ಮಲಯಾಳಂ ಚಿತ್ರ 'ಜಲ್ಲಿಕಟ್ಟು' ಆಸ್ಕರ್ ಸ್ಪರ್ಧೆಗೆ ಆಯ್ಕೆ!
ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಚಿತ್ರ "ಜಲ್ಲಿಕಟ್ಟು" ಪ್ರತಿಷ್ಠಿತ ಆಸ್ಕರ್ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಪ್ರಕಟಿಸಿದೆ.
Published: 25th November 2020 04:18 PM | Last Updated: 25th November 2020 05:23 PM | A+A A-

ಜಲ್ಲಿಕಟ್ಟು ಚಿತ್ರದ ದೃಶ್ಯ
ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಚಿತ್ರ "ಜಲ್ಲಿಕಟ್ಟು" ಪ್ರತಿಷ್ಠಿತ ಆಸ್ಕರ್ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಪ್ರಕಟಿಸಿದೆ.
ಹಿಂದಿ, ಒಡಿಯಾ, ಮರಾಠಿ ಮತ್ತು ಇತರ ಭಾಷೆಗಳ 27 ಚಿತ್ರಗಳ ಪೈಕಿ ಸರ್ವಾನುಮತದಿಂದ ಆರಿಸಲ್ಪಟ್ಟ ಈ ಚಿತ್ರವು ಗುಡ್ಡಗಾಡು ಪ್ರದೇಶದ ದೂರದ ಹಳ್ಳಿಯ ಕಸಾಯಿಖಾನೆಯಿಂದ ತಪ್ಪಿಸಿಕೊಳ್ಳುವ ಗೂಳಿಯ ಸುತ್ತ ಕೇಂದ್ರೀಕರಿಸಿದೆ. ಅಲ್ಲದೆ ಇಡೀ ಹಳ್ಳಿಯ ಪುರುಷರು ಪ್ರಾಣಿಗಳನ್ನು ಬೇಟೆಯಾಡಲು ಒಂದಾಗುತ್ತಾರೆ.
"ಜಲ್ಲಿಕಟ್ಟು" ಹರೀಶ್ ಅವರ "ಮಾವೋಯಿಸ್ಟ್" ಎಂಬ ಸಣ್ಣ ಕಥೆಯನ್ನು ಆಧರಿಸಿದೆ ಮತ್ತು ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮೊನ್ ಅಬ್ದುಸಮದ್ ಮತ್ತು ಸಂತಿ ಬಾಲಚಂದ್ರನ್ ಅಭಿನಯವಿದೆ.
"ಹಿಂದಿ, ಮಲಯಾಳಂ, ಒರಿಯಾ ಮತ್ತು ಮರಾಠಿಯಿಂದ ಒಟ್ಟು 27 ಚಿತ್ರಗಳು ನಾಮನಿರ್ದೇಶನದ ಪಟ್ಟಿಯಲ್ಲಿದ್ದವು. ಅದರಲ್ಲಿ ತೀರ್ಪುಗಾರರಿಂದ ನಾಮನಿರ್ದೇಶನಗೊಂಡಿರುವ ಚಿತ್ರ ಮಲಯಾಳಂನ 'ಜಲ್ಲಿಕಟ್ಟು'.
"ಜಲ್ಲಿಕಟ್ಟು"ಸೆಪ್ಟೆಂಬರ್ 6, 2019 ರಂದು 2019 ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನ ಕಂಡಿತ್ತು.
ಕಳೆದ ವರ್ಷ ನಡೆದ ಭಾರತದ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರ್ದ ನಿರ್ದೇಶಕ ಪೆಲ್ಲಿಸ್ಸೇರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದರು.
2019 ರಲ್ಲಿ, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಜೊಯಾ ಅಖ್ತರ್ ಅವರ "ಗಲ್ಲಿ ಬಾಯ್", ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿತ್ತು.