ನಿರ್ಭಯಾ ಹತ್ಯೆ ಆಧಾರಿತ ವೆಬ್ ಸರಣಿ 'ಡೆಲ್ಲಿ ಕ್ರೈಂ' ಗೆ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ ಗರಿ

ನೆಟ್‌ಫ್ಲಿಕ್ಸ್ ವೆಬ್ ಸರಣಿ "ಡೆಲ್ಲಿ ಕ್ರೈಂ" ಸೋಮವಾರ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ 2020 ನ ಅತ್ಯುತ್ತಮ ಡ್ರಾಮಾ ಸೀರೀಸ್​ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

Published: 24th November 2020 12:25 PM  |   Last Updated: 24th November 2020 12:25 PM   |  A+A-


'ಡೆಲ್ಲಿ ಕ್ರೈಂ'

Posted By : Raghavendra Adiga
Source : Online Desk

ನೆಟ್‌ಫ್ಲಿಕ್ಸ್ ವೆಬ್ ಸರಣಿ "ಡೆಲ್ಲಿ ಕ್ರೈಂ" ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್ 2020 ನ ಅತ್ಯುತ್ತಮ ಡ್ರಾಮಾ ಸೀರೀಸ್​ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ರಿಚಿ ಮೆಹ್ತಾ ನಿರ್ದೇಶನದ "ಡೆಲ್ಲಿ ಕ್ರೈಂ", ಶೆಫಾಲಿ ಷಾ, ರಸಿಕಾ ದುಗಲ್, ಆದಿಲ್ ಹುಸೇನ್, ರಾಜೇಶ್ ತೈಲಾಂಗ್, ವಿನೋದ್ ಶೆರಾವತ್, ಡೆನ್ಜಿಲ್ ಸ್ಮಿತ್, ಗೋಪಾಲ್ ದತ್, ಯಶಸ್ವಿನಿ ದಯಾಮಾ ಮತ್ತು ಜಯ ಭಟ್ಟಾಚಾರ್ಯ ಮೊದಲಾದವರ ಅಭಿನಯದ ಒಂದು ಕಾಲ್ಪನಿಕ ಕ್ರೈಂ ಡ್ರಾಮಾ ಆಗಿದೆ. ಇದು 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಘಟನೆ ಆಧಾರಿತವಾಗಿದೆ.. 

ಪ್ರಶಸ್ತಿ ಬಂದಿರುವ ಬಗ್ಗೆ ವೆಬ್ ಸೀರೀಸ್ ನಿರ್ದೇಶಕ ಹಾಗೂ ಪ್ರಮುಖ ಪಾತ್ರಧಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ರಿಚಿ ಈ ಪ್ರಶಸ್ತಿಯನ್ನು ಸ್ವೀಕರಿಸಿವಾಗ ಸಂತ್ರಸ್ತೆ ಮತ್ತು ಅವಳ ತಾಯಿಗೆ ಗೌರವ ಸಲ್ಲಿಸಿದ್ದಾರೆ.

"ಡೆಲ್ಲಿ ಕ್ರೈಂ"  ಭಾರತದಿಂದ ಎಮ್ಮಿ ಪ್ರಶಸ್ತಿ ಪಡೆದ ಮೊದಲ ಕಾರ್ಯಕ್ರಮವಾಗಿದೆ.ಮಾರ್ಚ್ 2019 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಈ ಸರಣಿ ಬಿಡುಗಡೆಯಾಗಿತ್ತು.

ಇದಲ್ಲದೆ ಕಾಮಿಡಿ ಸೀರೀಸ್​ ವಿಭಾಗದಲ್ಲಿ ಅಮೇಜಾನ್​ ಪ್ರೈಂನ ಫೋರ್​ ಮೋರ್ ಶಾಟ್ಸ್​ ಪ್ಲೀಸ್​ ಶೋ,  ಅತ್ಯುತ್ತಮ ನಟ ವಿಭಾಗಕ್ಕಾಗಿ ಮೇಡ್ ಇನ್ ಹೆವೆನ್ ಸೀರೀಸ್​ಗಾಗಿ ನಟ ಅರ್ಜುನ್ ಮಾಥುರ್ ಹೆಸರು ನಾಮನಿರ್ದೇಶನವಾಗಿತ್ತು. ಆದರೆ ಈ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಕೈತಪ್ಪಿದೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp