ಬಿಹಾರ ಚಾಲಕನ ಮಗ ನಿರ್ಮಿಸಿದ 'ದಿ ಮಾಸ್ಕ್' ಕೊರೋನಾ ಕಿರುಚಿತ್ರೋತ್ಸವಕ್ಕೆ ಆಯ್ಕೆ!

ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಕೊರೋನಾ ಕಿರುಚಿತ್ರೋತ್ಸವಕ್ಕೆ 15 ವರ್ಷದ ಸಂತ ಕುಮಾರ್ ನಿರ್ಮಿಸಿರುವ ‘ದಿ ಮಾಸ್ಕ್’ ಎಂಬ ಮೂರು ನಿಮಿಷಗಳ ಮಕ್ಕಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಸಂತು ಕುಮಾರ್
ಸಂತು ಕುಮಾರ್

ಪಾಟ್ನಾ: ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಕೊರೋನಾ ಕಿರುಚಿತ್ರೋತ್ಸವಕ್ಕೆ 15 ವರ್ಷದ ಸಂತ ಕುಮಾರ್ ನಿರ್ಮಿಸಿರುವ ‘ದಿ ಮಾಸ್ಕ್’ ಎಂಬ ಮೂರು ನಿಮಿಷಗಳ ಮಕ್ಕಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

ಡಿಸೆಂಬರ್ ನಲ್ಲಿ ಅಂತಾರಾಷ್ಟ್ರೀಯ ಕೊರೋನಾ ಕಿರುಚಿತ್ರೋತ್ಸವ ನಡೆಯಲಿದೆ. ಪಾಟ್ನಾ ಮೂಲದ ಚಾಲಕನ ಮಗ ಸಂತು, ಬಡ ಕುಟುಂಬಗಳ ಮಕ್ಕಳಲ್ಲಿನ ಸೃಜನಶೀಲತೆಯನ್ನು ಅನ್ವೇಷಿಸಲು 2008ರಲ್ಲಿ ಶಿಕ್ಷಣ ಇಲಾಖೆ ಸ್ಥಾಪಿಸಲ್ಪಟ್ಟಿದ್ದ 'ಕಿಲ್ಕಾರಿ' ಎಂಬ ಇತರ ಮಕ್ಕಳ ಸಹಾಯದಿಂದ ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ. 

ಖ್ಯಾತ ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ಕಿಲ್ಕರಿಯ ನಿರ್ದೇಶಕ ಡಾ. ಜ್ಯೋತಿ ಪರಿಹಾರ್ ಅವರು "ಪಾಟ್ನಾದಲ್ಲಿ ಶಿಕ್ಷಣ ಇಲಾಖೆಯಿಂದ 2008ರಲ್ಲಿ ಸ್ಥಾಪಿಸಲಾದ ಕಿಲ್ಕಾರಿ, ಮಕ್ಕಳಲ್ಲಿನ ಸೃಜನಶೀಲತೆಯನ್ನು ಬೆಳೆಸಲು, ಸಹಾಯ ಮಾಡಲು ಸವಲತ್ತು ಮತ್ತು ಬಡ ವರ್ಗದ ಮಕ್ಕಳಿಗೆ ಸಮರ್ಪಿಸಲಾಗಿದೆ ಎಂದರು. 

'ದಿ ಮಾಸ್ಕ್' ಎಂಬ ಕಿರುಚಿತ್ರವನ್ನು ಸಂತ ಕುಮಾರ್ ನಿರ್ದೇಶಿಸಿದ್ದು ಚಿತ್ರಕಥೆ ಬರೆದಿದ್ದರು. ಕಿಲ್ಕರಿಯ ಇತರ ಮಕ್ಕಳಾದ ಸ್ಯಾಂಟಿ ಕುಮಾರ್, ರಾಹುಲ್ ಕುಮಾರ್, ಜೀತು ಕುಮಾರ್, ಮತ್ತು ರಾಹುಲ್ ರಾಜ್ ಗುಪ್ತಾ ಜೊತೆಗೂಡಿ ಕಿರುಚಿತ್ರವನ್ನು ನಿರ್ದೇಶಿಸಿದ್ದರು.

"ಈ ಚಿತ್ರದಲ್ಲಿ, ನಾವು ನಮ್ಮ ಕೆಲಸವನ್ನು ಕಳೆದುಕೊಂಡರೆ, ಮುಂದೆ ನಾವು ಹೇಗೆ ಸ್ವಾವಲಂಬಿಗಳಾಗಬಹುದು ಎಂದು ತೋರಿಸಲಾಗಿದೆ ಎಂದು ಡಾ. ಜ್ಯೋತಿ ಪರಿಹಾರ್ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸಂತ ಕುಮಾರ್ ಅವರು, ಕಿಲ್ಕರಿಯ ಐದು ಮಕ್ಕಳಿಂದ ಸಹಾಯದೊಂದಿಗೆ ಸಾಂಕ್ರಾಮಿಕ ಸಮಯದಲ್ಲಿ ಮುಖವಾಡ ಧರಿಸುವುದರ ಮಹತ್ವದ ಕುರಿತು ಐದು ದಿನಗಳಲ್ಲಿ ಕಿರುಚಿತ್ರ ಮಾಡಿದ್ದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com