'ಗೆಳೆಯ', 'ಗುಲಾಮ'ದಂತಹ ಮತ್ತೊಂದು ಸಿನಿಮಾವಾಗಲಿದೆ 'ವೀರಂ': ಪ್ರಜ್ವಲ್ ದೇವರಾಜ್

ಲಾಕ್ ಡೌನ್ ನಂತರ ನಟ ಪ್ರಜ್ವಲ್ ದೇವರಾಜ್ ಬಾಕಿ ಉಳಿದಿದ್ದ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ನರಸಿಂಹ ನಿರ್ದೇಶನದ ಇನ್ಸ್ ಪೆಕ್ಟರ್ ವಿಕ್ರಂ  ಸಿನಿಮಾಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಡಿಸೆಂಬರ್ 6 ರಿಂದ ವೀರಂ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

Published: 23rd November 2020 12:28 PM  |   Last Updated: 23rd November 2020 12:33 PM   |  A+A-


Prajwal Devaraj

ಪ್ರಜ್ವಲ್ ದೇವರಾಜ್

Posted By : Shilpa D
Source : UNI

ಲಾಕ್ ಡೌನ್ ನಂತರ ನಟ ಪ್ರಜ್ವಲ್ ದೇವರಾಜ್ ಬಾಕಿ ಉಳಿದಿದ್ದ ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ನರಸಿಂಹ ನಿರ್ದೇಶನದ ಇನ್ಸ್ ಪೆಕ್ಟರ್ ವಿಕ್ರಂ  ಸಿನಿಮಾಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಡಿಸೆಂಬರ್ 6 ರಿಂದ ವೀರಂ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಖಾದರ್ ಕುಮಾರ್ ನಿರ್ದೇಶನದ ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹೊಸ  ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಮುಂದಿನ ಸಿನಿಮಾ ವೀರಂ ಬಗ್ಗೆ ತೀವ್ರ ಉತ್ಸುಕರಾಗಿರುವ ಪ್ರಜ್ವಲ್ ದೇವರಾಜ್, ಖಾದರ್ ಕುಮಾರ್ ಅವರ ಮೊದಲ ಸಿನಿಮಾ ಇದಾಗಿದೆ, ಆದರೆ ಅವರ ಬಗ್ಗೆ ನಾನು ತುಂಬಾ ಕೇಳಲ್ಪಟ್ಟಿದ್ದೇನೆ, ಕಥೆ ಕೇಳಿದಾಗ ನಾನು ತುಂಬಾ ಕೂತುಹಲದಿಂದಿದ್ದೆ, ನನ್ನ ಪಾತ್ರವನ್ನು ಹೇಗೆ ಸ್ಕೆಚ್ ಮಾಡಿದ್ದಾರೆಂದು ನಾನು ಕಾಯುತ್ತಿದ್ದೇನೆ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

ಗೆಳೆಯ ಮತ್ತು ಗುಲಾಮ ದಂತ ಸಿನಿಮಾಗಳನ್ನು ಯಾವಾಗ ಮಾಡುತ್ತೀರಿ ಎಂದು ಹಲವರು ನನ್ನನ್ನು ಕೇಳುತ್ತಿದ್ದರು, ಖಾದರ್ ಅವರ ವೀರಂ ಸಿನಿಮಾ ಅದೇ ರೀತಿ ಕಥೆ ಹೊಂದಿದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ, ಹಿರಿಯ ನಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, 2 ವಿಭಿನ್ನ ಶೇಡ್ ಗಳಲ್ಲಿ ಅಭಿನಿಸುತ್ತಿದ್ದಾರೆ.

ರಚಿತಾ ರಾಮ್ ಪ್ರಜ್ವಲ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ, ಇದೇ ಮೊದಲ ಬಾರಿಗೆ ರಚಿತಾ ಪ್ರಜ್ವಲ್ ಜೊತೆ ತೆರೆಯ ಮೇಲೆ ಜೋಡಿಯಾಗುತ್ತಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ಶೃತಿ ಕೂಡ ನಟಿಸಲಿದ್ದಾರೆ.

ಶೃತಿ ನನ್ನ ಸಹೋದರಿಯಾಗಿ ಮತ್ತು ಶ್ರೀನಗರ ಕಿಟ್ಟಿ ಸಹೋದರನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಿಟ್ಟಿ ಜೊತೆ ನಾನು ಇತ್ತೀಚೆಗೆ ಫೋಟೋ ಶೂಟ್ ನಡೆಸಿದ್ದೇನೆ,ನಮ್ಮಿಬ್ಬರ ಜೋಡಿಯನ್ನು ನೋಡಲು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಿದ್ದಾರೆ.

ದಿಶಾ ಎಂಟರ್ ಪ್ರೈಸಸ್ ಅಡಿಯಲ್ಲಿ ಕೆಎಂ ಶಶಿಧರ್ ಸಿನಿಮಾ ನಿರ್ಮಿಸುತ್ತಿದ್ದಾರೆ. 30 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು ಮೊದಲ ಹಂತದಲ್ಲಿ ಮೈಸೂರಿನಲ್ಲಿ ನಡೆಯಲಿದೆ, ವೀರಂ ಗೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ.ಇನ್ನೂ ಹಾಡುಗಳ ಶೂಟಿಂಗ್ ಗೆ  ವಿದೇಶಕ್ಕೆ ತೆರಳಲು ನಾನು ಸಿದ್ದವಿದ್ದೇನೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.
 

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp