ದರ್ಶನ್ 'ರಾಬರ್ಟ್' ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್!

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ನಾಯಕನಾಗಿರುವ "ರಾಬರ್ಟ್" ಈಗಾಗಲೇ ಆಡಿಯೋ, ಡಿಜಿಟಲ್ ಮತ್ತು ಸ್ಯಾಟಲೈಟ್ಹ ಹಕ್ಕುಗಳ ಮೂಲಕ ದೊಡ್ಡ ಪ್ರಿ ರಿಲೀಸ್ ವ್ಯವಹಾರ ನಡೆಸಿದೆ.
ದರ್ಶನ್ 'ರಾಬರ್ಟ್' ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ ಭಾರೀ ಡಿಮ್ಯಾಂಡ್!

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ನಾಯಕನಾಗಿರುವ "ರಾಬರ್ಟ್" ಈಗಾಗಲೇ ಆಡಿಯೋ, ಡಿಜಿಟಲ್ ಮತ್ತು ಸ್ಯಾಟಲೈಟ್ಹ ಹಕ್ಕುಗಳ ಮೂಲಕ ದೊಡ್ಡ ಪ್ರಿ ರಿಲೀಸ್ ವ್ಯವಹಾರ ನಡೆಸಿದೆ. ಇದೀಗ ಬಂದಿರುವ ಸುದ್ದಿಯಂತೆ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ, ಇದಕ್ಕಾಗಿ ನಿಡಿರುವ ಬೆಲೆ ರೂಪಾಯಿಗಳಲ್ಲಿ ಒಂಬತ್ತು ಅಂಕಿಗಳನ್ನು ತಲುಪಿದೆ ಎಂದು ಹೇಳಲಾಗಿದೆ. ದರ್ಶನ್ ಅಭಿನಯದ ಚಿತ್ರಗಳಿಗೆ ಹಿಂದಿ ಚಿತ್ರರಂಗದಲ್ಲಿ ಯಾವಾಗಲೂ ಉತ್ತಮ ಬೇಡಿಕೆಯಿದೆ. ಆದರೆ, ಚಿತ್ರವನ್ನು ವಿತರಿಸುತ್ತಿರುವ ನಿರ್ಮಾಪಕ ಉಮಾಪತಿ ಎಸ್ ಗೌಡ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

"ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಲು ಉತ್ಸುಕರಾಗಿರುವ ಪ್ರೊಡಕ್ಷನ್ ಹೌಸ್ ಗಳ ಎನ್ಕ್ವೈರಿಗಳಿಂದ ನಮಗೆ ಬಹುದೊಡ್ಡ ಆಫರ್ ಗಳು ಬಂದಿದೆ ಆದರೆ ನಾನಿನ್ನೂ ಅಂತಿಮ ತೀರ್ಮಾನ ಮಾಡಿಲ್ಲ" ಒಮ್ಮೆ ಒಪ್ಪಂದ ಮುಗಿದಾಗ ವಿವರ ಬಹಿರಂಗವಾಗಲಿದೆ.

ಚಾಲೆಂಜಿಂಗ್ ಸ್ಟಾರ್ ಜೊತೆಗೆ, ಎಮೋಷನ್ ಹಾಗೂ ಫ್ಯಾಮಿಲಿ ಡ್ರಾಮಾ ಅಂಶಗಳನ್ನು ಹೊಂದಿರುವ ಆಕ್ಷನ್ ಎಂಟರ್ಟೈನರ್ ದೊಡ್ಡ ಪಾತ್ರವರ್ಗವನ್ನು ಒಳಗೊಂಡಿದೆ. ಆಶಾ ಭಟ್ ನಾಯಕುಯಾಗಿದ್ದರೆ ಈ ಚಿತ್ರದಲ್ಲಿ ಮೊದಲ ಬಾರಿಗೆ ದರ್ಶನ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವ ಜಗಪತಿ ಬಾಬು ಮತ್ತು ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ಶಿವರಾಜ್ ಕೆ ಆರ್ ಪೀಟ್ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದರೆ, ಡಿಒಪಿ ಸುಧಾಕರ್ ಎಸ್ ರಾಜ್ ಕ್ಯಾಮೆರಾ ವರ್ಕ್ ಅನ್ನು ನಿರ್ವಹಿಸಿದ್ದಾರೆ.

ಈ ಹಿಂದೆ ಏಪ್ರಿಲ್ 9 ರಂದು ತೆರೆಕಾಣಲಿದೆ ಎನ್ನಲಾಗಿದ್ದ ಚಿತ್ರ ಸಾಂಕ್ರಾಮಿಕದ ಕಾರಣ ಮುಂದೂಡಿಕೆಯಾಗಿದೆ. ಕ್ರಿಸ್‌ಮಸ್ ಬಿಡುಗಡೆಗೆ ನಿರೀಕ್ಷಿಸುತ್ತಿರುವ ದರ್ಶ್ನ ಅಭಿಮಾನಿಗಳಿಗೆ  ನಿರ್ಮಾಣ ಸಂಸ್ಥೆ ಮತ್ತೆ ನಿರಾಶೆ ಮಾಡಿದ್ದು ಈ ವರ್ಷ "ರಾಬರ್ಟ್" ದರ್ಶನವಿಲ್ಲ ಎಂದಿದೆ. ಚಿತ್ರಮಂದಿರಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರುವಂತಾದ ನಂತರ ಚಿತ್ರ ಬಿಡುಗಡೆ ಎಂದು ಸಂಸ್ಥೆ ಸ್ಪಷ್ತಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com