ನೆಗೆಟಿವ್ ಕಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಅಭಿಪ್ರಾಯ ಭಯವಿಲ್ಲದೆ ಮುಂದುವರೆಯುತ್ತದೆ: ನಟ ಜಗ್ಗೇಶ್
ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.
Published: 27th November 2020 10:39 AM | Last Updated: 27th November 2020 10:39 AM | A+A A-

ನಟ ಜಗ್ಗೇಶ್
ನವರಸನಾಯಕ ಜಗ್ಗೇಶ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ತಮ್ಮ ಸಿನಿಪಯಣದ ಆರಂಭದ ದಿನಗಳು, ನಂತರ ಚಿತ್ರರಂಗದಲ್ಲಿ ಬೆಳೆದದ್ದು, ಸಹಾಯ, ಸಹಕಾರ ನೀಡಿದ ಕಲಾವಿದರು, ವೈಯಕ್ತಿಕ ಜೀವನ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದರು.
ಪ್ಯಾನ್ ಇಂಡಿಯಾ ಸಿನೆಮಾ ಕನ್ನಡ ಚಿತ್ರರಂಗಕ್ಕೆ, ಇಲ್ಲಿನ ಕಲಾವಿದರ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಜಗ್ಗೇಶ್ ಹೇಳಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬಂದಿದ್ದವು. ಇದಕ್ಕೆ ಟ್ವೀಟ್ ಮೂಲಕ ಉತ್ತರಿಸಿರುವ ಜಗ್ಗೇಶ್, ನನ್ನ ನೇರಮಾತುಗಳನ್ನು ಹಿಂದಿನಿಂದಲೂ ಹಲವರು ವಿರೋಧಿಸಿಕೊಂಡು ಬಂದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸುಮ್ಮಸುಮ್ಮನೆ ಕಮೆಂಟ್ ಮಾಡುತ್ತಾ ಹೋಗುತ್ತಾರೆ. ಅಂತೂ ನಾನು ಜನರ ಬಾಯಲ್ಲಿ, ಮನದಲ್ಲಿ ಮಾತನಾಡಿಕೊಳ್ಳುವಂತವನಾದೆನಲ್ಲಾ, ಒಂದು ದಿನದ ಮಟ್ಟಿಗಾದರೂ ಬಳಕೆಯಾದೆನಲ್ಲಾ ಅದೇ ಸಂತೋಷ ಎಂದಿದ್ದಾರೆ.
ನನ್ನ ಬಗ್ಗೆ ಬಂದಿರುವ ನೆಗೆಟಿವ್ ಮಾತುಗಳಿಂದ ನಾನು ಕುಗ್ಗುವುದಿಲ್ಲ. ಅವರು ಅವರ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಭಯವಿಲ್ಲದೆ ಮುಂದುವರಿಸುತ್ತೇನೆ, ಸೋಷಿಯಲ್ ಮೀಡಿಯಾ, ಟಿವಿ ಹುಟ್ಟೋಕ್ ಮುಂಚೆ ಬಂದವನು ನಾನು, ಈಗ ಸಿನಿಮಾನಟ ಆಗುತ್ತಿದ್ದಂತೆ ಮೀಡಿಯಾ ನಿರ್ವಹಣೆ ತಂಡ ಎಂದು ಇಟ್ಟುಕೊಳ್ಳುತ್ತಾರೆ, ಅವರವರ ಬಗ್ಗೆ ಅವರೇ ಬರೆದುಕೊಳ್ಳುತ್ತಾರೆ, ಯುವಜನತೆ ಅದನ್ನೇ ನಂಬುತ್ತಾರೆ, ಅದರಲ್ಲೇ ಜೀವಿಸುತ್ತಾರೆ, ಒಳಗಿರುವ ನಮಗೆ ಗೊತ್ತು, ಹೊರಗಿರುವ ಅಮಾಯಕರಿಗೆ ಇದು ಗೊತ್ತಾಗುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.
ನಿಮ್ಮ ಪ್ರತಿಭೆಗೆ ಯಾರು ಏಕೆ ಬೇಕು!ನಿಮಗಾದ ಅವಮಾನ ನಾನು ಕಂಡಿಸುವೆ ಹಾಗು ಪ್ರಚಾರಕರ ಗಮನಕ್ಕು ತರುವೆ!
— ನವರಸನಾಯಕ ಜಗ್ಗೇಶ್ (@Jaggesh2) November 26, 2020
ಕೆಲವೊಮ್ಮೆ ನನ್ನ ನೇರಮಾತು
ಹಿಂದಿನಿಂದ ವಿರೋಧಿಸಿದವರಿಗೆ ಹಬ್ಬದಂತೆ!ಶುರು ಒಬ್ಬರಾದರೆ ಮುಂದುವರಿಸುವವರು ಸಂಬಂಧವಿಲ್ಲದ ಅನೇಕರು!
ಒಟ್ಟಿನಲ್ಲಿ ಒಂದು ದಿನಕ್ಕಾದರು ನಾನು ಬಳಕೆಯಾದನೆ?ಸಂತೋಷ!ನನ್ನ ಅಭಿಪ್ರಾಯ ಭಯವಿಲ್ಲದೆ ಮುಂದುವರೆಯುತ್ತದೆ