ಪ್ಯಾನ್-ಇಂಡಿಯಾ ಬಿಡುಗಡೆ ಕಾಣಲಿರುವ ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್'
ನಿರ್ದೇಶಕ ಅನೂಪ್ ಭಂಡಾರಿಯವ್ರ "ಫ್ಯಾಂಟಮ್" ಚಿತ್ರೀಕರಣ ಇದಾಗಲೇ ಶೇ. 70ರಷ್ಟು ಪೂರ್ಣವಾಗಿದೆ. ಸುದೀಪ್-ನಟಿಸಿದ ಆಕ್ಷನ್ ಅಡ್ವೆಂಚರ್ ಡ್ರಾಮಾ ಪ್ಯಾನ್-ಇಂಡಿಯಾ ಚಿತ್ರವಾಗುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.
Published: 30th November 2020 11:22 AM | Last Updated: 30th November 2020 01:57 PM | A+A A-

ಸುದೀಪ್
ನಿರ್ದೇಶಕ ಅನೂಪ್ ಭಂಡಾರಿಯವ್ರ "ಫ್ಯಾಂಟಮ್" ಚಿತ್ರೀಕರಣ ಇದಾಗಲೇ ಶೇ.70ರಷ್ಟು ಪೂರ್ಣವಾಗಿದೆ. ಸುದೀಪ್-ನಟಿಸಿದ ಆಕ್ಷನ್ ಅಡ್ವೆಂಚರ್ ಡ್ರಾಮಾ ಪ್ಯಾನ್-ಇಂಡಿಯಾ ಚಿತ್ರವಾಗುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ದೇಶಾದ್ಯಂತ ಸುದೀಪ್ ಅಭಿಮಾನಿಗಳಿರುವುದು ಇದರ ಹಿಂದಿನ ಶಕ್ತಿಯಾಗಿದೆ. ಅಲ್ಲದೆ ಚಿತ್ರಕಥೆ ಸಾರ್ವಕಾಲಿಕ ವಸ್ತುವನ್ನು ಒಳಗೊಂಡಿದೆ. ಭಾರಿ ಬಜೆಟ್ ನೊಂದಿಗೆ ಚಿತ್ರೀಕರಣದಲ್ಲಿರುವ "ಪ್ಯಾಂಟಮ್". ಶಾಲಿನಿ ಆರ್ಟ್ಸ್‌ನ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಗೌಡ ನಿರ್ಮಾಣದ ಚಿತ್ರವಾಗಿದೆ.
ಕೊರೋನಾ ಸಾಂಕ್ರಾಮಿಕದ ನಡುವೆ ಜೂನ್ ನಲ್ಲಿ ಸೆಟ್ಟೇರಿದ ಮೊದಲ ಚಿತ್ರದಲ್ಲಿ "ಫ್ಯಾಂಟಮ್" ಒಂದಾಗಿದೆ. ಅಂದಿನಿಂದ ತಂಡವು ತನ್ನ ಯೋಜನೆಗಳನ್ನು ಸಮಯಕ್ಕೆ ತಕ್ಕಂತೆ ಕಾರ್ಯಗತಗೊಳಿಸಿದೆ. ಪ್ಯಾನ್-ಇಂಡಿಯಾ ಬಿಡುಗಡೆಯ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ ಆದರೆ ಪತ್ರಿಕೆಗೆ ಈ ಬಗ್ಗೆ ಖಚಿತ ಮೂಲಗಳಿಂಡ ಮಾಹಿತಿ ಲಭಿಸಿದೆ.
"ಪೈಲ್ವಾನ್" ನಂತರ ಸುದೀಪ್ ಅವರ ಎರಡನೆಯ ಚಿತ್ರ ಇದಾಗಿದೆ. ಪ್ರಸ್ತುತ ತಂಡಮುಂದಿನ ಶೂಟಿಂಗ್ ವೇಳಾಪಟ್ಟಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ನಿಗದಿ ಪಡಿಸಿದ್ದು ಕೇರಳದಲ್ಲಿ ಶೂಟಿಂಗ್ ಪ್ರಾರಂಭಿಸಲು ತೀರ್ಮಾನಿಸಿದೆ. ಆ ನಂತರ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ವಿಕ್ರಾಂತ್ ರೋಣಾ ಎಂಬ ಬ ಪೊಲೀಸ್ ಅಧಿಕಾರಿಯಾಗಿ ಸುದೀಪ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಚಿತ್ರದ ಪ್ರಮುಖಾ ತಾರಾ ಬಳಗದಲ್ಲಿದ್ದಾರೆ.
ಇನ್ನು ಚಿತ್ರದಲ್ಲಿನ ವಿಶೇಷ ಹಾಡಿಗಾಗಿ ಕತ್ರಿನಾ ಕೈಫ್ ಅಥವಾ ನೋರಾ ಫತೇಹಿ ಅವರನ್ನು ಕರೆತರಲು ಮಾತುಕತೆ ನಡೆದಿದೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ ದೇಶಾದ್ಯಂತದ ಸುದೀಪ್ ಅವರ ಜನಪ್ರಿಯತೆ, ಅನೂಪ್ ಭಂಡಾರಿ ಅವರ ಕಥೆಯೊಂದಿಗೆ ಸಾರ್ವತ್ರಿಕ ಆಕರ್ಷಣೆಯ ಕಥಾವಸ್ತುವನ್ನು ಒಳಗೊಂಡಿದೆ, ಈ ಚಿತ್ರವು ಎಲ್ಲಾ ಬಾಗಗಳ ವೀಕ್ಷಕರನ್ನು ಆಕರ್ಷಿಸುವುದು ಖಚಿತವೆಂದು ಹೇಳಲಾಗಿದೆ.