

ಅಷ್ಟು ವರ್ಷದಿಂದ ನಿರ್ವಹಣೆ ಮಾಡಿದ್ದ ಉದ್ಧ ಕೂದಲನ್ನು ಸುಮ್ಮನೆ ತೆಗೆದು ಹಾಕುವ ಬದಲು ಕ್ಯಾನ್ಸರ್ ರೋಗಿಗಳಿಗೆ ಧಾನ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಹೇರ್ ಕಟ್ಟಿಂಗ್ ಮಾಡಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಕ್ಯಾನ್ಸ್ ರ್ ಬಂದಿರುವ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕಿಮೋ ಥೆರಪಿ ಮಾಡಿದಾಗ ಸ್ವಲ್ಪ ಕೂದಲು ಹಾಳಾಗಿರುತ್ತದೆ. ಅಂಥವರಿಗಾಗಿ ವಿಗ್ ಮಾಡಿಸಿದಾಗ ನಾವು ನೈತಿಕವಾಗಿ ಬೆಂಬಲ ನೀಡುತ್ತೇವೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಮಾಡುತ್ತಿದ್ದು, ಎಲ್ಲರೂ ಈ ರೀತಿ ಮಾಡಿದರೆ ಎಷ್ಟೋ ಜನರಿಗೆ ಉಪಯೋಗ ಆಗಲಿದೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com