ಡಿಸೆಂಬರ್ 1ರಿಂದ ಬೆಂಗಳೂರಿನಲ್ಲಿ 'ಮದಗಜ' ಚಿತ್ರೀಕರಣ
"ಮದಗಜ"ತಂಡವು ಅಕ್ಟೋಬರ್‌ನಲ್ಲಿ ಎರಡನೇ ಶೆಡ್ಯೂಲ್ ಪೂರ್ಣಗೊಳಿಸಿತ್ತು, ಮತ್ತು ಇದೀಗ ಅವರು ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ.
Published: 24th November 2020 11:18 AM | Last Updated: 24th November 2020 12:17 PM | A+A A-

ಶ್ರೀಮುರಳಿ
"ಮದಗಜ"ತಂಡವು ಅಕ್ಟೋಬರ್‌ನಲ್ಲಿ ಎರಡನೇ ಶೆಡ್ಯೂಲ್ ಪೂರ್ಣಗೊಳಿಸಿತ್ತು, ಮತ್ತು ಇದೀಗ ಅವರು ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ಫ್ಯಾಮಿಲಿ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಶ್ರೀಮುರಳಿ ನಾಯಕರಾಗಿದ್ದು, ನಿರ್ದೇಶಕ ಮಹೇಶ್ ಕುಮಾರ್ ಪ್ರಮುಖ ಆಕ್ಷನ್ ಬ್ಲಾಕ್ ಸನ್ನಿವೇಶಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ. ಇದಕ್ಕಾಗಿ ತಂಡವುಚ್‌ಎಂಟಿ ಕಾರ್ಖಾನೆ ಮತ್ತು ಮಿನರ್ವಾ ಮಿಲ್ಸ್‌ನಲ್ಲಿ ಭಾರಿ ಪ್ರಮಾಣದ ಸೆಟ್ ಹಾಕಿದೆ.
ಚಿತ್ರವನ್ನು ರಾಬರ್ಟ್ ನಿರ್ಮಾಪಕ ಉಮಾಪತಿ ಎಸ್ ಗೌಡ ನಿರ್ಮಿಸಿದ್ದು, ಅವರು ಮೊದಲ ಬಾರಿಗೆ ನಟ ಮತ್ತು ನಿರ್ದೇಶಕರೊಂದಿಗೆ ಕೈಜೋಡಿಸಿದ್ದಾರೆ. "ಅಯೋಗ್ಯ" ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಮಹೇಶ್ ಅವರ ಎರಡನೇ ಚಿತ್ರ "ಮದಗಜ" ಚಿತ್ರದ ಶೂಟಿಂಗ್ ವಾರಣಾಸಿಯಲ್ಲಿ ಪ್ರಾರಂಭವಾಗಿತ್ತು.ಅಲ್ಲಿ ಕೆಲವು ನಿರ್ಣಾಯಕ ಭಾಗಗಳನ್ನು ಚಿತ್ರೀಕರಿಸಲಾಗಿದ್ದು ಇದಾಗಲೇ ಚಿತ್ರದ . ಶೇಕಡಾ 60 ರಷ್ಟು ಶೂಟಿಂಗ್ ಮುಗಿದಿದೆ.
"ಮದಗಜ"ದಲ್ಲಿ ಶ್ರೀಮುರಳಿ ಎದುರಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದು ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಜಗಪತಿ ಬಾಬು ಪ್ರಮುಖ ವಿಲನ್ ಆಗಿದ್ದು ನಟ ದೇವಯಾನಿ ಈ ಚಿತ್ರದೊಂದಿಗೆ 20 ವರ್ಷಗಳ ಗ್ಯಾಪ್ ನಂತರ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
ನವೀನ್ ಕುಮಾರ್ ಅವರ ಛಾಯಾಗ್ರಹಣ, ರವಿ ಬಸೂರ್ ಸಂಗೀತ ಚಿತ್ರಕ್ಕಿದೆ. ಚಿತ್ರ ನಾಲ್ಕು ಹಾಡನ್ನು ಒಳಗೊಂಡಿದ್ದು ಎರಡು ಹಾಡುಗಳಿಗೆ ಸಾಹಿತ್ಯವನ್ನು ಚೇತನ್ ಕುಮಾರ್ ಬರೆದಿದ್ದರೆ, ಉಳಿದ ಎರಡು ಹಾಡುಗಳನ್ನು ರವಿ ಬಸ್ರೂರ್ ಮತ್ತು ಕಿನ್ನಾಳ್ ರಾಜ್ ಬರೆದಿದ್ದಾರೆ.