ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ ರಾಗಿಣಿ ದ್ವಿವೇದಿ
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಗಳಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜಾಮೀನಿಗಾಗಿ ವಿಧ ವಿಧದಲ್ಲಿ ಪ್ರಯತ್ನ ನಡೆಸಿದ್ದರೂ ಇದುವರೆಗೂ ಯಶ ಕಂಡಿಲ್ಲ, ಇದೇ ಕಾರಣದಿಂದ ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
Published: 28th November 2020 05:29 PM | Last Updated: 28th November 2020 05:29 PM | A+A A-

ರಾಗಿಣಿ ದ್ವಿವೇದಿ
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಗಳಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜಾಮೀನಿಗಾಗಿ ವಿಧ ವಿಧದಲ್ಲಿ ಪ್ರಯತ್ನ ನಡೆಸಿದ್ದರೂ ಇದುವರೆಗೂ ಯಶ ಕಂಡಿಲ್ಲ, ಇದೇ ಕಾರಣದಿಂದ ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಕಂಬಿಗಳ ಹಿಂದೆ ಸೆರೆಯಾಗಿರುವ ನಟಿ ರಾಗಿಣಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹರಾ ಜೈಲು ಸೇರಿದ್ದ ನಟಿ ರಾಗಿಣಿಗೆ ನವೆಂಬರ್ 3ರಂದು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಸಧ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಗಿಣಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಆ ಕುರಿತ ಅರ್ಜಿ ವಿಚಾರಣೆ ಡಿಸೆಂಬರ್ 4ರಂದು ನಡೆಯಲಿದೆ ಎನ್ನಲಾಗಿದೆ.
ಈ ನಡುವೆ ಡ್ರಗ್ಸ್ ಆರೋಪದಡಿ ಸೆರೆಯಾಗಿರುವ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ಸಹ ತಮಗೆ ಜಾಮೀನು ನೀಡುವಂತೆ ಮತ್ತೊಮ್ಮೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.